ಕುರ್ಕಾಲು : ಕಾಪು ವಿ.ಸಭಾ ಕ್ಷೇತ್ರದ ಪಿಂಕ್ ಮತಗಟ್ಟೆ ಇಲ್ಲಿದೆ
Team Udayavani, May 8, 2018, 7:15 AM IST
ಕಟಪಾಡಿ: ಕಾಪು ವಿಧಾನ ಸಭಾ ಕ್ಷೇತ್ರದ ಏಕೈಕ ಮಹಿಳಾ ಅಧಿಕಾರಿಗಳನ್ನೊಳಗೊಳ್ಳಲಿರುವ ಪಿಂಕ್ ಮತಗಟ್ಟೆ ಕುರ್ಕಾಲು ಗ್ರಾಮ ಪಂಚಾಯತ್ ಕಚೇರಿಯ ಕಟ್ಟಡದಲ್ಲಿದೆ.
ಭಾಗ ಸಂಖ್ಯೆ 94 ರಲ್ಲಿ 4 ಮತ್ತು 5ನೇ ವಾರ್ಡು ಮತದಾರರಿಗೆ ನೂತನವಾಗಿ ಮಹಿಳಾ ಅಧಿಕಾರಿಗಳೇ ನಿಭಾಯಿಸುವ ಮತಗಟ್ಟೆಯಲ್ಲಿ ಮತದಾನದ ಈ ಅವಕಾಶ ಸಿಗುತ್ತಿದೆ. ಈ ಮತ ಗಟ್ಟೆಯಲ್ಲಿ 648 ಮಹಿಳಾ ಮತದಾರರು ಮತ್ತು 554 ಪುರುಷ ಮತದಾರರ ಸಹಿತ 1202 ಮತದಾರರು ಮತದಾನ ಮಾಡಲು ವಿಶೇಷವಾಗಿ ಪಿಂಕ್ ಬೂತ್ ಸಿದ್ಧಗೊಳ್ಳಲಿದೆ.ಮತದಾನ ಪ್ರಕ್ರಿಯೆಯಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಪ್ರತಿ ವಿ.ಸ. ಕ್ಷೇತ್ರದಲ್ಲಿ ಪಿಂಕ್ ಬೂತ್‌ಪ್ರಯೋಗ ಪ್ರಥಮ ಬಾರಿಗೆ ಕಾಣಲಿದ್ದೇವೆ.
ಪಿಂಕ್ ಬಣ್ಣ ಬಳಿದ ಮತಗಟ್ಟೆ, ಪರಿಕರ ಸೇರಿದಂತೆ, ಪಿಂಕ್ ಶೇಡ್ ಇರುವ ವಸ್ತ್ರವನ್ನು ಧರಿಸಿದ ಮಹಿಳಾ ಅಧಿಕಾರಿಗಳು, ಮಹಿಳಾ ಪೊಲೀಸರು ಮತಗಟ್ಟೆಯ ನಿರ್ವಹಣೆ ಮಾಡುತ್ತಾರೆ. ಆದರೊಂದಿಗೆ ಪಿಂಕ್ ಅಲಂಕಾರದ ಮೂಲಕ ಮತಗಟ್ಟೆಯನ್ನು ಆಕರ್ಷಣೀಯವಾಗಿ ಸಿದ್ದ ಗೊಳಿಸಲಾಗುತ್ತಿದೆ.
ಬೇಬಿಕೇರ್ ಸೌಲಭ್ಯ
ಮಹಿಳೆಯರೂ ಹೆಚ್ಚು ಮತದಾನದಲ್ಲಿ ಪಾಲ್ಗೊಳ್ಳಬೇಕು. ಲಿಂಗ ತಾರತಮ್ಯವನ್ನು ಹೋಗಲಾಡಿಸುವಲ್ಲಿ ಈ ಪಿಂಕ್ ಮತಗಟ್ಟೆ ನೂತನ ಪ್ರಯೋಗವಾಗಿದೆ. ಇದು ಪ್ರಯೋಗ ಯಶಸ್ವಿಯಾಗಲಿದೆ. ಇಲ್ಲಿ ಮತದಾನಕ್ಕೆ ಮಕ್ಕಳೊಂದಿಗೆ ಆಗಮಿಸುವ ಮತದಾರರ ಮಕ್ಕಳನ್ನು ನೋಡಿಕೊಳ್ಳುವ ಬೇಬಿ ಕೇರ್ ಸವಲತ್ತು ಕಲ್ಪಿಸಲಾಗುತ್ತಿದೆ
- ಕುಮುದಾ ಚುನಾವಣಾ ಅಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.