ಕುತ್ಪಾಡಿ ಪಡುಕೆರೆ ಆರೋಗ್ಯ ಕೇಂದ್ರವೇ ಅಸ್ವಸ್ಥ!
Team Udayavani, Jun 21, 2018, 6:00 AM IST
ಮಲ್ಪೆ: ತಾಲೂಕಿನ ಕಡೆಕಾರು ಕುತ್ಪಾಡಿ ಗ್ರಾಮದ ಕುತ್ಪಾಡಿ ಕುದ್ರುಕರೆಯಲ್ಲಿರುವ ಪ್ರಾಥಮಿಕ ಆರೋಗ್ಯ ಉಪಕೇಂದ್ರ ಸಿಬಂದಿ ಕೊರತೆಯಿಂದ ಕಳೆದ ಒಂದು ವರ್ಷದಿಂದ ಬಾಗಿಲು ಮುಚ್ಚಿದೆ. ಇದರಿಂದ ಮಳೆಗಾಲದಲ್ಲಂತೂ ಬಡರೋಗಿಗಳಿಗೆ ತೀವ್ರ ಸಮಸ್ಯೆಯಾಗಿದೆ.
20 ವರ್ಷಗಳ ಹಿಂದೆ ಆರೋಗ್ಯ ಉಪಕೇಂದ್ರವನ್ನು ಸ್ಥಾಪನೆ ಮಾಡ ಲಾಗಿತ್ತು. ಇದೀಗ ಇಲಾಖೆಯ ಸಿಬಂದಿ ಇಲ್ಲದ ಕಾರಣ ಸಂಪೂರ್ಣ ಸ್ಥಗಿತಗೊಂಡಿದೆ.
ಈ ಹಿಂದೆ ಇಲ್ಲಿ ವೈದ್ಯರು ವಾರಕ್ಕೊಮ್ಮೆ ಸಿಗುತ್ತಿದ್ದರು. ಇಲ್ಲಿ ಖಾಯಂ ಆಗಿ ಇದ್ದ ಒಬ್ಬ ಆರೋಗ್ಯ ಸಹಾಯಕಿ ವರ್ಗಾವಣೆಗೊಂಡಿದ್ದು, ಅಂದಿನಿಂದ ಆರೋಗ್ಯ ಕೇಂದ್ರಕ್ಕೆ ಬೀಗ ಬಿದ್ದಿದೆ. ಆದರೆ ಈ ಬಗ್ಗೆ ಉತ್ತರಿಸಬೇಕಾದ ಆರೋಗ್ಯ ಇಲಾಖೆ ಕಣ್ಮುಚ್ಚಿ ಕೂತಿದೆ.
ಏಕೈಕ ಉಪಕೇಂದ್ರ
ಪಡುಕರೆ ಭಾಗದ ಮಲ್ಪೆ,
ಕಿದಿಯೂರು, ಕುತ್ಪಾಡಿ, ಕಡೆಕಾರ್ ಉದ್ಯಾವರ ಗ್ರಾಮದ ಜನರಿಗೆ ಇದು ಏಕೈಕ ಆರೋಗ್ಯ ಉಪ ಕೇಂದ್ರವಾಗಿತ್ತು. ಬಹುತೇಕ ಬಡ ಮೀನುಗಾರರ ಮನೆಗಳೇ ಹೆಚ್ಚಿರುವ ಇಲ್ಲಿನ ಮಂದಿ ಯಾವುದೇ ಸಣ್ಣಪುಟ್ಟ ಅನಾರೋಗ್ಯ ಬಂದರೂ ದೂರದ ಮಲ್ಪೆ ಪ್ರಾಥಮಿಕ ಕೇಂದ್ರ ಅಥವಾ ಇನ್ನಿತರ ಖಾಸಗಿ ಚಿಕಿತ್ಸಾ ಕೇಂದ್ರಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ.
ಸರ್ವ ಸೌಕರ್ಯ
ಇಲ್ಲಿನ ಆರೋಗ್ಯ ಕೇಂದ್ರ ಬೇಕಾದ ಎಲ್ಲ ಸೌಕರ್ಯಗಳನ್ನು ಹೊಂದಿದೆ. ಮಹಿಳಾ ಆರೋಗ್ಯ ಸಹಾಯಕಿಯರ ವಸತಿ ಗೃಹವೂ ಇದೆ. ಆಸ್ಪತ್ರೆಯಲ್ಲಿ ಇಂಜೆಕ್ಷನ್ ಮತ್ತು ಇನ್ನಿತರ ಅಗತ್ಯ ವೈದ್ಯಕೀಯ ವಸ್ತುಗಳನ್ನು ಸಂಗ್ರಹಿಸುವ ರೆಫ್ರಿಜರೇಟರ್ ಇಲ್ಲಿವೆ.
ಇದೀಗ ವರ್ಷದಿಂದ ಮುಚ್ಚಿರುವುದ ರಿಂದ ಅವು ಕೆಟ್ಟು ಹೋಗುವ ಸಂಭವ ಇದೆ. ಈ ಕುರಿತು ಗ್ರಾಮಸ್ಥರು ಹಲವು ಬಾರಿ ಸಂಬಂಧಪಟ್ಟ ತಾಲೂಕು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಕಂಡಿಲ್ಲ.
ಆರೋಗ್ಯದ ಕಾಳಜಿ ವಹಿಸಿ
ಇಲ್ಲಿನ ಆರೋಗ್ಯ ಉಪಕೇಂದ್ರಕ್ಕೆ ಆರೋಗ್ಯ ಸೇವಕಿಯನ್ನು ಒದಗಿಸಬೇಕೆಂದು ತಾಲೂಕು ಮತ್ತು ಜಿಲ್ಲಾ ವೈದ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿ ಖಾಯಂ ಒಬ್ಬ ವೈದ್ಯರು ಹಾಗೂ ಆರೋಗ್ಯ ಸಹಾಯಕರನ್ನು ನೇಮಿಸಿ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿದೆ.
– ಆನಂದ ಪುತ್ರನ್, ಪಡುಕರೆ
ಪ್ರಸ್ತಾವನೆ ಸಲ್ಲಿಕೆ
ಉಡುಪಿ ಜಿಲ್ಲೆಯಲ್ಲಿ ಖಾಲಿ ಇರುವ ಆರೋಗ್ಯ ಸಹಾಯಕಿಯರ ಹುದ್ದೆಯ ನೇಮಕಾತಿಗೆ ಸಂಬಂಧಪಟ್ಟಂತೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು ನೇಮಕಾತಿಯ ಪ್ರಕ್ರಿಯೆ ನಡೆಯುತ್ತಿದೆ. ಮಲ್ಪೆ ಆರೋಗ್ಯ ಕೇಂದ್ರದಲ್ಲಿಯೂ ಹುದ್ದೆಗಳು ಖಾಲಿ ಇದ್ದು ಅಲ್ಲಿಗೆ ನೇಮಕಾತಿ ದೊರೆತಲ್ಲಿ ಮೊದಲು ಇಲ್ಲಿಗೆ ಭರ್ತಿ ಮಾಡಲಾಗುವುದು.
– ಡಾ|ರೋಹಿಣಿ
ಜಿಲ್ಲಾ ಆರೋಗ್ಯ ಇಲಾಖಾಧಿಕಾರಿ
ಮನವಿಗೆ ಫಲವಿಲ್ಲ
ಹಿಂದಿನಂತೆ ದೋಣಿಯನ್ನೆ ಅವಲಂಬಿಸುವುದಾದರೆ ಆನಾರೋಗ್ಯ ಉಂಟಾದ ಸಂದರ್ಭದಲ್ಲಿ ಅತ್ಯಂತ ಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಗಿತ್ತು. ಈಗ ಪಡುಕರೆಗೆ ಸೇತುವೆಯಾದ್ದರಿಂದ ವಾಹನದ ಮೂಲಕವಾದರೂ ಬೇರೆ ಕಡೆಗೆ ಹೋಗಬಹುದು. ಆರೋಗ್ಯ ಕೇಂದ್ರದ ಬಗ್ಗೆ ಅಧಿಕಾರಿಗಳಲ್ಲಿ ಹಲವು ಬಾರಿ ಮನವಿ ಮಾಡಿದರೂ, ಯಾವ ಪ್ರಯೋಜನವೂ ಆಗಿಲ್ಲ. ಅಧಿಕಾರಿಗಳು ಕಾಯಕಲ್ಪ ನೀಡಿ ನಿರ್ವಹಣೆಗೆ ಒಳಪಡಿಸಬೇಕು. ಅಗತ್ಯ ವೈದ್ಯಾಧಿಕಾರಿ ಸಿಬಂದಿಗಳನ್ನು ನೇಮಕ ಮಾಡಬೇಕು.
– ಸುರೇಶ್ ಮೆಂಡನ್,ಪಡುಕೆರೆ
– ನಟರಾಜ್ ಮಲ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.