ಸ್ಥಳೀಯರಿಂದ ಶ್ರಮದಾನ ; ನೆಕ್ಕರೆಕೆರೆಯಲ್ಲಿದೆ 8 ಅಡಿ ನೀರು!
Team Udayavani, May 20, 2019, 6:00 AM IST
ಉಡುಪಿ: ಈ ಬಾರಿಯ ಬೇಸಗೆಯಲ್ಲಿ ನೀರಿಲ್ಲ ಎಂದು ಅಲವತ್ತು ಕೊಳ್ಳುವುದೇ ಆಯಿತು. ಲಭ್ಯ ಇರುವ ನೀರಿನ ಮೂಲವನ್ನು ಹುಡುಕುವ ಕೆಲಸ ಮಾಡದಿರುವುದೇ ಈ ಎಲ್ಲ ಸಮಸ್ಯೆಗೆ ಕಾರಣವಾಗಿದೆ.
ಗುಂಡಿಬೈಲು ವಾರ್ಡ್‌ನಲ್ಲಿರುವ 50 ಅಡಿ ಅಗಲ, 100 ಅಡಿ ಉದ್ದವಿರುವ ನೆಕ್ಕರೆಕೆರೆಯಲ್ಲಿ ಈ ಬೇಸಗೆಯಲ್ಲೂ ಸುಮಾರು 8 ಅಡಿಗಳಷ್ಟು ನೀರಿರುವುದು ವಿಶೇಷ. ಆದರೆ ಸೂಕ್ತ ನಿರ್ವಹಣೆ ಮಾಡದೆ ಇರುವುದರಿಂದ ಇದನ್ನು ಕುಡಿಯಲು ಉಪಯೋಗಿಸುತ್ತಿಲ್ಲ. 5 ವರ್ಷದ ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಈ ಕೆರೆಯನ್ನು ಅಭಿವೃದ್ಧಿ ಮಾಡಲಾಗಿತ್ತು.
ಕುಡಿಯಲು ಬಳಕೆಯಾದರೆ ಉತ್ತಮ ನೀರಿಗೆ ಬರಗಾಲ ಉಂಟಾಗಿರುವ ಈ ಸಮಯದಲ್ಲಿ ಈ ನೀರನ್ನು ಕುಡಿಯಲು ಯೋಗ್ಯವಾಗುವಂತೆ ಮಾಡಿದರೆ ನೀರಿನ ಸಮಸ್ಯೆ ಸ್ಥಳೀಯ ಕೆಲ ವಾರ್ಡ್‌ಗಳಲ್ಲಾದರೂ ಕಡಿಮೆ ಯಾಗಬಹುದು. ಈ ಬಗ್ಗೆ ನಗರಸಭೆ ಅಧಿಕಾರಿಗಳು ಗಮನಹರಿಸಿದರೆ ಉತ್ತಮ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.
ಸ್ಥಳೀಯರಿಂದ ಶ್ರಮದಾನ
ಈ ನೀರನ್ನು ಇತರ ಚಟುವಟಿಕೆ ಗಳಾದರೂ ಬಳಸುವಂತೆ ಮಾಡುವ ನಿಟ್ಟಿನಲ್ಲಿ ಇಲ್ಲಿನ ಸ್ಥಳೀಯ ಸುಮಾರು 30 ಮಂದಿಯ ತಂಡ ರವಿವಾರ ಸ್ವತ್ಛತಾ ಕಾರ್ಯ ನಡೆಸಿದರು. ನೀರಿನಲ್ಲಿರುವ ತ್ಯಾಜ್ಯ ತೆಗೆದು ಶುಚಿಗೊಳಿಸಲಾಯಿತು.
ಕೆರೆಅಭಿವೃದ್ಧಿಯಾಗಲಿ
ನಗರಸಭಾ ವ್ಯಾಪ್ತಿಯಲ್ಲಿ ಸುಮಾರು 50ರಷ್ಟು ಖಾಸಗಿ ಹಾಗೂ ಸರಕಾರಿ ಕೆರೆಗಳಿದ್ದು ಇದರ ಸೂಕ್ತ ನಿರ್ವಹಣೆ ಆಗಬೇಕಿದೆ. ನೀರಿನ ಸಮಸ್ಯೆ ಅಂದಾಕ್ಷಣ ಸ್ವರ್ಣಾ ನದಿಯ ಬಜೆ ಅಣೆಕಟ್ಟಿನತ್ತ ಬೊಟ್ಟು ಮಾಡುವ ಪ್ರಮೇಯ ಕಡಿಮೆಯಾಗಲಿದೆ. ಈ ಬಗ್ಗೆ ನಗರಸಭೆ ಮುಂದಿನ ಬೇಸಗೆ ಕಾಲಕ್ಕೂ ಮುನ್ನ ಎಚ್ಚೆತ್ತುಕೊಂಡರೆ ಈ ವರ್ಷ ಸಂಭವಿಸಿದಂತಹ ಘಟನೆಗಳು ಮರುಕಳಿಸುವ ಸಾಧ್ಯತೆಯೂ ಕಡಿಮೆಯಾಗಬಹುದು. ಪ್ರತೀ ವಾರ್ಡ್‌ಗಳಲ್ಲಿರುವ ಸರಕಾರಿ ಬಾವಿಗಳನ್ನು ಗುರುತಿಸಿ ಕಾಯಕಲ್ಪ ನೀಡಿದರೆ ನೀರಿನ ಲಭ್ಯತೆಯೂ ಹೆಚ್ಚಾಗಲಿದೆ. ಕುಡಿಯಲು ಅಲ್ಲದಿದ್ದರೂ ಇನ್ನಿತರ ಕೆಲಸಕಾರ್ಯಗಳಿಗಾದರೂ ಬಳಸಿಕೊಳ್ಳಬಹುದು.
ನಗರಸಭೆ ಅಧಿಕಾರಿಗಳು ಗಮನಿಸಲಿ
ನೆಕ್ಕರೆಕೆರೆಯಲ್ಲಿ ಸುಮಾರು 8 ಅಡಿಗಳಷ್ಟು ನೀರಿದೆ. ಈ ಬಾರಿ ಅಲ್ಲದಿದ್ದರೂ ಮಂದಿನ ವರ್ಷಕ್ಕೆ ಈ ಕೆರೆಯ ನೀರನ್ನು ಕುಡಿಯಲು ಯೋಗ್ಯ ಮಾಡುವಂತೆ ನಗರಸಭೆ ಅಧಿಕಾರಿಗಳು ಗಮನಹರಿಸಬೇಕು.
-ಪ್ರಭಾಕರ ಪೂಜಾರಿ
ಗುಂಡಿಬೈಲು ವಾರ್ಡ್ ಸದಸ್ಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.