ಸಾೖಬ್ರಕಟ್ಟೆ ಜನತಾ ಕಾಲನಿಗೆ ಮೂಲ ಸೌಲಭ್ಯದ ಕೊರತೆ
Team Udayavani, Aug 19, 2021, 4:20 AM IST
ಸಾೖಬ್ರಕಟ್ಟೆ ಜನತಾ ಕಾಲನಿಯಲ್ಲಿ ನೂರಾರು ಮನೆಗಳಿದ್ದು ಸುಮಾರು 40ಕ್ಕೂ ಹೆಚ್ಚು ಮನೆಗಳಿಗೆ ಹಕ್ಕುಪತ್ರದ ಸಮಸ್ಯೆ ಇದೆ. ಇದರಿಂದಾಗಿ ಮೂಲಸೌಕರ್ಯಗಳು ಸರಿಯಾಗಿ ಸಿಗುತ್ತಿಲ್ಲ ಎಂಬುದು ಇಲ್ಲಿನವರ ಪ್ರಮುಖ ದೂರು.
ಕೋಟ: ಯಡ್ತಾಡಿ ಗ್ರಾ.ಪಂ. ವ್ಯಾಪ್ತಿಯ ಸಾೖಬ್ರಕಟ್ಟೆ ಜನತಾ ಕಾಲನಿಯಲ್ಲಿ ಬಹುತೇಕ ಭೋವಿ ಜನಾಂಗದವರು ವಾಸವಾಗಿದ್ದಾರೆ. ಇಲ್ಲಿನ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರದ ಸಮಸ್ಯೆ ಇದೆ ಹಾಗೂ ವಿದ್ಯುತ್ ಸಂಪರ್ಕ, ವಸತಿ ಯೋಜನೆಯ ಮನೆ ಮತ್ತು ಸರಕಾರದ ಹಲವು ಸೌಕರ್ಯಗಳನ್ನು ಪಡೆಯಲು ಸಮಸ್ಯೆ ಇದೆ. ಈ ಬಗ್ಗೆ ಹೋರಾಟಗಳು ನಡೆಯುತ್ತಿದ್ದು, ಹಕ್ಕು ಪತ್ರ ನೀಡಿಕೆ ಇದೀಗ ಅಂತಿಮ ಹಂತದಲ್ಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹಕ್ಕುಪತ್ರದ ಜತೆಗೆ ಕಾಲನಿಗೆ ಇತರ ಮೂಲಸೌಕರ್ಯಗಳನ್ನು ಕಲ್ಪಿಸುವ ಬಗ್ಗೆಯೂ ಆಡಳಿತ ವ್ಯವಸ್ಥೆ ಗಮನಹರಿಸಬೇಕಿದೆ.
ಮೂಲಸೌಕರ್ಯ ಸಮಸ್ಯೆ :
ಅನೇಕ ಮನೆಗಳು ವಿದ್ಯುತ್ ಸಂಪರ್ಕವಿಲ್ಲದೆ ಒಂದೆರಡು ಸೋಲಾರ್ ಬಲ್ಬ್ನಲ್ಲೇ ಕಾಲಕಳೆಯುತ್ತಿವೆ. ಹಕ್ಕುಪತ್ರ ದೊರೆತ ತತ್‌ಕ್ಷಣ ಸ್ಥಳೀಯಾಡಳಿತದ ನಿರಾಕ್ಷೇಪಣ ಪತ್ರದೊಂದಿಗೆ ಎಲ್ಲ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆಯಾಗಬೇಕಿದೆ. ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ಪಡಿತರ ಚೀಟಿ ಮುಂತಾದ ಸೌಲಭ್ಯಗಳು ಸಿಗಬೇಕಿದೆ. ಕಾಲನಿಯಲ್ಲಿ ಸ್ವತ್ಛcತೆಯ ಸಮಸ್ಯೆ ಇದ್ದು ಚರಂಡಿ ಅಭಿವೃದ್ಧಿ ಅಗತ್ಯವಿದೆ ಹಾಗೂ ಇಲ್ಲಿನ ಕಲ್ಲುಕೋರೆಗಳಲ್ಲಿ ಕಾರ್ಯನಿರ್ವಹಿಸುವ ಹಲವು ಕುಟುಂಬಗಳು ತಾತ್ಕಾಲಿಕ ನೆಲೆಯಲ್ಲಿ ಶೆಡ್‌ಗಳಲ್ಲಿ ವಾಸವಾಗಿದ್ದು ಇವರಿಗೆ ಶೌಚಾಲಯವಿಲ್ಲದಿರುವುದರಿಂದ ಬಯಲು ಶೌಚವನ್ನು ಅನುಸರಿಸುತ್ತಿದ್ದಾರೆ. ಇದರಿಂದ ಪರಿಸರ ಮಾಲಿನ್ಯವಾಗುತ್ತಿದೆ. ಹೀಗಾಗಿ ಇದನ್ನು ತಡೆಗಟ್ಟಲು ಕ್ರಮಕೈಗೊಳ್ಳಬೇಕಿದೆ.
ನಿವಾಸಿಗಳಿಗೆ ನಿರೀಕ್ಷೆ :
ಹಕ್ಕುಪತ್ರ ಸಮಸ್ಯೆಯ ಪರಿಶೀಲನೆಗಾಗಿ ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ್‌ಮೂರ್ತಿ ಅವರು ಇತ್ತೀಚೆಗೆ ಸ್ಥಳಕ್ಕಾಗ ಮಿಸಿದ್ದು ಸ್ಥಳೀಯ ವಾರ್ಡ್ ಸದಸ್ಯರಾದ ಅಮೃತ್ ಪೂಜಾರಿ ಅವರ ಉಸ್ತುವಾರಿಯಲ್ಲಿ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಲಾಗಿದೆ ಹಾಗೂ ಸಮಸ್ಯೆ ಪರಿಹರಿಸುವ ಭರವಸೆ ಯನ್ನು ತಹಶೀಲ್ದಾರರು ನೀಡಿದ್ದಾರೆ.
ಸೂಕ್ತ ಕ್ರಮ :
ಇಲ್ಲಿನ ಸಮಸ್ಯೆಗಳನ್ನು ಹಂತ-ಹಂತವಾಗಿ ಬಗೆಹರಿಸಲು ಪ್ರಯತ್ನಿಸುತ್ತಿದ್ದು ಈಗಾಗಲೇ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಹಕ್ಕುಪತ್ರಕ್ಕಾಗಿ ಹೋರಾಟ ನಡೆಸಿದ್ದು ಅಂತಿಮ ಹಂತದಲ್ಲಿದೆ. ಅದೇ ರೀತಿ ಎಲ್ಲ ಅಭಿವೃದ್ಧಿಯ ಕುರಿತು ಗಮನಹರಿಸಲಾಗುವುದು. – ಅಮೃತ್ ಪೂಜಾರಿ, ಸ್ಥಳೀಯ ವಾರ್ಡ್ ಸದಸ್ಯ
ಇತರ ಸಮಸ್ಯೆಗಳೇನು? :
- ಈ ಕಾಲನಿಗೆ ಅಪರಿಚಿತರು ಸಾಕು ಹಂದಿಗಳನ್ನು ತಂದು ಬಿಡುತ್ತಿದ್ದು ಇವುಗಳಿಂದ ಸ್ಥಳೀಯರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಸ್ಥಳೀಯಾಡಳಿತ ಇವುಗಳನ್ನು ಸ್ಥಳಾಂತರಿಸಬೇಕು ಎನ್ನುವ ಬೇಡಿಕೆ ಇದೆ.
- ತಾತ್ಕಾಲಿಕ ಶೆಡ್‌ಗಳಲ್ಲಿ ವಾಸಿಸುವ ಕಾರ್ಮಿಕರ ಬಯಲು ಶೌಚ ತಡೆಗೆ ಕ್ರಮ ಅಗತ್ಯವಿದೆ.
- ಚರಂಡಿ ಸಮಸ್ಯೆಯಿಂದ ಕೊಳಚೆ ನೀರು ನಿಂತು ಸೊಳ್ಳೆ ಉತ್ಪಾದನೆಯಾಗುತ್ತಿದೆ.
- ಬೀದಿ ನಾಯಿಗಳ ಕಾಟವೂ ಸಾಕಷ್ಟಿದೆ.
- ಪ್ರತೀ ವರ್ಷವೂ ಕುಡಿಯುವ ನೀರಿನ ಸಮಸ್ಯೆ
- ಸಾಕಷ್ಟು ಕುಟುಂಬಗಳಿಗೆ ವ್ಯವಸ್ಥಿತವಾದ ಮನೆ ಇಲ್ಲ .
ಶೀಘ್ರ ಹಕ್ಕುಪತ್ರ :
ಸಾೖಬ್ರಕಟ್ಟೆ ಜನತಾ ಕಾಲನಿಗೆ ಈಗಾಗಲೇ ಭೇಟಿ ನೀಡಿ ಪರಿಶೀಲಿಸಿದ್ದು 94-ಸಿಸಿಯಡಿ 2.45ಸೆಂಟ್ಸ್ ಜಾಗಕ್ಕೆ ಹಕ್ಕುಪತ್ರಗಳನ್ನು ಮಂಜೂರು ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಈ ಕುಟುಂಬಗಳು ಹತ್ತಾರು ವರ್ಷಗಳಿಂದ ಅನುಭವಿಸುತ್ತಿರುವ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಲಾಗುವುದು. - ರಾಜಶೇಖರ್‌ಮೂರ್ತಿ, ತಹಶೀಲ್ದಾರರು ಬ್ರಹ್ಮಾವರ
-ರಾಜೇಶ್ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.