ನಳ್ಳಿ ತಿರುಗಿಸಿದರೆ ಬರೋದು ಬರಿ ಗಾಳಿ!
ನಕ್ರೆ: ನೀರಿಗಾಗಿ ದೇವರಗುಡ್ಡೆ ಕಾಲನಿ ನಿವಾಸಿಗಳ ನಿತ್ಯ ಪರದಾಟ
Team Udayavani, Mar 5, 2021, 3:00 AM IST
ಕಾರ್ಕಳ: ಕೂಲಿಗೆ ಹೋದರೆ ನೀರಿಲ್ಲ. ನೀರು ಸಂಗ್ರಹಕ್ಕೆಂದು ಮನೆಯಲ್ಲಿ ಉಳಿದರೆ ಹೊಟ್ಟೆಗೆ ಹಿಟ್ಟಿಲ್ಲ. ಇಪ್ಪತ್ನಾಲ್ಕು ತಾಸು ಬರಬೇಕಿದ್ದ ನೀರು ದಿನಕ್ಕೆ ಒಂದೆರಡು ತಾಸಷ್ಟೇ ಬರುತ್ತಿದೆ. ಇದು ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಕ್ರೆ ದೇವರಗುಡ್ಡೆ ಕಾಲನಿ ನಿವಾಸಿಗಳ ಅಳಲು.
ನಕ್ರೆ ಭಾಗದ 5 ಸೆಂಟ್ಸ್ ಕಾಲನಿ, ದೇವರಗುಡ್ಡೆ ಕಾಲನಿ ಹೀಗೆ ನಕ್ರೆ ಪರಿಸರದ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿನ 200ಕ್ಕೂ ಅಧಿಕ ಮನೆಗಳಿಗೆ ನೀರು ಪೂರೈಸಲು ಇರುವುದು 1 ಕೊಳವೆ ಬಾವಿ, 1 ಪಂಪ್‌ಸೆಟ್, 1 ಟ್ಯಾಂಕ್ ಮಾತ್ರ. ನೀರು ಪೂರೈಕೆಯಲ್ಲಿ ಅಡಚಣೆಯಾಗುತ್ತಿದೆ. ಶಿಥಿಲ ಟ್ಯಾಂಕ್ ಸೋರುತ್ತಿದೆ ಎಂದು ಪಂಪ್‌ನಿಂದ ನೇರ ಪೈಪ್‌ಗ್ಳಿಗೆ ಸಂಪರ್ಕ ನೀಡಲಾಗಿದೆ. 60ರಿಂದ 70 ಮನೆಗಳಿಗಷ್ಟೇ ಟ್ಯಾಂಕ್‌ನಿಂದ ನೀರು ಹರಿಸಲಾಗುತ್ತಿದೆ. ಉಳಿದೆಡೆಗೆ ಪಂಪ್‌ನಿಂದ ನೇರ ಸಂಪರ್ಕವಿದೆ. ನಕ್ರೆ ಭಾಗದ ಶೇ.40ರಷ್ಟು ಕಡೆಯ ಭಾಗಕ್ಕೆ ಇಲ್ಲಿಂದಲೇ ನೀರು ಸರಬರಾಜು ಆಗುತ್ತಿತ್ತು. 1 ಕೊಳವೆ ಬಾವಿ, ಕಡಿಮೆ ಸಾಮರ್ಥ್ಯದ ಪಂಪ್, ಪೈಪ್ ಒತ್ತಡಕ್ಕೆ ಒಡೆದು ಎಲ್ಲೆಡೆಗೆ ಪೂರೈಕೆಯಾಗುತ್ತಿಲ್ಲ.
ಟ್ಯಾಂಕ್ ತೊಳೆದೇ ಇಲ್ಲ! ;
ಟ್ಯಾಂಕ್ ಶುದ್ಧಗೊಳಿಸದೆ ವರ್ಷಗಳೇ ಹಿಡಿದಿವೆ. ಟ್ಯಾಂಕ್ ಸ್ವತ್ಛಗೊಳಿಸಲು ಟ್ಯಾಂಕ್‌ನಿಂದ ನೀರು ತೊಳೆದು ಹೊರ ಬಿಡುವ ಪೈಪ್ ಬ್ಲಾಕ್ ಆಗಿ ನೀರು ಹೊರ ಹೋಗುತ್ತಿಲ್ಲ. ವರ್ಷಾನುಗಟ್ಟಲೆ ಟ್ಯಾಂಕ್ ತೊಳೆಯದೆ ನೀರು ಹರಿಸುತ್ತಲೇ ಇರುವುದರಿಂದ ಕೊಳಕು ನೀರು ಬಳಕೆಯೇ ಅನಿವಾರ್ಯವಾಗಿದೆ. ನೀರು ಕಿಲುಬು ವಾಸನೆ ಬರುತ್ತಿದೆ. ಕುಡಿಯಲು ಯೋಗ್ಯವಾಗಿಲ್ಲ ಎಂದು ಅಲ್ಲಿನವರು ಹೇಳುತ್ತಾರೆ. ಇನ್ನು ನೀರಿನ ಬಿಲ್ ಕೆಲವರು ಮಾತ್ರ ಕಟ್ಟುತ್ತಿದ್ದು, ಕೆಲವರು ಕೃಷಿಗೂ ಬಳಸಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರಾದ ಜೈಶಂಕರ ನಕ್ರೆ ಆರೋಪಿಸಿದ್ದಾರೆ.
ಟ್ಯಾಂಕ್ ಬೀಳುವ ಭೀತಿ! :
ಟ್ಯಾಂಕ್ ಶಿಥಿಲಗೊಂಡಿರುವುದರಿಂದ ಬೀಳುವ ಭೀತಿ ಇದೆ. ಇದರ ಪಕ್ಕದಲ್ಲೇ ಆಟದ ಮೈದಾನವೂ ಇದ್ದು ಅಪಾಯದ ಭೀತಿ ಕಾಡಿದೆ. ಜತೆಗೆ ಮೈದಾನ ಪಕ್ಕ ಅಪಾಯದ ಸ್ಥಿತಿಯಲ್ಲಿ ಚೇಂಬರ್ ಕೂಡ ಇದೆ. ಗೇಟ್‌ವಾಲ್ ಅಳವಡಿಸದೆ 2 ವರ್ಷಗಳು ಕಳೆದಿವೆ.
ಶಿಥಿಲ ನೀರಿನ ಟ್ಯಾಂಕ್ , ಪಿಲ್ಲರ್ :
ನಕ್ರೆ ಭಾಗದ ನೀರಿನ ಸಮಸ್ಯೆ ನಿವಾರಿಸಲು 1990ರಲ್ಲಿ ದೇವರಗುಡ್ಡೆ ಎಂಬಲ್ಲಿ ಅಂದಾಜು 40 ಸಾವಿರ ಲೀ. ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಲಾಗಿತ್ತು. ಅದು ಸಂಪೂರ್ಣ ಶಿಥಿಲಗೊಂಡಿದೆ. ಪಿಲ್ಲರ್‌ಗಳು ಬಲ ಕಳೆದುಕೊಂಡಿವೆ. ಅಡ್ಡ ಬೀಮ್‌ಗಳಲ್ಲಿ ಕಾಂಕ್ರೀಟ್ ಕಿತ್ತು ಹೋಗಿ ಸರಳುಗಳು ಹೊರ ಬಂದಿವೆ. ಗ್ರಾ.ಪಂ. ಸಭೆಯಲ್ಲಿ ಚರ್ಚೆಗಳು ನಡೆದು ಹೊಸ ಟ್ಯಾಂಕ್ ನಿರ್ಮಾಣಕ್ಕೆ ಒತ್ತಾಯ ವ್ಯಕ್ತವಾಗಿತ್ತು. ಪಂಚಾಯತ್‌ನಲ್ಲೂ 2016ರಲ್ಲಿ ನಿರ್ಣಯ ಕೈಗೊಂಡು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗಕ್ಕೆ ಪ್ರಸ್ತಾವ ಹೋಗಿದೆ.
31 ವರ್ಷಗಳ ಹಿಂದಿನ ನೀರಿನ ಟ್ಯಾಂಕ್
2016 ಗ್ರಾ.ಪಂ.ನಿಂದ ಹೊಸ ಟ್ಯಾಂಕ್‌ಗೆ ನಿರ್ಣಯ
1990 ರಲ್ಲಿ ನೀರಿನ ಟ್ಯಾಂಕ್ ನಿರ್ಮಾಣ
200 ಕ್ಕೂ ಅಧಿಕ ಕುಟುಂಬಗಳಿಗೆ ಅನುಕೂಲ
1 ತಲಾ ಕೊಳವೆ ಬಾವಿ, ಪಂಪ್‌ಸೆಟ್, ತೊಟ್ಟಿ
ಹೊಸ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ನಿರಂತರ ಹೋರಾಟ ನಡೆಸಿದ್ದೇವೆ. ಟ್ಯಾಂಕ್ ನಿರ್ಮಾಣ, ನಕ್ರೆ ಭಾಗದ ನೀರಿನ ಸಮಸ್ಯೆ ಬಗೆಹರಿಸದಿದ್ದಲ್ಲಿ ಪಂಚಾಯತ್ ಮುಂದೆ ಶೀಘ್ರ ಧರಣಿ ನಡೆಸಲಾಗುವುದು. –ಅಣ್ಣಪ್ಪ ನಕ್ರೆ,
ಸಾಮಾಜಿಕ ಕಾರ್ಯಕರ್ತ
ಒಂದೆರಡು ತಾಸು ಅಲ್ಲ; ಹೆಚ್ಚಿನ ತಾಸು ನೀರು ಆ ಭಾಗದಲ್ಲಿ ಪೂರೈಕೆಯಾಗುತ್ತಿದೆ. ಅಲ್ಲಿಂದ ದೂರುಗಳು ಕೂಡ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು. –ಮಾಧವ ರಾವ್ ದೇಶ್‌ಪಾಂಡೆ , ಪಿಡಿಒ
– ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.