ನಗರಸಭೆ ಕಟ್ಟಡದಲ್ಲಿ ಸ್ಥಳಾವಕಾಶದ ಕೊರತೆ
ಹಳೆಯ ತಾಲೂಕು ಕಚೇರಿ ಕಟ್ಟಡ ಸ್ಥಳಾಂತರಕ್ಕೆ ಚಿಂತನೆ
Team Udayavani, Jan 24, 2021, 7:00 AM IST
ಉಡುಪಿ: ನಗರದ ಬಿಗ್ ಬಜಾರ್ ಸಮೀಪದ ಹಳೆಯ ತಾಲೂಕು ಕಚೇರಿ ಕಟ್ಟಡಕ್ಕೆ ನಗರಸಭೆಯನ್ನು ಸ್ಥಳಾಂತರಿಸುವ ಚಿಂತನೆ ನಡೆಯುತ್ತಿದೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಸರಕಾರಕ್ಕೆ ಸಲ್ಲಿಸಲಾಗಿದೆ.ಕೆಎಂ ಮಾರ್ಗದ ಸ್ವಂತ ಕಟ್ಟಡದಲ್ಲಿಪ್ರಸ್ತುತ ನಗರಸಭೆ ಕಚೇರಿ ಕಾರ್ಯಾಚರಿಸುತ್ತಿದೆ. ಇದಕ್ಕೆ ಹೊಂದಿಕೊಂಡು ಬ್ಯಾಂಕ್ ಹಾಗೂ ಗ್ರಂಥಾಲಯವಿದೆ. ವಾಣಿಜ್ಯ ಕೇಂದ್ರವಾಗಿರುವ ಈ ಪ್ರದೇಶದಲ್ಲಿ ನಿತ್ಯ ನೂರಾರು ಮಂದಿ ಕಚೇರಿ ಸೇರಿದಂತೆ ಇತರ ಕೆಲಸಗಳಿಗೆ ಬರುತ್ತಾರೆ. ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಸೇರಿದಂತೆ ವಿವಿಧ ತೊಂದರೆಗಳು ಎದುರಾಗುತ್ತಿವೆೆ. ಇದು ಕಚೇರಿಗೆಂದು ಬರುವವರಿಗೆ ಕಿರಿಕಿರಿಯುಂಟು ಮಾಡುತ್ತಿದೆ.
ಪಾರ್ಕಿಂಗ್ ಸಮಸ್ಯೆ :
ಇಲ್ಲಿ ನಿತ್ಯ ಪಾರ್ಕಿಂಗ್ ಸಮಸ್ಯೆ. ಕಟ್ಟಡದ ಅವರಣದೊಳಗೆ ಎರಡು ಕಾರು ಪ್ರವೇಶಿಸಿದರೆ ಇಡೀ ಪಾರ್ಕಿಂಗ್ ಏರಿಯಾ ಫುಲ್ ಪ್ಯಾಕ್. ಸಾರ್ವಜನಿಕರ ದ್ವಿಚಕ್ರ ವಾಹನ ನಿಲುಗಡೆಗೂ ಸ್ಥಳವಕಾಶದ ಕೊರತೆ ಇದೆ. ಹೊರಗಡೆ ನಿಲ್ಲಿಸುವ ವಾಹನ ಟ್ರಾಫಿಕ್ ಪೊಲೀಸರ ವಶವಾಗುತ್ತಿದ್ದು, ಕೆಲವೊಮ್ಮೆ ಟ್ರಾಫಿಕ್ ಜಾಮ್‌ಗೆ ಕಾರಣವಾಗುತ್ತಿದೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಜನಪ್ರತಿನಿಧಿಗಳು ಧ್ವನಿ ಎತ್ತಿದ್ದರು.
ವಿಲೇವಾರಿ ತಲೆನೋವು :
ನಗರಸಭೆಯಲ್ಲಿ ತಾಂತ್ರಿಕ, ಆರೋಗ್ಯ ವಿಭಾಗ, ನಗರ ಯೋಜನೆ ಇಲಾಖೆ, ಹಣಕಾಸು, ಚುನಾವಣೆ ವಿಭಾಗ,
ಜನನ ಮತ್ತು ಮರಣ ವಿಭಾಗ, ಡಿಎವೈ- ಎನ್‌ಯುಎಲ್‌ಎಂ ಸೇರಿದಂತೆ ವಿವಿಧ ಇಲಾಖೆಗಳು ಇವೆ. ನಗರ ವ್ಯಾಪ್ತಿಯ ಹೆಚ್ಚಿನ ಕೆಲಸಗಳು ಈ ಕಚೇರಿಯ ಮೂಲಕವೇ ನಡೆಯುತ್ತದೆ. ಇಲ್ಲಿ ನಿತ್ಯ ನೂರಾರು ಮಂದಿಯ ಸಾವಿರಾರು ಪುಟಗಳ
ಕಡತ ಕಚೇರಿ ಸೇರುತ್ತಿವೆ. ಇವುಗಳನ್ನು ವಿಲೇವಾರಿ ಮಾಡುವ ಸಿಬಂದಿಗೆ ಎಲ್ಲಿ ಇಡಬೇಕು ಎನ್ನುವ ಚಿಂತೆ ಬೇರೆ.
ಸ್ಥಳಾವಕಾಶವಿಲ್ಲ :
ನಿತ್ಯ ಸಲ್ಲಿಕೆಯಾಗುವ ಕಡತಗಳಿಂದ ಕಚೇರಿ ತುಂಬಿ ಹೋಗಿವೆ. ಇದರ ಮಧ್ಯೆಯಲ್ಲಿ ಕುಳಿತು ಸಿಬಂದಿ ಕೆಲಸ ಮಾಡಬೇಕು. ಒಂದು ಸಣ್ಣ ಕೊಠಡಿಯಲ್ಲಿ ಮೂರರಿಂದ 6 ಸಿಬಂದಿ ಕೆಲಸ ಮಾಡುವ ಪರಿಸ್ಥಿತಿ ಇಲ್ಲಿದೆ.
ಒಂದು ನಗರಸಭೆ ಕಚೇರಿಗೆ ಇರ ಬೇಕಾದ ಮೂಲಸೌಕರ್ಯ ಈ ಕಟ್ಟಡದಲ್ಲಿ ಇಲ್ಲ. ಒಂದೇ ಬಾರಿ 50 ಮಂದಿ ಬಂದರೆ ಇಲ್ಲಿ ಕುಳಿತುಕೊಳ್ಳಲು ಜಾಗವಿಲ್ಲ. ಗಂಟೆಗಟ್ಟಲೆ ನಿಂತುಕೊಂಡು ಜನರು ವ್ಯವಹರಿಸಬೇಕಾಗಿದೆ.
ಶೀಘ್ರದಲ್ಲಿ ಟೆಂಡರ್ :
ಹಳೆಯ ತಾಲೂಕು ಕಚೇರಿಗೆ ಸ್ಥಳಾಂತ ರಕ್ಕೆ ಅನುಮತಿ ಸಿಕ್ಕಿದ ಕೂಡಲೇ ಟೆಂಡರ್ ಕರೆದು ಕಟ್ಟಡವನ್ನು ಅಗತ್ಯವಿರುವ ಬದಲಾವಣೆ ಮಾಡಿಕೊಳ್ಳಲು ನಗರಸಭೆ ನಿರ್ಧರಿಸಿದೆ. ಕಚೇರಿ ಪಕ್ಕದಲ್ಲಿ ಇಂದಿರಾ ಕ್ಯಾಂಟೀನ್, ಬಸ್ ನಿಲ್ದಾಣವಿದೆ. ವಾಹನ ಪಾರ್ಕಿಂಗ್‌ಗೆ ಸಾಕಷ್ಟು ಜಾಗ ಇದೆ. ಹಳೆ ಕಟ್ಟಡವನ್ನು ಮುಂದೆ ನಗರಸಭೆ ಬಾಡಿಗೆ ನೀಡುವ ಉದ್ದೇಶ ಹೊಂದಿದೆ.
6.50 ಕೋ.ರೂ. ಬೇಡಿಕೆ :
ಹಳೆ ತಾಲೂಕು ಕಚೇರಿ ಕಟ್ಟಡಕ್ಕೆ ನಗರಸಭೆಯನ್ನು ಸ್ಥಳಾಂತರಿಸುವ ಇರಾದೆ ಇದೆ. ಇದಕ್ಕೆ ಕಂದಾಯ ಇಲಾಖೆ 6.50 ಕೋ.ರೂ. ಕೇಳಿದ್ದು, ಇದನ್ನು ನೀಡಲು ನಗರಸಭೆ ನಿರಾಕರಿಸಿದೆ. ಸಾರ್ವಜನಿಕರಿಗೆ ಸೇವೆ ನೀಡುವ ಕಚೇರಿಗೆ ಇಷ್ಟು ಮೊತ್ತ ವಿಧಿಸುವುದು ಸರಿಯಲ್ಲ. ಈ ಸ್ಥಳವನ್ನು ಉಚಿತವಾಗಿ, ಇಲ್ಲವೇ ಬಾಡಿಗೆ ಅಥವಾ ಲೀಸ್‌ಗೆ ನೀಡುವಂತೆ ನಿರ್ಣಯಮಾಡಿ, ಶಾಸಕರು, ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಪ್ರಸ್ತುತ ಕಚೇರಿಯು ಕಾರ್ಯ ನಿರ್ವಹಿಸುತ್ತಿರುವ ಪ್ರದೇಶದಲ್ಲಿ ಪಾರ್ಕಿಂಗ್ ಸೇರಿದಂತೆ ಇತರ ತೊಂದರೆಗಳಿವೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಳೆಯ ತಾಲೂಕು ಕಚೇರಿಗೆ ಸ್ಥಳಾಂತರಿಸುವ ಚಿಂತನೆ ಇದೆ.-ಮೋಹನ್ ರಾಜ್, ಎಎಇ ನಗರಸಭೆ, ಉಡುಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.