ಸ್ವಚ್ಛ ಕೊಲ್ಲೂರು ಪರಿಕಲ್ಪನೆಗೆ ಇಚ್ಛಾಶಕ್ತಿ ಕೊರತೆ
ವಾಹನ ನಿಲುಗಡೆಗೆ ಹೆಚ್ಚುವರಿ ಶುಲ್ಕ ವಸೂಲಿ ಆರೋಪ
Team Udayavani, Sep 27, 2019, 5:36 AM IST
ಕೊಲ್ಲೂರು: ದಕ್ಷಿಣ ಭಾರತದ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಪರಿಸರವು ಪ್ಲಾಸ್ಟಿಕ್ ಬಾಟಲಿ ಸಹಿತ ಇನ್ನಿತರ ತ್ಯಾಜ್ಯಗಳಿಂದ ಕೂಡಿದ್ದು ಸ್ವಚ್ಛತೆಯಲ್ಲಿ ಎಡವಿದೆ.
ಲಕ್ಷಾಂತರ ಭಕ್ತರು ನಂಬಿದ ಕೊಲ್ಲೂರು ದೇಗುಲಕ್ಕೆ ಪ್ರತಿದಿನ ಸಹಸ್ರಾರು ಮಂದಿ ಭಕ್ತರು ದೇವಿ ದರ್ಶನಕ್ಕೆ ಆಗಮಿಸುತ್ತಾರೆ. ನೂರಾರು ಮಂದಿ ದೇಗುಲದ ಪರಿಸರದ ವಸತಿಗೃಹದಲ್ಲಿ ತಂಗುತ್ತಾರೆ. ಆದರೆ ಇಲ್ಲಿನ ಸ್ವತ್ಛತೆಯ ಬಗ್ಗೆ ವಿಶ್ಲೇಷಿಸಿದರೆ ಸ್ವಚ್ಛ ಭಾರತದ ಪರಿಕಲ್ಪನೆಗೆ ಒಂದಿಷ್ಟು ತೊಡಕಾದಂತೆ ಕಂಡುಬರುತ್ತಿದೆ.
ನಿಷೇಧಿತ ಪ್ರದೇಶದಲ್ಲಿ ತ್ಯಾಜ್ಯ
ದೇಗುಲದ ವತಿಯಿಂದ ಖಾಸಗಿಯವರಿಗೆ ಗುತ್ತಿಗೆ ಆಧಾರದಲ್ಲಿ ವಹಿಸಿಕೊಡಲಾಗಿರುವ ಭಕ್ತರ ವಾಹನ ನಿಲುಗಡೆ ಪ್ರದೇಶವು ಪ್ಲಾಸ್ಟಿಕ್ ಸಹಿತ ಇನ್ನಿತರ ತ್ಯಾಜ್ಯಗಳಿಂದ ಕೂಡಿದ್ದು ಸನಿಹದ ನೀರಿನ ಒಳಚರಂಡಿಯ ಮುಚ್ಚಿಗೆಯು ತೆರೆದಿದ್ದು ಆ ಭಾಗದಲ್ಲಿ ತ್ಯಾಜ್ಯ ಹರಡಿದ್ದು ಪರಿಸರವು ಮಲಿನಗೊಂಡಿದೆ.
ಹೆಚ್ಚುವರಿ ಶುಲ್ಕ ವಸೂಲಿ
ಲಘು ಹಾಗೂ ಘನ ವಾಹನಗಳ ನಿಲುಗಡೆಗೆ ನಿಗದಿ ಪಡಿಸಲಾಗಿರುವ ದರದಿಂದ ಹೆಚ್ಚು ಶುಲ್ಕ ಪಡೆಯುತ್ತಿತುವುದು ಕಂಡು ಬಂದಿದೆ. ಕಾರುಗಳಿಗೆ ನಿಗದಿ ಪಡಿಸಲಾಗಿರುವ 20 ರೂ. ಶುಲ್ಕದ ಬದಲು 30 ರೂ.ಗಳ ರಸೀದಿ ನೀಡಿ ಹಣ ವಸೂಲಿ ಮಾಡುವ ಪ್ರವೃತ್ತಿಯ ಬಗ್ಗೆ ಭಕ್ತರು ದೂರುತ್ತಿದ್ದಾರೆ. ವಾಹನ ನಿಲುಗಡೆಯ ಪ್ರವೇಶ ದ್ವಾರದಲ್ಲಿ ನಿಗದಿತ ಶುಲ್ಕ ವಸೂಲಿ ದರ ಪಟ್ಟಿಯನ್ನು ಹಾಕದೆ ಬಹುದೂರದ ಹಿಂಭಾಗದಲ್ಲಿ ಹಾಕಿರುವುದು ಶಂಕೆಗೆ ಎಡೆಮಾಡಿದೆ.
ಸೌಪರ್ಣಿಕಾ ನದಿ
ಮತ್ತೆ ಮಲಿನ
ಭಕ್ತರ ತೀರ್ಥ ಸ್ನಾನದ ಸೌಪರ್ಣಿಕಾ ನದಿ ಪಾರ್ಶ್ವವು ಮತ್ತೆ ಮಲಿನಗೊಳ್ಳುತ್ತಿದ್ದು ತ್ಯಾಜ್ಯಗಳ ಸಹಿತ ಎಸೆಯಲಾದ ಹಳೆ ಕಟ್ಟಡದ ವಸ್ತುಗಳು ಕಂಡು ಬಂದಿದೆ.
ಸೂಕ್ತ ವ್ಯವಸ್ಥೆಗೆ ಕ್ರಮ
ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣೆಗೆ ಕೊಲ್ಲೂರು ಪಂಚಾಯತ್ ವ್ಯವಸ್ಥೆ ಕೈಗೊಂಡಿದೆ. ಆದರೂ ಅನೇಕ ಕಡೆ ಭಕ್ತರು ಸ್ವಚ್ಚತೆಯ ಅರಿವಿಲ್ಲದೇ ತ್ಯಾಜ್ಯ ಎಸೆಯುತ್ತಿರುವುದು ಖೇದಕರ. ಪಂಚಾಯತ್ ಅಂಗಡಿ ಮುಂಗಟ್ಟುಗಳ ತ್ಯಾಜ್ಯವನ್ನು ದಿನಕ್ಕೆ 3 ಬಾರಿ ವಿಲೇವಾರಿಗೊಳಿಸುತ್ತದೆ.
-ರಾಜೇಶ್, ಪಿ.ಡಿ.ಒ. ಕೊಲ್ಲೂರು ಗ್ರಾ.ಪಂ.
ಖೇದಕರ
ವಿವಿಧ ಸಂಘಟನೆಗಳ ಸಹಕಾರದಿಂದ ಕೊಲ್ಲೂರು ಸ್ವಚ್ಚತಾ ಕಾರ್ಯಕ್ರಮ ನಡೆಸಲಾಗಿದೆ ಆದರೂ ಅಲ್ಲಲ್ಲಿ ತ್ಯಾಜ್ಯ ಎಸೆಯುತ್ತಿರುವುದು ಖೇದಕರ.
-ಹರೀಶ್ ಕುಮಾರ್ ಶೆಟ್ಟಿ, ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ ಕೊಲ್ಲೂರು ಕ್ಷೇತ್ರ
– ಡಾ| ಸುಧಾಕರ ನಂಬಿಯಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.