ಬೊಳ್ಜೆ ಕೆರೆಯನ್ನು ಗ್ರಾ.ಪಂ.ಗೆ ದಾನ ಮಾಡಿದ ಮೂಡುಮನೆ ಕುಟುಂಬ!
Team Udayavani, Mar 25, 2017, 4:06 PM IST
ಕಾಪು: ಉದ್ಯಾವರ ಗ್ರಾ. ಪಂ. ವ್ಯಾಪ್ತಿಯ ಬೊಳ್ಜೆಯಲ್ಲಿ ವರ್ಷಪೂರ್ತಿ ನೀರಿನ ಒರತೆಯಿರುವ ಕೆರೆಯೊಂದನ್ನು ಗ್ರಾ.ಪಂ.ನ ವಿನಂತಿಯ ಮೇರೆಗೆ ಸಾರ್ವಜನಿಕರ ಉಪಯೋಗಕ್ಕಾಗಿ ದಾನ ರೂಪದಲ್ಲಿ ನೀಡುವ ಮೂಲಕ ಉದ್ಯಾವರ ಬೊಳ್ಜೆ – ಮೂಡುಮನೆ ಕುಟುಂಬಸ್ಥರು ಜನಸೇವೆಗೆ ಮುಂದಾಗಿದ್ದಾರೆ.
ಉದ್ಯಾವರ ಬೊಳೆj ದಿ| ಸಿಂಗ ರಾಮ ಪೂಜಾರಿ ಅವರ ಪರವಾಗಿ ಪತ್ನಿ ಚಂಚಲಾಕ್ಷಿ ಪೂಜಾರಿ ಮತ್ತು ಅವರ ಮಕ್ಕಳು ತಮ್ಮ ಪಾಲಿಗೆ ಬಂದಿರುವ ಸುಮಾರು 2.50 ಸೆಂಟ್ಸ್ ನಷ್ಟು ವಿಸೀ¤ರ್ಣದ ಬೊಳ್ಜೆ ಕೆರೆಯನ್ನು ಪಂಚಾಯತ್‌ನ ಸುಪರ್ದಿಗೆ ಒದಗಿಸಿದ್ದು, ಗ್ರಾಮ ಪಂಚಾಯತ್ ಕೆರೆಯನ್ನು ಪುನರುಜ್ಜೀವನಗೊಳಿಸಲು ಯೋಜನೆ ರೂಪಿಸಿದೆ.
ದಾನ ಪತ್ರ ಹಸ್ತಾಂತರ
ಉದ್ಯಾವರ ಮೂಡುಮನೆ ದಿ| ಸಿಂಗ ರಾಮ ಪೂಜಾರಿ ಅವರ ಅಳಿಯ/ ಪಡುಬಿದ್ರಿ ಗ್ರಾ. ಪಂ. ಉಪಾಧ್ಯಕ್ಷ ವೈ. ಸುಕುಮಾರ್ ಅವರು ಬೊಳ್ಜೆ ಕೆರೆಯನ್ನು ಗ್ರಾ.ಪಂ. ಗೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ನಡೆಸಿದ್ದು, ದಾನಪತ್ರ ಸಹಿತವಾಗಿ ದಾಖಲೆಗಳನ್ನು ಗ್ರಾ. ಪಂ. ಅಧ್ಯಕ್ಷೆ ಸುಗಂಧಿ ಶೇಖರ್ ಅವರಿಗೆ ಹಸ್ತಾಂತರಿಸಿದ್ದಾರೆ.
ಬೊಳ್ಜೆಯಲ್ಲಿ ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ? : ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಳ್ಜೆ ಪ್ರದೇಶದ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಹಲವಾರು ಯೋಜನೆ ಗಳನ್ನು ಕೈಗೆತ್ತಿಕೊಂಡಿದ್ದು, ಅದರಲ್ಲಿ ಬೊಳ್ಜೆ ಕೆರೆ ನವೀಕರಣವೂ ಒಂದಾಗಿತ್ತು.ಆದರೆ ಈ ಕೆರೆ ಖಾಸಗಿಯವರ ಸೊತ್ತಾಗಿದ್ದರಿಂದ ಕಾಮಗಾರಿ ನಡೆಸಲು ವಿಳಂಬವಾಗಿದ್ದು, ಇದೀಗ ಕೆರೆಯನ್ನು ದಾನ ರೂಪದಲ್ಲಿ ಗ್ರಾಮ ಪಂಚಾಯತ್‌ಗೆ ಹಸ್ತಾಂತರಿಸಿರುವುದರಿಂದ ಕೆರೆ ಹೂಳೆತ್ತುವಿಕೆ ಸಹಿತ ವಿವಿಧ ಕಾಮಗಾರಿಗಳು ಭರದಿಂದ ಸಾಗುತ್ತಿವೆ.100ಕ್ಕೂ ಹೆಚ್ಚುಮನೆಗಳಿಗೆ ಅನುಕೂಲ ಬೊಳ್ಜೆ ಕೆರೆ ಪುನರುಜೀjವನಗೊಂಡಲ್ಲಿ ಉದ್ಯಾವರ ಗ್ರಾ. ಪಂ. ವ್ಯಾಪ್ತಿಯ 2,3,4ನೇ ವಾರ್ಡ್‌ನ ಸುಮಾರು 100ಕ್ಕೂ ಹೆಚ್ಚು ಮನೆಗಳ ಕುಡಿಯುವ ನೀರಿನ ಪೂರೈಕೆಯ ಕೊರತೆಯು ನೀಗಲಿದ್ದು, ನೇರವಾಗಿ ಮನೆಗಳಿಗೆ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಗ್ರಾ. ಪಂ. ಸದಸ್ಯ ಸಂತೋಷ್ ಸುವರ್ಣ ಬೊಳ್ಜೆ ಉದಯವಾಣಿಗೆ ತಿಳಿಸಿದ್ದಾರೆ.
ಭೂಮಿಗೆ ಭಾರೀ ಬೇಡಿಕೆಯಿರುವು ದರಿಂದ ತುಂಡು ಇಂಚು ಭೂಮಿಯನ್ನೂ ಸರಕಾರಿ ಉದ್ದೇಶಕ್ಕೆ ದಾನ ರೂಪದಲ್ಲಿ ಬಿಟ್ಟು ಕೊಡಲು ಹಿಂಜರಿಯುವವರೇ ಹೆಚ್ಚಾಗಿರುವ ಇಂದಿನ ಕಾಲದಲ್ಲಿ ತಮ್ಮ ಕುಟುಂಬದ ಸುರ್ಪದಿಯಲ್ಲಿರುವ, ಅದೂ ಕೂಡಾ ನೀರಿನ ಮೂಲವೇ ಆಗಿರುವ ಬೊಳ್ಜೆ ಕೆರೆಯನ್ನು ದಾನರೂಪದಲ್ಲಿ ಪಂಚಾಯತ್‌ಗೆ ಹಸ್ತಾಂತರಿಸಿದ ಉದ್ಯಾವರ ಬೊಳ್ಜೆ ಮೂಡುಮನೆ ದಿ| ಸಿಂಗ ರಾಮ ಪೂಜಾರಿ ಕುಟುಂಬಕ್ಕೆ ಗ್ರಾಮ ಪಂಚಾಯತ್ ಆಡಳಿತ ಮತ್ತು ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.