ಸಾರ್ವಜನಿಕರಿಂದಲೇ ಕೆರೆಗಳ ಹೂಳೆತ್ತುವಿಕೆ
Team Udayavani, Jun 10, 2019, 6:10 AM IST
ಕೋಟ: ಈ ಬಾರಿ ಎಲ್ಲೆಡೆ ಜಲಕ್ಷಾಮ ತಲೆದೋರಿದೆ. ಕೆರೆಗಳು ಬತ್ತಿ ಬರಿದಾಗಿದೆ. ಆದರೆ ಇವುಗಳನ್ನು ಅಭಿವೃದ್ಧಿಪಡಿಸಲು ಆಡಳಿತ ವ್ಯವಸ್ಥೆ ಹೆಚ್ಚು ಆಸಕ್ತಿವಹಿಸುತ್ತಿಲ್ಲ ಎನ್ನುವುದನ್ನು ಮನಗೊಂಡು ಸ್ಥಳಿಯರೇ ಶ್ರಮದಾನ ಮೂಲಕ ಕೋಟ ಸುತ್ತ-ಮುತ್ತ ಆರು ಕೆರೆ, ಪುಷ್ಕರಣಿಗಳನ್ನು ಸ್ವತ್ಛಗೊಳಿಸಿ ನೀರುಕ್ಕುವಂತೆ ಮಾಡಿ ಮಾದರಿಯಾಗಿದ್ದಾರೆ.
ಕೋಟ ಸುತ್ತ-ಮುತ್ತ ಆರು ಕೆರೆಗಳ ಅಭಿವೃದ್ಧಿ
ಸುಮಾರು 600 ವರ್ಷದ ಇತಿಹಾಸವಿರುವ ಕೋಟ ಹಂದಟ್ಟಿನ ಹಂದೆ ಮಹಾವಿಷ್ಣು ಮಹಾಗಣಪತಿ ದೇವಸ್ಥಾನದ ಪುಷ್ಕರಣಿ ಹೊಯ್ಸಳರ ಕಾಲದ್ದು. ಇದರಲ್ಲಿ ಹೂಳು ತುಂಬಿ ನೀರು ಸಂಗ್ರಹವಾಗುತ್ತಿರಲಿಲ್ಲ. ಹೀಗಾಗಿ ಸ್ಥಳೀಯರು ಮಾ. 31ರಿಂದ ನಿರಂತರ ಶ್ರಮದಾನ ನಡೆಸಿ ಸ್ವತ್ಛಗೊಳಿಸಿದರು. ಇದು ಈ ಭಾಗದಲ್ಲಿ ನಡೆದ ಪ್ರಥಮ ಕೆರೆ ಸ್ವಚ್ಚತಾ ಕಾರ್ಯವಾಗಿತ್ತು.
ಅದೇ ರೀತಿ ಸಾವಿರಾರು ವರ್ಷ ಇತಿಹಾಸವಿರುವ ಗುಂಡ್ಮಿ ಮಹಾಗಣಪತಿ ದೇವಸ್ಥಾನದ ಕೆರೆಗೆ ಹೆದ್ದಾರಿ ಚತುಷ್ಪಥ ಕಾಮಗಾರಿ ವೇಳೆ ಹಾನಿಯಾಗಿತ್ತು. ದುರಸ್ತಿಗೊಳಿಸುವಂತೆ ಆಡಳಿತ ವ್ಯವಸ್ಥೆಗೆ ಎಷ್ಟೇ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಯುವ ಬ್ರಿಗೇಡ್ ಸಂಸ್ಥೆಯ 50ಕ್ಕೂ ಹೆಚ್ಚು ಕಾರ್ಯಕರ್ತರು ಎಪ್ರಿಲ್ ತಿಂಗಳಲ್ಲಿ ನಾಲ್ಕೈದು ವಾರ ಶ್ರಮದಾನ ನಡೆಸಿ ಪುಷ್ಕರಣಿ ಸ್ವತ್ಛಗೊಳಿಸಿದರು.
ಐತಿಹಾಸಿಕ ಕೋಟ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿ ಹೂಳು ತುಂಬಿ ನೀರು ಬರಿದಾಗಿತ್ತು. ಹೀಗಾಗಿ ಮೇ 26ರಿಂದ ನಿರಂತರ ಒಂದು ವಾರಗಳ ಕಾಲ ಸ್ಥಳೀಯ ಹತ್ತಾರು ಸಂಘಟನೆಗಳ 250ಕ್ಕೂ ಹೆಚ್ಚು ಸ್ವಯಂ ಸೇವಕರು ಜಾತಿ, ಧರ್ಮ, ಪಕ್ಷ ಬೇಧವಿಲ್ಲದೆ ಶ್ರಮದಾನ ನಡೆಸಿ ಸ್ವತ್ಛಗೊಳಿಸಿದರು.
ಕೋಟ ರಾಜಶೇಖರ ದೇವಸ್ಥಾನದ ಪಕ್ಕದ ವರುಣತೀರ್ಥ ಕೆರೆಯಲ್ಲೂ ಹೂಳು ತುಂಬಿ ನೀರಿನ ಸಂಗ್ರಹಣೆ ಕುಂಠಿತ ವಾಗಿತ್ತು. ಸ್ಥಳೀಯ ರು ಜೂ. 2ರಿಂದ ನಿರಂತರ ಸ್ವತ್ಛತಾ ಕಾರ್ಯ ನಡೆಸಿ ಕೆರೆ ಸ್ವತ್ಛಗೊಳಿಸಿದರು.
ಕೋಟ ಕಣ್ಣಿನ ಆಸ್ಪತ್ರೆ ಸಮೀಪದ ಅಂಬಾಗಿಲುಕೆರೆ ಸ್ವಚ್ಚತೆಗೆ ಸ್ಥಳೀಯ ಪಾಂಚಜನ್ಯ ಸಂಘ ಆಶ್ರಯದಲ್ಲಿ, ಸ್ಥಳೀಯರ ಸಹಕಾರದೊಂದಿಗೆ ಜೂ.2ರಿಂದ ° ಸ್ವಚ್ಚಗೊಳಿಸುವ ಚಾಲನೆ ನೀಡಲಾಗಿದ್ದು ಇನ್ನೂ ಹಲವು ದಿನಗಳ ಕಾಲ ಕಾಮಗಾರಿ ನಡೆಯಲಿದೆ.
ಸಾಲಿಗ್ರಾಮದ ಪಾರಂಪಳ್ಳಿ ವಿಷ್ಣುಮೂರ್ತಿ ದೇವಸ್ಥಾನದ ಕೆರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಕೃಷಿ, ಅಂತರ್ಜಲವೃದ್ಧಿಗೆ ಸಹಕಾರಿಯಾಗಿದ್ದ ಈ ಕೆರೆ ಕೂಡ ಹೂಳುತುಂಬಿದ ನಿಷ್ಪÅಯೋಜಕವಾಗಿತ್ತು. ಇದೀಗ ಸ್ಥಳೀಯರು ಶ್ರಮದಾನದ ಮೂಲಕ ಇದನ್ನು ಸ್ವಚ್ಚಗೊಳಿಸಿದ್ದಾರೆ.
ದಾನಿಗಳ ಸಹಕಾರ
ಈ ಎಲ್ಲ ಕೆರೆಗಳ ಸ್ವಚ್ಚತೆ ಸಂದರ್ಭ ಸ್ವಯಂ ಸೇವಕರ ಶ್ರಮದಾನಕ್ಕೆ ಕ್ರೈನ್, ಟಿಪ್ಪರ್, ಊಟೋಪಚಾರ , ಲೈಟಿಂಗ್ ಮುಂತಾದ ವ್ಯವಸ್ಥೆಗಳು ಅಗತ್ಯವಿತ್ತು. ಹೀಗಾಗಿ ಗೀತಾನಂದ ಫೌಂಡೇಶನ್‌ನ ಸೇರಿದಂತೆ ಹಲವಾರು ದಾನಿಗಳು ಸಹಕಾರ ನೀಡಿದರು.
ಹಲವು ದಶಕಗಳ ಅನಂತರ ಮಾದರಿ ಕಾರ್ಯ
ನಾಲ್ಕೈದು ದಶಕಗಳಿಂದೀಚೆಗೆ ವರುಣ ತೀರ್ಥ ಕೆರೆ ಹೊರತುಪಡಿಸಿ ಇತರ ಕೆರೆಗಳನ್ನು ಸಾರ್ವಜನಿಕರೇ ಸ್ವಚ್ಚಗೊಳಿಸಿದ ಉದಾಹರಣೆ ಕಡಿಮೆ. ಕೋಟ ಭಾಗದಲ್ಲಿ ಆಡಳಿತ ವ್ಯವಸ್ಥೆಯ ಸಹಕಾರವಿಲ್ಲದೆ ಸ್ಥಳೀಯರು ಶ್ರಮದಾನದ ಮೂಲಕ ಸರಣಿ ಸ್ವಚ್ಚತಾ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ. ಮುಂದೆ ಕೂಡ ಇಂತಹ ಕಾರ್ಯಗಳು ಎಲ್ಲೆಡೆ ನಡೆಯಬೇಕು.
-ಆನಂದ ಸಿ.ಕುಂದರ್, ನಾಲ್ಕು ಕೆರೆಗಳ ಸ್ವತ್ಛತೆ ನೇತೃತ್ವ ವಹಿಸಿದವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
45 Movie: ಕರಾಟೆ ಗೊತ್ತುಂಟು, ಹತ್ತಿರ ಬಂದ್ರೆ ಜಾಗ್ರತೆ!
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Mangaluru: ಬೇಕು ಇಂದೋರ್ ಮಾದರಿ;ದೇಶದ ನಂ.1 ಸ್ವಚ್ಛ ನಗರ ಇಲ್ಲಿಗೆ ಹೇಗೆ ಅನ್ವಯವಾಗುತ್ತದೆ?
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.