ಶ್ರೀಕೃಷ್ಣ ಮಠದಲ್ಲಿ ಲಕ್ಷ ದೀಪೋತ್ಸವ ಸಂಭ್ರಮ: ಕಲಾವಿದರಿಂದ ಭಜನೆ


Team Udayavani, Nov 21, 2018, 2:40 AM IST

lakshadeepa-20-11.jpg

ಉಡುಪಿ: ಶ್ರೀಕೃಷ್ಣಮಠದಲ್ಲಿ ಮಂಗಳವಾರ ಉತ್ಥಾನದ್ವಾದಶಿಯಂದು ಲಕ್ಷದೀಪೋತ್ಸವ ಶುಭಾರಂಭಗೊಂಡಿತು. ನಾಲ್ಕು ದಿನಗಳ ಲಕ್ಷ ದೀಪೋತ್ಸವದ ಆರಂಭದ ದಿನ ಹಲವು ಆಯಾಮಗಳ ಕಾರ್ಯಕ್ರಮ ಸಂಪನ್ನಗೊಂಡಿತು. ದ್ವಾದಶಿಯಾದ ಕಾರಣ ಬೆಳಗ್ಗೆ ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ದೇವರಿಗೆ ಮಹಾಪೂಜೆಯನ್ನು ನಡೆಸಿದರು. ತುಳಸೀ ಪೂಜೆ, ಸಂಕೀರ್ತನೆಗಳು ನಡೆದವು. ಅನ್ನಸಂತರ್ಪಣೆ ನಡೆದ ಬಳಿಕ ಅಪರಾಹ್ನ ರಥಬೀದಿಯಲ್ಲಿ ಲಕ್ಷ ಹಣತೆಗಳನ್ನು ಸ್ಥಾಪಿಸಲು ಶ್ರೀಪಲಿಮಾರು ಮಠಾಧೀಶರು, ಶ್ರೀಪೇಜಾವರ ಮತ್ತು ಶ್ರೀಅದಮಾರು ಕಿರಿಯ ಶ್ರೀಪಾದರು ಮುಹೂರ್ತ ಮಾಡಿದರು.


ಶ್ರೀ ಕೃಷ್ಣ ಮಠದ ಮಧ್ವ ಸರೋವರದ ಬಳಿ ಗೋಷ್ಠಿ ಗಾನದ ‘ಏಳು ನಾರಾಯಣನೇ’, ‘ಪ್ರಬೋಧೋತ್ಸವ’ ಸಮಾರಂಭ ನಡೆಯಿತು. ಮಧ್ವಸರೋವರದ ಸುತ್ತ ಕುಳಿತು ಜಿಲ್ಲೆಯ ವಿವಿಧ ಭಜನ ಮಂಡಳಿಗಳಿಂದ ಮತ್ತು ದಾಸ ಸಾಹಿತ್ಯ ಪ್ರಾಜೆಕ್ಟ್ನಿಂದ ಬಂದ ಸಾವಿರಾರು ಭಜನ ಕಲಾವಿದರು ಗೋಷ್ಠಿ ಗಾನವನ್ನು ನಡೆಸಿಕೊಟ್ಟರು. ವಿದ್ವಾಂಸರಾದ ಕೊರ್ಲಳ್ಳಿ ವೆಂಕಟೇಶ ಆಚಾರ್ಯ, ಕೆ. ಅಪ್ಪಣ್ಣಾಚಾರ್ಯ, ವಿದ್ವಾನ್‌ ಸದಾನಂದ ಶಾಸ್ತ್ರಿಯವರು ಸಾಮೂಹಿಕ ಗೋಷ್ಠಿ ಗಾನದ ಸಾರಥ್ಯ ವಹಿಸಿ ಭಜನೆಯ ಮಹತ್ವವನ್ನು ಸಾರಿದರು.


ನಿರಂತರ ಭಜನೆಯ ಸಂಚಾಲಕ ಗುರುರಾಜ್‌ ಆಚಾರ್ಯ ಕಂಪ್ಲಿ, ಸಹ ಸಂಚಾಲಕಿ ಕಮಲಾವತಿ ವಾಸುದೇವ, ಗೀತಾ ಗುರುರಾಜ್‌ ಆಚಾರ್ಯ, ಉಡುಪಿ ಜಿಲ್ಲಾ ಭಜನ ಮಂಡಳಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಭೋಜರಾಜ್‌ ಆರ್‌. ಕಿದಿಯೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಶಿವಕುಮಾರ್‌ ಅಂಬಲಪಾಡಿ, ಸಂಘಟನಾ ಕಾರ್ಯದರ್ಶಿ ಸುಂದರ್‌ ಜತ್ತನ್‌ ತೆಂಕನಿಡಿಯೂರು, ಉಡುಪಿ ತಾಲೂಕು ಅಧ್ಯಕ್ಷ ಧನಂಜಯ ಕಾಂಚನ್‌ ಮಲ್ಪೆ, ಉಡುಪಿ ನಗರ ವಲಯಾಧ್ಯಕ್ಷ ಕಿಶೋರ್‌ ಕುಮಾರ್‌ ಕನ್ನರ್ಪಾಡಿ, ಉಡುಪಿ ಕರಾವಳಿ ವಲಯಾಧ್ಯಕ್ಷ ಕಿರಣ್‌ ಕುಂದರ್‌ ಮಲ್ಪೆ, ಉಮೇಶ್‌ ಆಚಾರ್ಯ ಉಪಸ್ಥಿತರಿದ್ದರು. ಬಳಿಕ ಭಜನ ಕಲಾವಿದರು ರಥಬೀದಿಯಲ್ಲಿ ಆಕರ್ಷಕ ಶೋಭಾಯಾತ್ರೆ ನಡೆಸಿಕೊಟ್ಟರು. ಕಲಾವಿದರು ಅರಸಿನ ಕುಂಕುಮದ ಪ್ರತೀಕವಾದ ಸಮವಸ್ತ್ರಗಳನ್ನು ಧರಿಸಿದ್ದರು. 


ಕಳೆದ ನಾಲ್ಕು ತಿಂಗಳಿಂದ ಚಾತುರ್ಮಾಸ್ಯ ವ್ರತವಾದ ಕಾರಣ ಕೃಷ್ಣಮಠದಲ್ಲಿ ಉತ್ಸವಗಳು ನಡೆಯುತ್ತಿರಲಿಲ್ಲ.ಉತ್ಥಾನ ದ್ವಾದಶಿಯಂದು ಲಕ್ಷ ದೀಪೋತ್ಸವದ ದಿನ ಶ್ರೀಕೃಷ್ಣಮಠದಲ್ಲಿ ಉತ್ಸವಗಳು ಆರಂಭಗೊಂಡಿತು. ರಾತ್ರಿ ರಥಬೀದಿ ಮತ್ತು ಮಧ್ವ ಸರೋವರದ ಸುತ್ತ ಲಕ್ಷ ಹಣತೆಗಳ ದೀಪದಲ್ಲಿ ಉತ್ಸವ ಸಂಪನ್ನಗೊಂಡಿತು. 


ಕೃಷ್ಣ ಮಠದಲ್ಲಿ ಚಾತುರ್ಮಾಸ್ಯ ಸಮಾಪ್ತಿಯ ದೇವಪ್ರಬೋಧಿನೀ ಏಕಾದಶಿಯಂದು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹಾಗೂ ಅದಮಾರು ಕಿರಿಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ತುಳಸಿ ಹರಿಮಾಣವನ್ನು ತಲೆಯ ಮೇಲಿಟ್ಟು ‘ಡಂಗುರಾವ ಸಾರಿ ಹರಿಯ…’  ದಾಸರ ಪದಕ್ಕೆ ನೃತ್ಯ ಮಾಡಿದರು.


ಪರ್ಯಾಯ ಶ್ರೀಪಲಿಮಾರು, ಶ್ರೀಪೇಜಾವರ ಮತ್ತು ಶ್ರೀಅದಮಾರು ಕಿರಿಯ ಶ್ರೀಗಳು ಹಣತೆಗಳಿಗೆ ಮುಹೂರ್ತ ಮಾಡಿದರು.


ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ತಿರುಪತಿ ತಿರುಮಲ ದಾಸ ಸಾಹಿತ್ಯ ಪ್ರೊಜೆಕ್ಟ್, ಮಂತ್ರಾಲಯ ಗುರು ಸಾರ್ವಭೌಮ ದಾಸ ಸಾಹಿತ್ಯ ಪ್ರೊಜೆಕ್ಟ್  ಮತ್ತು ಉಡುಪಿ ಜಿಲ್ಲಾ ಭಜನ ಮಂಡಳಿಗಳ ಒಕ್ಕೂಟದವರಿಂದ ಭಜನ ಕಾರ್ಯಕ್ರಮ ನಡೆಯಿತು. 


ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀವಿಜಯದಾಸರ ಆರಾಧನೆಯ ಕೊನೆಯ ದಿನ ಹಾಗೂ ದೇವಪ್ರಬೋಧಿನೀ ಏಕಾದಶಿ ಪ್ರಯುಕ್ತ ಮೈಸೂರು ರಾಮಚಂದ್ರಾಚಾರ್‌ ಇವರ ನೇತೃತ್ವದಲ್ಲಿ ಜಾಗರಣೆ ನಡೆಯಿತು.


ಚಿತ್ರಗಳು: ಆಸ್ಟ್ರೋ ಮೋಹನ್

ಟಾಪ್ ನ್ಯೂಸ್

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

accident

Udupi: ಬೈಕ್‌ ಢಿಕ್ಕಿ; ವ್ಯಕ್ತಿಗೆ ಗಾಯ; ಪ್ರಕರಣ ದಾಖಲು

2

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

complaint

Udupi: ಕಾರ್ಮಿಕನ ಬೈಕ್‌ ಕಳ್ಳತನ; ಪ್ರಕರಣ ದಾಖಲು

sand

Karkala: ಪರವಾನಿಗೆ ಇಲ್ಲದೆ ಮರಳು ಲೂಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.