ಮರವಂತೆ ರಾ.ಹೆ. ಬದಿಯಲ್ಲಿ ಮಣ್ಣು ಕುಸಿತ, ಎಚ್ಚರ ಅಗತ್ಯ
Team Udayavani, Jul 18, 2017, 2:40 AM IST
ಮರವಂತೆ(ಉಪ್ಪುಂದ): ಮರವಂತೆ ಶ್ರೀ ರಾಮ ಭಜನ ಮಂದಿರದ ಸಮೀಪ ರಾ.ಹೆದ್ದಾರಿ 66ರಲ್ಲಿ ರಸ್ತೆ ಬದಿಯು ಕುಸಿದು ಹೋಗಿದ್ದು ವಾಹನ ಸವಾರರಿಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ.
ಕಂದಕ
ರಾ.ಹೆದ್ದಾರಿ 66ರಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಮರವಂತೆ ಪೇಟಿಯಿಂದ ನಾವುಂದದವರೆಗೆ ಹೊಸದಾಗಿ ನಿರ್ಮಿಸಿರುವ ರಸ್ತೆಯಲ್ಲಿ ವಾಹನಗಳು ಪ್ರಯಾಣಿಸುತ್ತಿವೆ. ಕಳೆದೆರಡು ದಿನಗಳಿಂದ ಸುರಿದ ಮಳೆಯಿಂದಾಗಿ ಶ್ರೀ ರಾಮ ಭಜನ ಮಂದಿರ ಸಮೀಪ ಹೆದ್ದಾರಿಯ ಪುಟ್ಪಾತ್ನ ಮಣ್ಣು ಕುಸಿದು ಕಂದಕ ಉಂಟಾಗಿದೆ.
ಪುಟ್ಪಾತ್ ಇಲ್ಲವಾಗಿದೆ
ರಾಮ ಮಂದಿರದ ಬಳಿಯ ರಾ.ಹೆದ್ದಾರಿಯ ಬದಿಗೆ ತುಂಬಿಸಲಾಗಿರುವ ಮಣ್ಣು ಡಾಮರನ ಅಂಚಿನವರೆಗೆ ಕುಸಿದು ಹೋಗಿರುವುದರಿಂದ ರಸ್ತೆಯ ಪುಟ್ಪಾತ್ ಇಲ್ಲವಾಗಿದೆ. ಇದರಿಂದ ಪಾದಚಾರಿಗಳು ಹಾಗೂ ಸೈಕಲ್ ಸವಾರರು ರಸ್ತೆಯ ಮೇಲೆ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಎಚ್ಚರ ಅಗತ್ಯ
ರಸ್ತೆ ಬದಿಯ ಅಂಚು ಇಲ್ಲದಿರುವುದರಿಂದ ವಾಹನಗಳು ಸಂಚರಿಸುವಾಗ ಜಾಗೂರುಕತೆ ವಹಿಸುವುದು ಆವಶ್ಯಕವಾಗಿದೆ. ಇಲ್ಲಿ ಎರಡು ದೊಡ್ಡ ವಾಹನಗಳು ಒಟ್ಟಿಗೆ ಚಲಿಸುವಾಗ ಬೈಕ್ ಸವಾರರು ತೀವ್ರ ಜಾಗೃತರಾಗಿರುವುದು ಅಗತ್ಯ, ಒಂದು ವೇಳೆ ರಸ್ತೆ ಬಿಟ್ಟು ವಾಹನವನ್ನು ಕೆಳಗಿಳಿಸಿದರೆ ಹೊಂಡಕ್ಕೆ ಉರುಳುವ ಪರಿಸ್ಥಿತಿ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.