ಹೀಗಿರುತ್ತದೆ ಸಿಮ್ ಸಹಿತ ಲ್ಯಾಪ್‌ಟಾಪ್!
Team Udayavani, Apr 15, 2018, 10:35 AM IST
ಮಣಿಪಾಲ: ಲ್ಯಾಪ್‌ಟಾಪ್‌ಗೆ ಇಂಟರ್ನೆಟ್ ಸಂಪರ್ಕ ಬೇಕೇ ಬೇಕು. ಪ್ರಸ್ತುತ ಟೆಲಿಕಾಂ ಕಂಪೆನಿಗಳ ಡಾಂಗಲ್ ಖರೀದಿಸಬೇಕು ಅಥವಾ ಯಾವುದಾದರೂ ವೈಫೈಗೆ ಕನೆಕ್ಟ್ ಆಗಬೇಕು ಯಾ ಮೊಬೈಲ್‌ನಿಂದ ಸಂಪರ್ಕ ಪಡೆಯಬೇಕು. ಆದರೆ ಇನ್ನು ಮುಂದೆ ಲ್ಯಾಪ್‌ಟಾಪ್‌ನಲ್ಲೇ ಇಂಟರ್ನೆಟ್ ಸಂಪರ್ಕ ಸಾಧ್ಯವಾಗಲಿದೆ. ರಿಲಯನ್ಸ್ ಜಿಯೋ, ಭಾರತದಲ್ಲಿ ಇಂಥ ಲ್ಯಾಪ್‌ಟಾಪ್ ಪರಿಚಯಿಸಲು ಮುಂದಡಿ ಇಟ್ಟಿದ್ದು, ಪ್ರಸಿದ್ಧ ಮೊಬೈಲ್ ಪ್ರೊಸೆಸರ್ ತಯಾರಕ ಕ್ವಾಲ್‌ಕಮ್ ನೊಂದಿಗೆ ಮಾತುಕತೆ ನಡೆಸುತ್ತಿದೆ. ಇದರ ಸಾಧ್ಯತೆಗಳತ್ತ ಒಂದು ನೋಟ ಇದು.
ಲ್ಯಾಪ್‌ಟಾಪ್ ಹೇಗೆಕಾರ್ಯನಿರ್ವಹಿಸುತ್ತದೆ ?
ಲ್ಯಾಪ್‌ಟಾಪ್ ಖರೀದಿ ವೇಳೆಅದರೊಂದಿಗೆ ಸಿಮ್ ಕೂಡ ಇರುತ್ತದೆ
ಮಾರಾಟದ ಬಳಿಕ ಹೆಸರು ನೋಂದಾಯಿಸಿ,ಸಿಮ್ ಆ್ಯಕ್ಟಿವೇಶನ್ ಮಾಡಲಾಗುತ್ತದೆ
ಆ್ಯಕ್ಟಿವೇಶನ್ ಬಳಿಕ ಲ್ಯಾಪ್‌ಟಾಪ್ ವಾರೆಂಟಿ, ಸಪೋರ್ಟ್ ಲಭ್ಯ
ಆಫ್ ಮಾಡದೇ ಇದ್ದರೆ, 24 ತಾಸೂ ಹೀಗಿರುತ ಇಂಟರ್ನೆಟ್ ಜತೆ ಸಂಪರ್ಕ ಹೊಂದಿರುತ್ತದೆ
ಬ್ಯಾಟರಿ ಅವಧಿ ಹೆಚ್ಚು
ಸ್ಮಾರ್ಟ್ ಫೋನ್ ರೀತಿ ಒಂದು ಬಾರಿ ಆನ್ ಮಾಡಿದರೆ, ಮತ್ತೆ ಶಟ್‌ಡೌನ್ ಮಾಡಬೇಕಾದ ಪ್ರಮೇಯ ಇಲ್ಲ. ಸಾಮಾನ್ಯ ಲ್ಯಾಪ್‌ಟಾಪ್ ರೀತಿ ಆನ್ ಆಗಲು ಸ್ವಲ್ಪ ಹೊತ್ತು ತೆಗೆದುಕೊಂಡರೂ ಬಳಿಕ ಬಳಕೆ ಸರಾಗ. ಸುಮಾರು 20ರಿಂದ 24 ತಾಸು ಬ್ಯಾಟರಿ ಚಾರ್ಜ್ ಇದರಲ್ಲಿದ್ದು, ಆಗಾಗ್ಗೆ ಚಾರ್ಚ್ ಮಾಡಬೇಕಾದ ಪ್ರಮೇಯವಿಲ್ಲ.
ಹೇಗಿರುತ್ತದೆ ಲ್ಯಾಪ್‌ಟಾಪ್
ವಿಂಡೋಸ್ 10 ಆಪರೇಟಿಂಗ್ ಸಿಸ್ಟಂ (ಒಎಸ್) ಇರಲಿದ್ದು, ಇಂಟ ರ್ನೆಟ್ ಸಂಪರ್ಕಕ್ಕೆ ಪರ್ಯಾಯ ತಾಂತ್ರಿಕತೆ ಬೇಕಿಲ್ಲ. ಆನ್ ಮಾಡಿದ ಕೂಡಲೇ ಇಂಟರ್ನೆಟ್ ಸಂಪರ್ಕ ಸಾಧ್ಯ. ಸದ್ಯ ಮಾರುಕಟ್ಟೆಯಲ್ಲಿ ಏಸಸ್, ಡೆಲ್, ಎಚ್‌ಪಿ ಕಂಪೆನಿಗಳ “ಆಲ್ವೇಸ್ ಕನೆಕ್ಟೆಡ್ ಪಿಸಿ’ ಮಾದರಿಯ ಲ್ಯಾಪ್‌ಟಾಪ್ ಗಳಿವೆ. ಇವು ಫ್ಲಿಪ್ ಮಾನಿಟರ್ ರೀತಿಯವು. ಆಫ್ ಮಾಡದೆ ಮುಚ್ಚಿಟ್ಟರೂ ಅಂತರ್ಜಾಲ ಸಂಪರ್ಕ ಚಾಲೂ ಇರುತ್ತದೆ. 4ಜಿ ವಿಒಎಲ್‌ಟಿಇ ಸಂಪರ್ಕ ಇದ್ದು, ಅತಿ ವೇಗದ ಡೌನ್‌ಲೋಡ್, ಅಪ್ ಲೋಡ್ ಸಾಧ್ಯ. ಅಂತರ್ಜಾಲ ಬಳಸಿ ಮಾಡುವ ಎಲ್ಲ ಕಾರ್ಯಗಳನ್ನೂ ಸುಲಲಿತವಾಗಿ ಮಾಡಬಹುದು.
ಹಗುರ, ಕೊಂಡೊಯ್ಯಲು ಸುಲಭ
ಅಲ್ಟ್ರಾಬುಕ್ ಮಾದರಿ ಲ್ಯಾಪ್‌ಟಾಪ್ ಆದ್ದರಿಂದ ಕೊಂಡೊಯ್ಯಲು ಸುಲಭ, ಕಡಿಮೆ ಭಾರ. ಪ್ರಯಾಣ ಕಾಲ ಬಳಕೆಗೆ ಸೂಕ್ತ. ಸಿನೆಮಾ ನೋಡಲು ಅನುಕೂಲವಾಗುವಂತೆ ಎಚ್‌ಡಿ ಸ್ಕ್ರೀನ್ ಇತ್ಯಾದಿ ಸೌಕರ್ಯಗಳಿವೆ. ಜತೆಗೆ ವೈಫೈ,ಬ್ಲೂಟೂತ್, ಕೆಮರಾ, ಎಸ್‌ಡಿ ಕಾರ್ಡ್ ಇದ್ದು, ಹೆಚ್ಚು ಅನುಕೂಲಕರವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.