ನಕ್ಕು ನಗಿಸುವ ಚಿತ್ರ “ಅಪ್ಪೆ ಟೀಚರ್’
Team Udayavani, Mar 26, 2018, 6:45 AM IST
ಉಡುಪಿ: ತುಳು ಚಿತ್ರರಂಗಕ್ಕೂ ಹಾಸ್ಯಕ್ಕೂ ಎಲ್ಲಿಲ್ಲದ ನಂಟು. ಆದರೆ ಪ್ರೇಕ್ಷಕರಿಗೆ ಹಾಸ್ಯ ಚಿತ್ರಗಳು ಏಕತಾನತೆಗೆ ತಿರುಗುತ್ತಿವೆ ಎನ್ನುವಷ್ಟರಲ್ಲಿ ಅಪ್ಪೆ ಟೀಚರ್ ಬಂದಿದ್ದಾರೆ!
ಹಾಸ್ಯವನ್ನೂ ವಿಭಿನ್ನ ಶೈಲಿಯಲ್ಲಿ ಪ್ರೇಕ್ಷಕರಿಗೆ ಉಣಬಡಿಸಬಹುದು ಎಂದು ನಿರ್ದೇಶಕ ಕಿಶೋರ್ ಮೂಡಬಿದಿರೆ “ಅಪ್ಪೆ ಟೀಚರ್’ ಚಿತ್ರದ ಮೂಲಕ ತೋರಿಸಿದ್ದಾರೆ. ಸಿನಿಮಾದ ಪ್ಲಸ್ ಪಾಯಿಂಟ್ ಕಲಾವಿದರು. ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಉಮೇಶ್ ಮಿರ್ಜಾ ಹೀಗೆ ತುಳು ಚಿತ್ರರಂಗದ ದಿಗ್ಗಜರೆಲ್ಲರನ್ನು ಒಂದೇ ಸ್ಕ್ರೀನಿನಲ್ಲಿ ನೋಡಬಹುದು. ಎಲ್ಲರ ಕಾಮಿಡಿ ಟೈಮಿಂಗ್ ಮತ್ತು ನಟನೆಗಳು ಪ್ರೇಕ್ಷಕರನ್ನು ಫುಲ್ ಆಗಿ ನಗಿಸುತ್ತವೆ. ಒಂದು ಕೋಟಿ ಬಜೆಟ್‌ನಲ್ಲಿ ಕೆ.ರತ್ನಾಕರ ಕಾಮತ್ ನಿರ್ಮಾಣ ಮಾಡಿರುವ ಸಿನೆಮಾದ ಮೇಕಿಂಗ್ ಹಾಗೂ ಅದ್ದೂರಿತನಕ್ಕೆ ಪರಭಾಷೆಯ ಸಿನೆಮಾಗಳು ನಾಚಿಕೊಳ್ಳಬೇಕು ಎಂದರೆ ತಪ್ಪಾಗಲಾರದು.
ಉದಯ ಲೀಲಾರ ಕೆಮರಾ ಕೈಚಳಕ ಮತ್ತು ತುಳುನಾಡ ಸಂಗೀತ ಮಾತ್ರಿಕ ರವಿ ಬಸ್ರೂರ್ ಹಿನ್ನೆಲೆ ಸಂಗೀತ ಹಾಗೂ ಸಂಗೀತ ನಿರ್ದೇಶನ ಮಾಡಿರುವ ವನೀಲ್ ವೇಗಸ್ ಚಿತ್ರ ಅಂದವಾಗಿ ಮೂಡಿಬರಲು ಪ್ರಮುಖ ಪಾತ್ರ ವಹಿಸಿವೆ. ಸಿನಿಮಾದ ಸಕ್ಸಸ್‌ಗೆ ಪುಷ್ಠಿ ಕೊಡುವಂತೆ ರೀಮೇಕ್ ಹಕ್ಕು ತಮಿಳು ಹಾಗೂ ಮರಾಟಿಗೆ ಬಹುದೊಡ್ಡ ಮೊತ್ತಕ್ಕೆ ಮಾರಾಟವಾಗುತ್ತಿವೆ ಎಂಬ ವ್ಯಾಲಿ ಸದ್ದಿಲ್ಲದೇ ಹೊರಗೆ ಬಿದ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್
Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.