ಅಂಬುಲೆನ್ಸ್‌ಗೆ ದಾರಿ ಬಿಡಿ: ನಾಮಫಲಕ ಅನಾವರಣ
Team Udayavani, Jan 19, 2019, 12:40 AM IST
ಬ್ರಹ್ಮಾವರ: ಇತ್ತೀಚಿಗಿನ ದಿನಗಳಲ್ಲಿ ಅಪಘಾತಗಳು ಹೆಚ್ಚುತ್ತಿದ್ದು ತರ್ತು ಚಿಕಿತ್ಸೆಗಾಗಿ ಅಂಬುಲೆನ್ಸ್ ಮುಖಾಂತರ ಆಸ್ಪತ್ರೆಗೆ ಕೊಂಡೊಯ್ಯವುದು ಸಹಜವಾಗಿದೆ. ಇಂತಹ ಸಂದರ್ಭದಲ್ಲಿ ಪ್ರಜ್ಞಾವಂತರಾದ ನಾವುಗಳು ಅಂಬುಲೆನ್ಸ್ ವಾಹನ ಚಲಿಸುತ್ತಿರುವಾಗ ದಾರಿ ಬಿಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಸಿಂಡಿಕೇಟ್ ಬ್ಯಾಂಕ್ ವಲಯ ಕಚೇರಿಯ ಮಹಾ ಪ್ರಬಂಧಕ ಭಾಸ್ಕರ ಹಂದೆ ಹೇಳಿದರು.
ಅವರು ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಬ್ರಹ್ಮಾವರ ರುಡ್‌ಡೆಟ್ ಸಂಸ್ಥೆಯಲ್ಲಿ ತರಬೇತಿ ಪಡೆದು ಸ್ವ ಉದ್ಯೋಗ ಆರಂಭಿಸಿ ಯಶಸ್ವಿಯಾದ ಉದ್ಯಮಿಗಳ ಸಂಘ ಆಸರೆ ಸಂಘಟನೆ ವತಿಯಿಂದ ಹೇರೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಂಬುಲೆನ್ಸ್‌ಗೆ ದಾರಿ ಬಿಡಿ ನಾಮ ಫಲಕವನ್ನು ಅನಾವರಣಗೊಳಿಸಿ ಮಾತನಾಡಿದರು.ಒಂದು ಕ್ಷಣವೂ ಕೂಡ ಅಮೂಲ್ಯವಾಗಿದ್ದು, ಆ ಅವಧಿಯಲ್ಲೇ ಗಾಯಾಳು ಪ್ರಾಣಾಪಾಯದಿಂದ ಪಾರಾಗುವ ಸಾಧ್ಯತೆ ಇದೆ ಎಂದರು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್‌ನ ಸಹಾಯಕ ಮಹಾ ಪ್ರಬಂಧಕ ರಾಜಶೇಖರ ಮೇಠಿ, ರುಡ್‌ಸೆಟ್ ಸಂಸ್ಥೆ ಕೇಂದ್ರ ಕಚೇರಿಯ ನಿರ್ವಾಹಕ ನಿರ್ದೇಶಕ ಎಂ. ಜನಾರ್ಧನ್ ಸರ್, ಸಿಂಡಿಕೇಟ್ ಬ್ಯಾಂಕ್‌ನ ಉಪ ಮಹಾ ಪ್ರಬಂಧಕ ಹೀರೆಮs…, ಪ್ರಾದೇಶಿಕ ಪ್ರಬಂಧಕ ಸುಜಾತ ಜಿ., ವಿಶೇಷ ಸಮಾಜ ಸೇವಕ ವಿಶು ಕುಮಾರ್ ಶೆಟ್ಟಿ, ರುಡ್‌ಸೆಟ್‌ನ ನಿರ್ದೇಶಕ ರಾಘವೇಂದ್ರ ಎಲ್.ಬಿ., ಸಂಸ್ಥೆಯ ಉಪನ್ಯಾಸಕ ಕರುಣಾಕರ್ ಜೈನ್, ಆಸರೆಯ ಅಧ್ಯಕ್ಷ ಕೆ.ಸಿ. ಅಮೀನ್, ಗೌರವಾಧ್ಯಕ್ಷ ರಾಜೇಶ್ ಡಿ., ಪ್ರಧಾನ ಕಾರ್ಯದರ್ಶಿಗಳಾದ ರಾಘವೇಂದ್ರ ಕೋಡಿ, ಭಾಸ್ಕರ್ ಜಿ., ಉಪಾಧ್ಯಕ್ಷರಾದ ಸುಮತಿ ಸುವರ್ಣ, ಭರತ್ ಆಚಾರ್, ನೂತನ ಅಧ್ಯಕ್ಷೆ ಕೀಶ್ವರ್, ಉಪಾಧ್ಯಕ್ಷ ಕುಶ ಕುಮಾರ್, ಕಾರ್ಯದರ್ಶಿ ಉಮೇಶ್ ನಾೖರಿ, ಆಸರೆಯ ಸದಸ್ಯರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.