ಆರ್ಟ್‌ ಆಫ್‌ ಲೀವಿಂಗ್‌ ನಮ್ಮಲ್ಲೇ ಅಡಗಿದೆ: ಸೂರ್ಯಪ್ರಕಾಶ ಭಟ್‌

Team Udayavani, Jul 11, 2017, 3:45 AM IST

1007ra1.jpg

ಪಡುಬಿದ್ರಿ: ನಮ್ಮಲ್ಲೀಗ ಚಿಂತನಾ ಶಕ್ತಿಯೇ ಕಳೆದು ಹೋಗಿದೆ. ಕರಾವಳಿ ಜಿಲ್ಲೆಯ ವಿದ್ಯಾವಂತರೆನಿಸಿ ಕೊಂಡಿರುವ ನಾವೇ ತಪ್ಪು ಮಾಡು ತ್ತಿದ್ದೇವೆ. ನಾವೆಲ್ಲರೂ ಒಂದಾಗಿ ಕೋಮು ಸಂಘರ್ಷವನ್ನು ನಿಲ್ಲಿಸೋಣ. ಘನತೆವೆತ್ತ ಬದುಕು ನಮ್ಮದಾಗಬೇಕು. ಆರ್ಟ್‌ ಆಫ್‌ ಲೀವಿಂಗ್‌ (ಬದುಕುವ ಕಲೆ) ನಮ್ಮ ನಮ್ಮಲ್ಲೇ ಅಡಗಿದೆ ಎಂದು ಮಂಗಳೂರಿನ ಲೆಕ್ಕ ಪರಿಶೋಧಕ, ರೋಟರಿ ಜಿಲ್ಲಾ ಮಾಜಿ ರಾಜ್ಯಪಾಲ ಸೂರ್ಯಪ್ರಕಾಶ್‌ ಭಟ್‌ ಹೇಳಿದರು.

ಅವರು ರವಿವಾರ ಪಡುಬಿದ್ರಿ ರೋಟರಿ ಕ್ಲಬ್‌ ಆಯೋಜಿಸಿದ ಪಡುಬಿದ್ರಿ ಪರಿಸರದಲ್ಲಿ ಆರ್ಥಿಕವಾಗಿ ತೀರಾ ಹಿಂದುಳಿದ 5 ಬಡ ಕುಟುಂಬಗಳಿಗೆ 6 ತಿಂಗಳ ಪಡಿತರ ಸಾಮಗ್ರಿ ವಿತರಣೆಯನ್ನು ಮಾಡುವ ಕುರಿತ ದೃಢೀಕರಣ ಪತ್ರವನ್ನು 
ವಿತರಿಸಿ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರ ವಿಸಿ, ಕಳೆದ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶವನ್ನು ಪಡೆದಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಗೆ ದಿ| ಮೀರಾ ಹಿರಿಯಣ್ಣ ಸ್ಮಾರಕ ಫಲಕವನ್ನು ಹಸ್ತಾಂತರಿಸಿ ರೋಟರಿ ಪದಗ್ರಹಣ ಅಧಿಕಾರಿಯಾಗಿ ಮಾತನಾಡಿದರು.

ರೋಟರಿಯಿಂದ ನಾವು ಕಲಿವ ಪಾಠ ಯಾವ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ನಲ್ಲೂ ಇರುವುದಿಲ್ಲ. ರಾಜ ಕೀಯ ನಾಯಕರೂ ರೋಟರಿ ಮೂಲಕ ಸಮಾಜಕ್ಕೆ ಅರ್ಪಣೆಯಾಗಲಿ ಎಂದು ಸೂರ್ಯಪ್ರಕಾಶ್‌ ಭಟ್‌ ಹಾರೈಸಿದರು. 

ನೂತನ ಅಧ್ಯಕ್ಷ ರಮಿಝ್ ಹುಸೈನ್‌ ತಮ್ಮ ಪರಿಸರದ ಜನತೆಯ ಬದುಕಲ್ಲಿ ಬದಲಾವಣೆಗಳನ್ನು ತರಲು ರೋಟರಿ ಕ್ಲಬ್‌ ಪಡುಬಿದ್ರಿ ಶ್ರಮಿಸುವುದಾಗಿ ಹೇಳಿದರು. ನಿಕಟಪೂರ್ವ ಅಧ್ಯಕ್ಷ, ಪತ್ರಕರ್ತ ಅಬ್ದುಲ್‌ ಹಮೀದ್‌ ತನ್ನ ಅಧಿಕಾರಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು. ವಲಯ ಸೇನಾನಿ ಪಿ. ಕೃಷ್ಣ ಬಂಗೇರ, ಉಪ ರಾಜ್ಯಪಾಲ ಹರಿಪ್ರಕಾಶ್‌ ಶೆಟ್ಟಿ, ರೋಟರಿ ಉಡುಪಿ ಸದಸ್ಯೆ, ಚಿತ್ರನಟಿ ರಂಜಿತಾ ಶೇಟ್‌ ಮಾತನಾಡಿದರು. 

ಪಡುಬಿದ್ರಿ ರೋಟರಿ ಸಂಸ್ಥೆಗೆ 16
ಮಂದಿ ನೂತನ ಸದಸ್ಯರನ್ನು ಸೇರ್ಪಡೆ ಗೊಳಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಅಬ್ದುಲ್‌ ಹಮೀದ್‌ ಸ್ವಾಗತಿಸಿ ದರು. ಪ್ರಾಕ್ತನ ಕಾರ್ಯದರ್ಶಿ ಕರುಣಾಕರ ನಾಯಕ್‌ ವರದಿ ವಾಚಿಸಿದರು. ಚೈತಾಲಿ ಹಾಗೂ ಸಂತೋಷ್‌ ಪಡುಬಿದ್ರಿ ಕಾರ್ಯಕ್ರಮ ನಿರ್ವಹಿಸಿದರು. ನೂತನ ಕಾರ್ಯದರ್ಶಿ ಸಂದೀಪ್‌ ಪಲಿಮಾರು ವಂದಿಸಿದರು.

ಟಾಪ್ ನ್ಯೂಸ್

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

Siddu-Somanna

MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Siddu–Muniyappa

Ration Card: ಬಡವರಿಗೆ ಬಿಪಿಎಲ್‌ ಕಾರ್ಡ್‌ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ

Session: ವಕ್ಫ್ ಜೊತೆ ಬಿಪಿಎಲ್‌ ಹೋರಾಟಕ್ಕೆ ಬಿಜೆಪಿ ಸಜ್ಜು

Session: ವಕ್ಫ್ ಜೊತೆ ಬಿಪಿಎಲ್‌ ಹೋರಾಟಕ್ಕೆ ಬಿಜೆಪಿ ಸಜ್ಜು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-karkala

Karkala: ನಕ್ಸಲ್ ನಾಯಕ ವಿಕ್ರಂ ಗೌಡ ಹೆಬ್ರಿಯ‌ ಕಾಡಿನಲ್ಲಿ ಎನ್ ಕೌಂಟರ್ ಗೆ ಬಲಿ

4

Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್‌ ಪರಾರಿ!

Udupi: ಗೀತಾರ್ಥ ಚಿಂತನೆ-98: ಮೋಹ ಸಹಜ, ಬಿಡದಿರುವುದು ಮಾತ್ರ ತಪ್ಪು

Udupi: ಗೀತಾರ್ಥ ಚಿಂತನೆ-98: ಮೋಹ ಸಹಜ, ಬಿಡದಿರುವುದು ಮಾತ್ರ ತಪ್ಪು

1

Brahmavara: ಉದ್ಯೋಗ ಭರವಸೆ ನೀಡಿ ಹಣ ವಂಚನೆ

12

Manipal: ರೈಲಿನಲ್ಲಿ ಲಕ್ಷಾಂತರ ರೂ. ಒಡವೆ ಕಳ್ಳತನ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

Siddu-Somanna

MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.