ವಿಧಾನ ಪರಿಷತ್ ಬಿಜೆಪಿ ಟಿಕೆಟ್ ಘೋಷಣೆ: ರಘುಪತಿ ಭಟ್ ಅತೃಪ್ತಿ
Team Udayavani, May 12, 2024, 7:25 AM IST
ಉಡುಪಿ: ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ ಬಳಿಕವೂ ಪಕ್ಷದಲ್ಲಿ ಸಕ್ರಿಯರಾಗಿದ್ದ ಮಾಜಿ ಶಾಸಕ ಕೆ. ರಘುಪತಿ ಭಟ್ ವಿಧಾನ ಪರಿಷತ್ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಸಿದ್ಧತೆ ಮಾಡಿಕೊಂಡಿದ್ದರು. ಶನಿವಾರ ಬಿಜೆಪಿ ಟಿಕೆಟ್ ಘೋಷ ಣೆಯಾಗಿದ್ದು, ಭಟ್ಟರಿಗೆ ಟಿಕೆಟ್ ತಪ್ಪಿದ್ದು, ಅವರು ಅಸಮಾಧಾನ ಹೊರ ಹಾಕಿದ್ದಾರೆ.
ಮುಂದೆ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಮುಕ್ತ ಚರ್ಚೆಗೆ ವೇದಿಕೆ ಸೃಷ್ಟಿಸಿದ್ದಾರೆ.
ನೋವಾಗಿದೆ
ಪದವೀಧರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ರಘುಪತಿ ಭಟ್ ಅಸಮಾಧಾನ ವ್ಯಕ್ತಪಡಿಸಿ, ಭೌಗೋಳಿಕವಾಗಿಯೂ ಕರಾವಳಿಯ ವರಿಗೆ ಅನ್ಯಾಯ ಮಾಡಿದೆ. ಪಕ್ಷಕ್ಕಾಗಿ ದುಡಿದಿರುವವರಿಗೂ ಅನ್ಯಾಯ ವಾಗಿದೆ. ಶಿಕ್ಷಕರ ಅಥವಾ ಪದವೀ ಧರ ಕ್ಷೇತ್ರದಲ್ಲಿ ಒಂದನ್ನು ಕರಾವಳಿಗೆ ಮೀಸಲಿಡಬೇಕಿತ್ತು. ಈಗ ಎರಡೂ ವಿಭಾಗದಲ್ಲಿ ಕರಾವಳಿಯನ್ನು ಕಡೆ ಗಣಿಸಲಾಗಿದೆ. ಪಕ್ಷದ ನಿಲುವಿನ ಬಗ್ಗೆ ಬೇಸರವಿದೆ. ಮುಂದೇನು ಮಾಡ ಬೇಕು ಎಂಬುದನ್ನು ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಉದಯವಾಣಿಗೆ ತಿಳಿಸಿದರು.
ಭಟ್ ಪೋಸ್ಟ್ ನಲ್ಲೇನಿದೆ?
ಭೌಗೋಳಿಕವಾಗಿ ಮತ್ತು ಸಂಘಟ ನಾತ್ಮಕವಾಗಿ ಪಕ್ಷ ಸರಿಯಾದ ನಿರ್ಧಾರ ತೆಗೆದುಕೊಂಡಂತಿಲ್ಲ. ಪಕ್ಷದ ಟಿಕೆಟ್ ತಪ್ಪಿಸಿದ್ದಾರೆ.
ಪರಿಷತ್ ಟಿಕೆಟ್ ಘೋಷಣೆ ಯಾಗಿದೆ. ಶಿಕ್ಷಕರ ಕ್ಷೇತ್ರದ ಟಿಕೆಟ್ ಜೆಡಿಎಸ್ ಪಕ್ಷದ ಚಿಕ್ಕಮಗಳೂರು ಅಭ್ಯರ್ಥಿಗೆ ನೀಡಿ, ಪದವೀಧರ ಕ್ಷೇತ್ರದ ಟಿಕೆಟ್ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿಗೆ ನೀಡಲಾಗಿದೆ. ಇದು 4 ದಶಕಗಳಿಂದ ಬಿಜೆಪಿ ಸಂಪ್ರದಾಯ ಮುರಿದು ಕರಾವಳಿ ಭಾಗಕ್ಕೆ ನೀಡುತ್ತಿದ್ದ ಶಿಕ್ಷಕರ ಕ್ಷೇತ್ರದ ಟಿಕೆಟ್ ನೀಡದೆ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಭಾಗದ ವಿದ್ಯಾವಂತ, ಪ್ರಜ್ಞಾವಂತ ಮತದಾರರಿಗೆ ಅನ್ಯಾಯ ಮಾಡಿದಂತಾಗಿದೆ. ಪ್ರಸ್ತುತ ಸ್ಥಿತಿಯಲ್ಲಿ ಬಿಜೆಪಿಯ ನಿಲುವಿನಿಂದ ವಿಚಲಿತನಾಗಿದ್ದೇನೆ.
1994ರಿಂದಲೂ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿ, ಪದಾಧಿಕಾರಿ ಯಾಗಿ ವಿವಿಧ ಸ್ಥರಗಳಲ್ಲಿ ಕೆಲಸ ಮಾಡಿದ್ದೇನೆ. ವಿಧಾನ ಸಭೆಗೆ ಸ್ಪರ್ಧಿಸಿದ 3 ಬಾರಿಯೂ ಗೆದ್ದಿರು ತ್ತೇನೆ. ಕಳೆದ ಚುನಾವಣೆಯಲ್ಲಿ ನನಗೆ ತಿಳಿಸದೆ ನನ್ನನ್ನು ಬದಲಾಯಿಸಲಾಯಿತು.
ನನ್ನ ಬದಲು ಬೇರೆ ಹೆಸರು ಘೋಷಣೆ ಯಾಗಿದ್ದು ಟಿವಿ ಮೂಲಕ ತಿಳಿಯಿತು. ಆದರೂ ವಿಚಲಿತನಾಗದೆ ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ. ಆ ಸಂದರ್ಭದಲ್ಲಿ ನನಗೆ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಪಕ್ಷದ ಹಿರಿಯರು ಭರವಸೆ ನೀಡಿದ್ದರು. ಅದರಂತೆ ಪದವೀಧರರ ಸದಸ್ಯತ್ವ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅತಿ ಹೆಚ್ಚು ಸದಸ್ಯರನ್ನು ನೋಂದಾಯಿಸಿದ್ದೇನೆ. ಅಲ್ಲದೆ ಪಕ್ಷ ನೀಡಿದ ಶಿವಮೊಗ್ಗ ಲೋಕಸಭಾ ಚುನಾವಣ ಪ್ರಭಾರಿ ಜವಾಬ್ದಾರಿಯನ್ನು 40 ದಿನಗಳ ಕಾಲ ಶಿವಮೊಗ್ಗದಲ್ಲಿ ಉಳಿದು ಕೆಲಸ ಮಾಡಿದ್ದೇನೆ.ಈಗ ಪರಿಷತ್ ಟಿಕೆಟ್ ಘೋಷಣೆ ಯಾಗಿದ್ದು, ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡುವವರು ಯಾರು?
ಪಕ್ಷದ ನಿಲುವಿಂದ ವಿಚಲಿತನಾಗಿ ದ್ದೇನೆ. ಇದು ಪಕ್ಷದ ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತ ಮತ್ತು ಪಕ್ಷದ ಅಭಿಮಾನಿಗಳು ಚಿಂತಿಸುವ ಕಾಲ. ಚರ್ಚಿಸೋಣ, ನಿಮ್ಮ ಸಲಹೆಯ ನಿರೀಕ್ಷೆಯಲ್ಲಿ ಎಂದು ಭಟ್ಟರು ತಮ್ಮ ಫೇಸ್‌ಬುಕ್ ಹಾಗೂ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ
ಬಂಡಾಯ ಚಿಂತನೆ
ರಘುಪತಿ ಭಟ್ ಪರಿಷತ್ ಚುನಾ ವಣೆಗೆ ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಪದವೀಧರ ಮತದಾರ ಪ್ರಮಾಣ ವನ್ನು ಉಡುಪಿ ಜಿಲ್ಲೆಯೊಂದರಲ್ಲೇ 16 ಸಾವಿರಕ್ಕೆ ಏರಿಸುವಲ್ಲಿ ಭಟ್ ಶ್ರಮವೂ ಇದೆ. ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗ ಳೂರು ಜಿಲ್ಲೆಗಳಲ್ಲೂ ಪ್ರವಾಸ ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.