Udupi ಭಾರತೀಯತೆಯೇ ಅಸ್ಮಿತೆಯಾಗಲಿ: ಪ್ರಕಾಶ್‌ ಬೆಳವಾಡಿ

Team Udayavani, Sep 9, 2023, 11:38 PM IST

Udupi ಭಾರತೀಯತೆಯೇ ಅಸ್ಮಿತೆಯಾಗಲಿ: ಪ್ರಕಾಶ್‌ ಬೆಳವಾಡಿ

ಉಡುಪಿ: ಅಸ್ಮಿತೆಯ ಕನಸು ಮಾರಿ ಮೋಸ ಮಾಡುತ್ತಿರುವ ಪ್ರಸ್ತುತ ಸನ್ನಿವೇಶಗಳಲ್ಲಿ ಭಾರತೀಯತೆಯ ಸಾಂಸ್ಕೃತಿಕ ಬಂಧವನ್ನು ಆಧರಿಸಿಕೊಂಡು ನಮ್ಮನ್ನು ನಾವು ಕಂಡುಕೊಳ್ಳುವ ಪರಿಸ್ಥಿತಿ ಬದಲಾದರೆ ಅಸ್ಮಿತೆಯನ್ನು ಉಳಿಸಿಕೊಳ್ಳಲು ಸಾಧ್ಯವಿದೆ. ಅಸ್ಮಿತೆಯ ಹೊಸ ಸೃಷ್ಟಿಯ ಜತೆಗೆ ಹಳೆಯದನ್ನು ಪುನರ್‌ ಪಡೆಯಬೇಕು ಎಂದು ನಟ ಪ್ರಕಾಶ್‌ ಬೆಳವಾಡಿ ವಿಶ್ಲೇಷಿಸಿದರು.

ಶ್ರೀ ಅದಮಾರು ಮಠದ ಶ್ರೀಕೃಷ್ಣ ಸೇವಾ ಬಳಗದ ವತಿಯಿಂದ ಪೂರ್ಣಪ್ರಜ್ಞ ಕಾಲೇಜಿನ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಶನಿವಾರ ವಿಶ್ವಾರ್ಪಣಮ್‌ ಚಿಂತನ ಮಂಥನ ಮತ್ತು ಸಂವಾದದಲ್ಲಿ “ಸೃಜನಾತ್ಮಕ ಭಾರತೀಯ ಅಸ್ಮಿತೆ ಮತ್ತು ಮಣಿಪುರ ವಿದ್ಯಮಾನಗಳು’ ಎಂಬ ವಿಷಯದ ಮೇಲೆ ಅವರು ಮಾತನಾಡಿದರು.

ವಿಜ್ಞಾನದ ಜತೆಗೆ ಧರ್ಮಗುರುಗಳು ಸೇರಿಕೊಂಡು ನಮ್ಮಲ್ಲಿರುವ ಹಲವು ತಪ್ಪುಗಳನ್ನು ಸರಿಪಡಿಸುವ ಮೂಲಕ ಅಸ್ಮಿತೆಯನ್ನು ಕಾಪಾಡಬೇಕು. ಒಣಮಾತಿನಿಂದ ಯಾವುದೂ ಸಾಧ್ಯವಿಲ್ಲ. ಆಚರಣೆಗೆ ತಂದಾಗ ಪರಿವರ್ತನೆ ಸಾಧ್ಯ. ಇತ್ತೀಚಿನ ದಿನಗಳಲ್ಲಿ ಪರಿವರ್ತನೆಯ ಗಾಳಿ ಬೀಸಲಾರಂಭಿಸಿದೆ. ನಮ್ಮ ಅಸ್ಮಿತೆ ಏನು ಎಂಬುದು ತಿಳಿಯಬೇಕು ಮತ್ತು ಭಾರತವೇ ನಮ್ಮ ಅಸ್ಮಿತೆಯಾಗಬೇಕು. ಭಾರತೀಯತೆಯ ನೆಲೆಯಲ್ಲಿ ಎಲ್ಲರೂ ಒಂದಾದಾಗ ಸಹಬಾಳ್ವೆ ಬರಲಿದೆ ಎಂದು ಹೇಳಿದರು.

ಮಣಿಪುರದ ಸಮಸ್ಯೆ
ಮಣಿಪುರದ ಸಮಸ್ಯೆಯ ಮೂಲ ಹುಡುಕುವುದು ಕಷ್ಟ. ಕಮ್ಯೂನಲ್‌, ಟ್ರೈಬಲ್‌, ಲ್ಯಾಂಡ್‌ ಡಿಸ್ಪೂ éಟ್‌, ರಿಸರ್ವೇಶನ್‌, ಗನ್‌ ಹೀಗೆ ಅನೇಕ ಅಂಶಗಳು ಇದರಲ್ಲಿ ಅಡಕವಾಗಿವೆ. ಮಣಿಪುರದ ಬಗ್ಗೆ ಮಾತನಾಡುವವರು ಅಲ್ಲಿನ ಡ್ರಗ್ಸ್‌ ಮತ್ತು ಚೀನದ ಕೈವಾಡದ ಬಗ್ಗೆಯೂ ಬೆಳಕು ಚೆಲ್ಲಬೇಕು. ಮಣಿಪುರ ಈಗ ಪ್ರಯೋಗಾಲಯ ಶಾಲೆಯಾಗುತ್ತಿದೆ. ಹಿಂದೆ ಪಶ್ಚಿಮಬಂಗಾಲ ಪ್ರಯೋಗ ಶಾಲೆಯಾಗಿತ್ತು. ಈಗ ಬಂಗಾಲದ ಕೆಲವು ಜಿಲ್ಲೆಗಳು ಸರಿಪಡಿಸಲಾಗದ ಸ್ಥಿತಿಗೆ ಹೋಗಿ ಬಿಟ್ಟಿವೆ. ಹೀಗಾಗಿ ಮಣಿಪುರ ಹಿಂಸೆಗೆ ಸ್ಪಷ್ಟ ಕಾರಣ ಹೇಳಲು ಅಸಾಧ್ಯ. ಆದರೆ ಅಲ್ಲಿನ ಬಹುಸಂಖ್ಯಾಕ ಮೈಥೇಯ ಸಮುದಾಯಕ್ಕೆ ಕೆಲವು ಬುಡಕಟ್ಟು ಸಮುದಾಯಗಳಿಂದ ಹಾಗೂ ಮ್ಯಾನ್ಮಾರ್‌ನಿಂದ ವಲಸೆ ಬಂದವರಿಂದಲೂ ಸಮಸ್ಯೆಯಾಗಿದೆ. ಎಲ್ಲರ ಕೈಯಲ್ಲೂ ಗನ್‌ ಬಂದು ಸಂಘರ್ಷ ಹಿಂಸೆಗೆ ತಿರುಗಿ ಬಿಟ್ಟಿದೆ ಎಂದರು.

ಲೇಖಕ ರೋಹಿತ್‌ ಚಕ್ರತೀರ್ಥ ಮಾತನಾಡಿ, ಮಹಿಷಾಸುರನಿಗೆ ಹೊಸ ಬಣ್ಣ, ರೂಪ ನೀಡಿ ಅದೇ ನಮ್ಮ ಅಸ್ಮಿತೆ ಎಂದು ಜನರನ್ನು ನಂಬಿಸುವ ಪ್ರಯತ್ನವೂ ನಡೆಯುತ್ತಿದೆ. ಅಸ್ಮಿತೆ ಹಿಂದೆಂದೂ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿರಲಿಲ್ಲ. ಈಗ ಒಂದೊಂದು ವಿಷಯದಲ್ಲೂ ಅಸ್ಮಿತೆಯ ಹೆಸರಿನಲ್ಲಿ ಸಂಘರ್ಷವಾಗುತ್ತಿದೆ. ಹಿಂದೂ, ಸನಾತನಿ, ಭಾರತೀಯ ಎಂಬ ನಮ್ಮ ಅಸ್ಮಿತೆಯ ವಿರುದ್ಧವೇ ಜಗಳ ಮಾಡುವವರೂ ಇದ್ದಾರೆ. ಬಹುತ್ವದಲ್ಲಿ ಏಕತೆಯಲ್ಲ, ಏಕತೆಯಲ್ಲಿ ಬಹುತ್ವ ಇರಬೇಕು. ಸಹಿಷ್ಣತೆ ನಮ್ಮದಲ್ಲ. ನಮ್ಮ ಅಸ್ಮಿತೆಯನ್ನು ಉಳಿಸಿಕೊಂಡು, ಇನ್ನೊಬ್ಬರ ಅಸ್ಮಿತೆಯನ್ನು ಗೌರವಿಸುವುದೇ ನಮ್ಮ ಪರಂಪರೆ ಎಂದರು.

ಶ್ರೀಕೃಷ್ಣ ಸೇವಾ ಬಳಗದ ಸಂಚಾಲಕ ಗೋವಿಂದ ರಾಜ್‌ ಸ್ವಾಗತಿಸಿ, ಪ್ರಸ್ತಾವನೆಗೈದರು. ಡಾ| ನಂದನ್‌ ಪ್ರಭು ಅತಿಥಿ ಪರಿಚಯ ಮಾಡಿದರು. ಡಾ| ರಾಘವೇಂದ್ರ ನಿರೂಪಿಸಿದರು.

ಟಾಪ್ ನ್ಯೂಸ್

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

1

Pushpa 2: ಕಿಸಿಕ್‌ ಎಂದು ಕುಣಿದ ಶ್ರೀಲೀಲಾ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.