ಬದುಕು ಬದಲಿಸಲಿ ಹೊಸ ವರ್ಷ 


Team Udayavani, Jan 1, 2020, 8:30 AM IST

editorial

2020ಕ್ಕೆ ಕಾಲಿಟ್ಟಿದ್ದೇವೆ. ಹೊಸ ವರ್ಷವೆಂದಾಕ್ಷಣ ಸಹಜವಾಗಿಯೇ ಅನೇಕರು ತಮ್ಮ ಬದುಕಲ್ಲಿ ಹೊಸತನವನ್ನು ಕಾಣವಲು ಬಯಸುತ್ತಾರೆ. ನ್ಯೂ ಇಯರ್‌ ರೆಸಲ್ಯೂಷನ್‌ ಎನ್ನುವ ಹೆಸರಲ್ಲಿ ತಾವು ಈ ವರ್ಷದಲ್ಲಿ ತಮ್ಮ ಜೀವನದಲ್ಲಿ ತರಲು ಬಯಸುವ ಬದಲಾವಣೆಗಳ ಕುರಿತು ಸಂಕಲ್ಪ ಮಾಡುತ್ತಾರೆ. ಬದಲಾವಣೆಗೆ ಎಲ್ಲಾ ದಿನಗಳೂ ಸೂಕ್ತವೇ, ಹಾಗೆಯೇ ಜನವರಿ 1ರಿಂದಲೇ ಬದುಕು ಬದಲಿಸಿಕೊಳ್ಳುತ್ತೇನೆ ಎಂದು ನಿರ್ಧರಿಸುವುದೂ ಒಳ್ಳೆಯದೇ. ಕೆಲವರು ತಮ್ಮ ಸಂಕಲ್ಪಗಳನ್ನು ಈಡೇರಿಸಿಕೊಳ್ಳಲು ಸಫ‌ಲರಾದರೆ, ಉಳಿದವರು ಆ ಪ್ರಯತ್ನವನ್ನೇ ಬಿಟ್ಟು ಕೈಚೆಲ್ಲುವುದು ಅಥವಾ ವಿಫ‌ಲವಾಗುವುದುಂಟು.

ಹಾಗೆಂದು, ಬದುಕು ಬದಲಾಗಲು ಸಾಧ್ಯವೇ ಇಲ್ಲ ಎಂಬ ನಿರಾಶಾವಾದಿಗಳಾಗುವುದು ಖಂಡಿತ ಬೇಡ. ಮುಖ್ಯವಾಗಿ ಈ ವರ್ಷದಲ್ಲಿ ನಮ್ಮ ಬದುಕು ಹೇಗಿರುತ್ತದೋ ಎಂಬ ಭಯ-ಕುತೂಹಲಕ್ಕಿಂತ, ಹೇಗಿರಬೇಕು ಎಂಬ ನಿಶ್ಚಯ ಮುಖ್ಯವಾದಾಗ ಮಾತ್ರ ಬದುಕು ಬದಲಾಗುತ್ತದೆ.

ಸಂಯಮ, ಸಹನೆ, ಸಮಯ ಪಾಲನೆ, ಸಂಬಂಧಗಳ ವೃದ್ಧಿ, ಸಹಬಾಳ್ವೆಗೆ ಆದ್ಯತೆ ಕೊಡಲಾರಂಭಿಸಿ. ನಿಮ್ಮ ಮತ್ತು ಮನೆಯವರ ದೇಹಾರೋಗ್ಯಕ್ಕೆ ಕೊಡುವಷ್ಟೇ ಗಮನವನ್ನು ಮಾನಸಿಕ ಆರೋಗ್ಯಕ್ಕೂ ಕೊಡಿ. ಮನೆಯವರೊಂದಿಗೆ ಹೆಚ್ಚು ಸಮಯ ಕಳೆಯಿರಿ, ಹೊಸ ಜಾಗಗಳಿಗೆ ಸುತ್ತಾಡಿ, ಪುಸ್ತಕಗಳನ್ನು ಓದಿ, ಹೊಸ ಸ್ನೇಹಿತರನ್ನು ಸಂಪಾದಿಸಿ, ಸಾಮಾಜಿಕ ಮಾಧ್ಯಮಗಳಿಂದ ಆದಷ್ಟೂ ದೂರವಿರಿ, ನಿಮ್ಮ ಬಗ್ಗೆ ನೀವು ಕಾಳಜಿ ಮಾಡಿ ಕೊಳ್ಳಿ(ಇದು ಸ್ವಾರ್ಥವಂತೂ ಖಂಡಿತ ಅಲ್ಲ), ಹಣ ಉಳಿತಾಯ ಮಾಡಿ. ನನ್ನ ಹಣೆಬರಹವೇ ಇಷ್ಟು ಎಂಬ ಕೀಳರಿಮೆಯು ನಿಮ್ಮನ್ನು ಮತ್ತಷ್ಟು ಕುಬjರಾಗಿಸುತ್ತಲೇ ಹೋಗುತ್ತದೆ. ಹೀಗಾಗಿ, ಕೀಳರಿಮೆಯ ಸಂಕೋಲೆಗಳನ್ನು ಕಿತ್ತೆಸೆದು ಮುನ್ನುಗ್ಗಿ. ನೀವು ನೆಮ್ಮದಿಯಿಂದ, ಸಂತೋಷದಿಂದ ಇದ್ದಾಗ ಮಾತ್ರವೇ ಅಲ್ಲವೇ ಸುತ್ತಲಿರುವವರನ್ನೂ ನೆಮ್ಮದಿಯಿಂದ ಇಡಬಲ್ಲಿರಿ, ಸಂತೋಷವನ್ನು ಹಂಚಬಲ್ಲಿರಿ?

ಕಳೆದ ಒಂದು ದಶಕದಲ್ಲಿ ಆದ ಸಾಮಾಜಿಕ ಮಾಧ್ಯಮ ಕ್ರಾಂತಿಯಿಂದಾಗಿ ಇಂದು ನಾವು ಬದುಕುವ- ಯೋಚಿಸುವ ರೀತಿಯೇ ಬದಲಾಗಿದೆ. ನಿರಂತರ ಮಾಹಿತಿಯ ಪ್ರವಾಹವು ಸಾಗರೋಪಾದಿಯಲ್ಲಿ ನಮ್ಮನ್ನು ಬಂದಪ್ಪಳಿಸುತ್ತಲೇ ಇದೆ. ದೇಹಕ್ಕೆ ಹೇಗೆ ಹಸಿವು ಇರುತ್ತದೋ, ಅದೇ ರೀತಿಯಲ್ಲೇ ಮನಸ್ಸಿಗೂ “ಮಾಹಿತಿ’ಯ ಹಸಿವು ಇದ್ದೇ ಇರುತ್ತದೆ. ಹಾಗೆಂದು, ಅನವಶ್ಯಕ ಮಾಹಿತಿಯನ್ನು-ಸುದ್ದಿಗಳನ್ನು ಎಡೆಬಿಡದೆ ಜಂಕ್‌ ಫ‌ುಡ್‌ಗಳ ರೀತಿಯಲ್ಲಿ ಸೇವಿಸಿದರೆ, ನಮ್ಮ ಮನಸ್ಥಿತಿ ಮತ್ತಷ್ಟು ಹದಗೆಡುತ್ತದಷ್ಟೆ. ಯಾವ ಮಾಹಿತಿಯು ನಿಮ್ಮ ಬೆಳವಣಿಗೆಗೆ, ಸುಖ-ಶಾಂತಿಗೆ ಪೂರಕವಾಗಬಲ್ಲದೋ ಅದನ್ನಷ್ಟೇ ಸೇವಿಸಿ. ಜಗತ್ತು ಮುಂದೋಡುತ್ತಿದೆ ನಾವು ಹಿಂದುಳಿದುಬಿಡುತ್ತೇವೆ ಎಂಬ ಅನವಶ್ಯಕ ಭಯಕ್ಕೆ ಬಿದ್ದು ಹುಚ್ಚರಂತೆ ಅದರೊಟ್ಟಿಗೆ ಓಡುವುದು ಬೇಡ. ನಿಲ್ಲಿ, ದಣಿವಾರಿಸಿಕೊಳ್ಳಿ. ನೀವು ಮಾನಸಿಕವಾಗಿ-ದೈಹಿಕವಾಗಿ ಸುಸ್ಥಿತಿಯಲ್ಲಿರುವುದು ಬಹಳ ಮುಖ್ಯ. ಲಾಗಿನ್‌ ಆಗುವುದಕ್ಕಿಂತ, ಲಾಗ್‌ ಔಟ್‌ ಆಗುವುದು ಈಗಿನ ಅಗತ್ಯ ಎನ್ನುವುದನ್ನು ಮರೆಯದಿರಿ. ಹೊಸ ವರ್ಷದ ಶುಭಾಶಯಗಳು. ನಿಮ್ಮ ಸಂಕಲ್ಪಗಳೆಲ್ಲ ಈಡೇರಲಿ.

ಟಾಪ್ ನ್ಯೂಸ್

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BUS driver

Bus ticket; ದೀಪಾವಳಿ ಸಂಭ್ರಮಕ್ಕೆ ಬಸ್‌ ಟಿಕೆಟ್‌ ದರ ತಣ್ಣೀರು

1-mahe

MAHE-Mangalore University ಒಡಂಬಡಿಕೆ : ಮೂಳೆ ಅಲೋಗ್ರಾಫ್ಟ್‌ಗಳ ಗಾಮಾ ವಿಕಿರಣ

1-a-kota-pammu

Pramod Madhwaraj ಅವರದ್ದು ಯಾರನ್ನೂ ದ್ವೇಷಿಸದ ಅಪರೂಪದ ವ್ಯಕ್ತಿತ್ವ: ಕೋಟ

1-ottin

Baindur; ಒತ್ತಿನೆಣೆ ತಿರುವಿನಲ್ಲಿ ಗುಡ್ಡ ಕುಸಿತ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

3-aranthodu

Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.