ವಾಯು ಶಕ್ತಿಯ ಮಹತ್ವ ಅರಿತು ಬಳಸೋಣ
35 ದೇಶಗಳಲ್ಲಿ 300ಕ್ಕೂ ಅಧಿಕ ಕಾರ್ಯಕ್ರಮ
Team Udayavani, Jun 15, 2019, 6:00 AM IST
ವಾಯು ಅಪರಿಮಿತ ಸಂಪನ್ಮೂಲ. ಅದನ್ನು ಶಕ್ತಿಯನ್ನಾಗಿ ಪರಿವರ್ತಿಸಿ ಬಳಕೆ ಮಾಡಿದರೆ ಇಂಧನಗಳ ಅಭಾವ ಉಂಟಾಗುವುದೇ ಇಲ್ಲ. ವಾಯು ಶಕ್ತಿಯ ಮಹತ್ವವನ್ನು ತಿಳಿಸುವ ಉದ್ದೇಶದಿಂದ ವಿಶ್ವ ಮಟ್ಟದಲ್ಲಿ 2007ರಿಂದ ಪ್ರತಿ ವರ್ಷ ಜೂನ್ 15ರಂದು ವಿಶ್ವ ವಾಯು ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ವಾಯು ಶಕ್ತಿಯ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸುವುದೇ ಈ ದಿನದ ಪ್ರಮುಖ ಉದ್ದೇಶ.
ಗಾಳಿಯ ಶಕ್ತಿ, ಅದರ ಪ್ರಯೋಜನಗಳನ್ನು ತಿಳಿಸುವ ಸಲು ವಾಗಿ ವಿಶ್ವ ವಾಯು ದಿನಾಚರಣೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಂಡ್ ಯುರೋಪ್ ಮತ್ತು ಗ್ಲೋಬಲ್ ವಿಂಡ್ ಎನರ್ಜಿ ಕೌನ್ಸಿಲ್ ವತಿಯಿಂದ ಪ್ರತಿ ವರ್ಷ ಜೂನ್ 15ರಂದು ಆಚರಿಸಲಾ ಗುತ್ತಿದೆ.
ಗಾಳಿಯು ಒಂದು ಶಕ್ತಿಯಾಗಿದ್ದು ಅದನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡಲಾಗು ತ್ತದೆ. ಈ ಕುರಿತ ಮಾಹಿತಿಯನ್ನು ತಿಳಿಸುವ ಉದ್ದೇಶದಿಂದ ವಿಶ್ವ ವಾಯುದಿನವನ್ನು ಆಚರಿಸಲಾಗುತ್ತಿದೆ.
ಈ ವರ್ಷದ ಥೀಮ್ ಫ್ಯೂಚರ್ ವಿಂಡ್. ವಿಶ್ವ ಮಟ್ಟದಲ್ಲಿ ಈ ಥೀಮ್‌ಗೆ ಸಂಬಂಧಿಸಿದಂತೆ ಫೋಟೋ ಸ್ಪರ್ಧೆ ಏರ್ಪಡಿಸಲಾಗಿದೆ. ವಾಯು ಶಕ್ತಿಯು ಇಂದಿಗೆ ಮತ್ತು ಭವಿಷ್ಯಕ್ಕೂ ಒಂದು ಶಕ್ತಿ ಎನ್ನುವುದನ್ನು ಸಾರುವುದಕ್ಕಾಗಿ ಈ ಥೀಮ್ ಅನ್ನು ಈ ವರ್ಷ ಆಯ್ಕೆ ಮಾಡಲಾಗಿದೆ. ಈ ದಿನ ತಜ್ಞರನ್ನು ಸೇರಿಸಿ ಕಾರ್ಯಕ್ರಮ ಆಯೋಜಿಸಿ ವಾಯು ಶಕ್ತಿಗೆ ಬೆಂಬಲ ನೀಡುವಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಅಲ್ಲದೇ ಸಾರ್ವಜ ನಿಕರಿಗೆ ಈ ದಿನ ವಿಂಡ್ ಫಾಮ್ಸ್ìಗಳಿಗೆ ಭೇಟಿ ನೀಡಿ, ಅಲ್ಲಿನ ಕಾರ್ಯ ವೈಖರಿಗಳ ಪರಿಶೀಲನೆ ನಡೆಸಲು ಅವಕಾಶ ನೀಡಲಾಗುತ್ತದೆ.
ಹಲವಾರು ಕಡೆ ಕಲ್ಲಿದ್ದಲು ಇತರ ಇಂಧನಗಳ ಬದಲಾಗಿ ವಾಯು ಶಕ್ತಿಯನ್ನು ಬಳಕೆ ಮಾಡುತ್ತಾರೆ. ಇಂದು ಸುಮಾರು 90ಕ್ಕೂ ಅಧಿಕ ದೇಶಗಳು ವಾಯುಶಕ್ತಿಯ ಬಳಕೆ ಮಾಡುತ್ತಿದ್ದು, ಇದು ಕಡಿಮೆ ಖರ್ಚಿನ ಮೂಲಕ ಉತ್ಪಾದಿಸುವ ಶಕ್ತಿಯಾಗಿದೆ. ವಿಶ್ವದ 70ಕ್ಕೂ ಅಧಿಕ ದೇಶಗಳು ವಿಂಡ್ ಪಾಮ್ಸ್ìಗೆ ಸೇರಿಕೊಂಡು ಶುದ್ಧ ಗಾಳಿಯ ಮೂಲಕ ಶಕ್ತಿಯನ್ನು ಉತ್ಪಾದಿಸುತ್ತಿವೆ.
2007ರಲ್ಲಿ ಮೊದಲಿಗೆ ಯುರೋಪಿಯನ್ ವಿಂಡ್ ಎನರ್ಜಿ ಕೌನ್ಸಿಲ್ ಯುರೋಪ್‌ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆಗ ಇದರ ಪ್ರಮುಖ ಉದ್ದೇಶವೆಂದರೆ ರಾಷ್ಟ್ರೀಯ ವಾಯು ಶಕ್ತಿ ಉತ್ಪಾದನ ಸಂಘಗಳು ಮತ್ತು ಕಂಪೆನಿಗಳು ವಾಯು ಶಕ್ತಿ ಕ್ಷೇತ್ರದಲ್ಲಿ ಚಟುವಟಿಕೆಯಿಂದಿರುವುದು ಮತ್ತು ಅದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿತ್ತು. ಮೊದಲ ವಾಯು ದಿನಾಚರಣೆ ಯುರೋಪಿನ 18 ದೇಶಗಳನ್ನು ತಲುಪಿತು. ಇದ ರಲ್ಲಿ 35,000ಕ್ಕೂ ಅಧಿಕ ಜನರು ಭಾಗವಹಿಸಿ ದ್ದರು. 2008ರಲ್ಲಿ ವಾಯು ದಿನಾಚರಣೆಯು ಯುರೋಪಿನ 20 ದೇಶಗಳನ್ನು ಮತ್ತು 1 ಲಕ್ಷಕ್ಕೂ ಅಧಿಕ ಜನರನ್ನು ತಲುಪಿತು.
ಯುರೋಪಿಯನ್ ವಿಂಡ್ ಎನರ್ಜಿ ಕೌನ್ಸಿಲ್ 2009ರಲ್ಲಿ ಗ್ಲೋಬಲ್ ವಿಂಡ್ ಎನರ್ಜಿ ಕೌನ್ಸಿಲ್‌ನೊಂದಿಗೆ ಸೇರಿಕೊಂಡು ತನ್ನ ವ್ಯಾಪ್ತಿಯನ್ನು ವಿಶ್ವಮಟ್ಟಕ್ಕೆ ವಿಸ್ತರಿಸಿತು.
2009ರ ಅನಂತರ ವಿಶ್ವ ಮಟ್ಟದಲ್ಲಿ ವಾಯು ದಿನಾಚರಣೆ ಆರಂಭವಾಗಿದ್ದು, ಇದೇ ವರ್ಷದಲ್ಲಿ ಪೋರ್ಚ್‌ಗಲ್‌ನಲ್ಲಿ ವಿಂಡ್ ಪೆರೇಡ್ ಎಂಬ ಕಾರ್ಯಕ್ರಮ ಮಾಡುವುದರ ಮೂಲಕ ವಿಶ್ವ ವಾಯು ದಿನವನ್ನು ಆಚರಣೆ ಮಾಡಿದರು. ಮಕ್ಕಳನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಲು ನಕಲಿ ವಾಯು ಟರ್ಬೈನ್ ಚಿತ್ರ ಸ್ಪರ್ಧೆ ಏರ್ಪಡಿಸಲಾ ಗಿ ತ್ತು. 2012ರಲ್ಲಿ ವಿಶೇಷವಾಗಿ ವಿಶ್ವಮಟ್ಟದಲ್ಲಿ ವಿಂಡ್ ಇನ್ ಮೈಂಡ್ ಎಂಬ ಛಾಯಾಚಿತ್ರಗ್ರಹಣ ಸ್ಪರ್ಧೆಯನ್ನು ಏರ್ಪಡಿಸಿದ್ದರು. 40ಕ್ಕೂ ಹೆಚ್ಚು ದೇಶಗಳು ಇದರಲ್ಲಿ ಭಾಗವಹಿಸಿ 2,300 ಫೋಟೋಗಳು ಸ್ಪರ್ಧೆಯಲ್ಲಿ ಸಿಕ್ಕಿವೆ. ಈ ವರ್ಷ 300ಕ್ಕೂ ಅಧಿಕ ಕಾರ್ಯಕ್ರಮಗಳ ಮೂಲಕ 35 ದೇಶಕ್ಕೆ ವಿಸ್ತರಿಸಿದ್ದು 1 ಮಿಲಿಯನ್ ಜನರನ್ನು ಇದರಲ್ಲಿ ಭಾಗವಹಿಸುವಂತೆ ಮಾಡಲಾ ಗಿದೆ. 2018ರ ಸಮೀಕ್ಷೆ ಪ್ರಕಾರ ಚೀನವು ವಾಯು ಶಕ್ತಿಯ ಉತ್ಪಾದನೆಯಲ್ಲಿ ಮೊದಲನೇ ಸ್ಥಾನ ದ ಲ್ಲಿದಲ್ಲಿದ್ದ ರೆ ಭಾರತ ನಾಲ್ಕನೇ ಸ್ಥಾನದಲ್ಲಿದೆ.
2019ರ ಗುರಿ
-ವಿಶ್ವ ವಾಯು ದಿನದ ಅಭಿಯಾನಕ್ಕೆ ಸೇರುವುದು
-ಗಾಳಿ ಶಕ್ತಿಯ ಕುರಿತು ತಿಳಿದುಕೊಳ್ಳುವುದು.
-ವಿವಿಧ ನಗರಗಳಲ್ಲಿ ಪ್ರದರ್ಶನ ಟರ್ಬೈನ್ ಏರ್ಪಡಿಸಿ ಅವುಗಳಿಗೆ ಹೆಚ್ಚು ಪ್ರಚಾರ ನೀಡುವುದು.
– ಕಾರ್ಯಾಗಾರಗಳನ್ನು ಆಯೋಜಿಸಿ ಅವುಗಳಲ್ಲಿ ಜನರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸು ವಂತೆ ಮಾಡು ವುದು
-ವಾಯು ಶಕ್ತಿ ಕೇಂದ್ರಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸುವುದು.
-ವಿಂಡ್ ಪೆರೇಡ್‌ಗಳನ್ನು ಸ್ಥಾಪಿಸುವುದು.
-ರಂಜಿನಿ ಮಿತ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.