DK,ಉಡುಪಿಯ 892 ಮಂದಿಗೆ ಅಕ್ಷರಾಭ್ಯಾಸ ಗುರಿ
ಅನಕ್ಷರಸ್ಥರನ್ನು ಗುರುತಿಸಿ ಸ್ಥಳೀಯರಿಂದಲೇ ಅಕ್ಷರಾಭ್ಯಾಸ
Team Udayavani, Oct 26, 2023, 6:30 AM IST
ಉಡುಪಿ: ಗ್ರಾಮ ಪಂಚಾಯತ್‌ಗಳಲ್ಲಿರುವ ಅನಕ್ಷರಸ್ಥರನ್ನು ಗುರುತಿಸಿ ಸ್ಥಳೀಯವಾಗಿ ಲಭ್ಯವಿರುವ ಬೋಧಕರ ಮೂಲಕವೇ ಅವರಿಗೆ ಬೋಧಿಸಿ ಅಕ್ಷರ ಕಲಿಸುವ ಎರಡನೇ ಹಂತದ ಪ್ರಕ್ರಿಯೆ ಆರಂಭವಾಗಿದೆ. ಉಭಯ ಜಿಲ್ಲೆಗಳ 22 ಗ್ರಾ.ಪಂ.ಗಳಲ್ಲಿ “ಜಿಲ್ಲಾ ಪಂಚಾಯತ್ ಲಿಂಕ್ ಡಾಕ್ಯೂಮೆಂಟ್’ ಸಾಕ್ಷರತೆ ಕಾರ್ಯಕ್ರಮದ ಮೂಲಕ ಅನಕ್ಷ ರಸ್ಥರಿಗೆ ಅಕ್ಷರ ಕಲಿಸುವ ಕಾರ್ಯಕ್ಕೆ ತಾತ್ವಿಕ ಅನು ಮೋದನೆ ದೊರೆತಿದೆ. 892 ಮಂದಿಗೆ ಅಕ್ಷರಾಭ್ಯಾಸ ಗುರಿ ಹೊಂದಲಾಗಿದೆ. 720ಕ್ಕೂ ಅಧಿಕ ಮಂದಿಗೆ ಅಕ್ಷರ ಕಲಿಸಲಾಗಿದೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಣಿಪುರ ಗ್ರಾಮ ಹಾಗೂ ದ.ಕ. ಜಿಲ್ಲೆಯ ಮಂಗಳೂರು ತಾಲೂಕಿನ ಅಡ್ಯಾರು, ಬಾಳ, ಗಂಜಿಮಠ, ಗುರುಪುರ, ಜೋಕಟ್ಟೆ, ಕಂದಾ ವರ, ಕುಪ್ಪೆಪದವು, ಮೂಡುಶೆಡ್ಡೆ, ಮುಚ್ಚಾರು, ನೀರುಮಾರ್ಗ, ಮೂಲ್ಕಿ ತಾಲೂಕಿನ ಬಳ್ಳುಂಜೆ, ಕೆಮ್ರಾಲ್, ಕಿಲ್ಪಾಡಿ, ಉಳ್ಳಾಲ ತಾಲೂಕಿನ ಅಂಬ್ಲಿ ಮೊಗರು, ಬೋಳಿಯಾರು, ಹರೇಕಳ, ಕಿನ್ಯಾ, ಕೊಣಾಜೆ, ಮಂಜನಾಡಿ ಗ್ರಾ.ಪಂ.ಗಳ ಅನಕ್ಷರಸ್ಥರಿಗೆ ಅಕ್ಷರಾಭ್ಯಾಸ ಮಾಡಿಸಲಾಗುವುದು.
ಕಳೆದ ವರ್ಷ ಉಡುಪಿಯಲ್ಲಿ ನಾಡ ಗ್ರಾ.ಪಂ.ನ 42 ಅನಕ್ಷರಸ್ಥರಿಗೆ ಹಾಗೂ ದ.ಕ. ಜಿಲ್ಲೆಯ ಮೂಡಬಿದಿರೆ ತಾಲೂಕಿನ 12 ಹಾಗೂ ಕಡಬ ತಾಲೂಕಿನ 16 ಗ್ರಾ.ಪಂ.ಗಳ ಸುಮಾರು 720ಕ್ಕೂ ಅಧಿಕ ಅನಕ್ಷರಸ್ಥರಿಗೆ ವಿದ್ಯೆ ಕಲಿಸಿ, ಪರೀಕ್ಷೆ ನಡೆಸಿ ಪ್ರಮಾಣಪತ್ರ ನೀಡಲಾಗಿದೆ.
ಸ್ಥಳೀಯ ಬೋಧಕರು
ವಯಸ್ಕರ ಶಿಕ್ಷಣ ಇಲಾಖೆ ನಡೆಸುವ ಈ ಕಾರ್ಯ ಕ್ರಮಕ್ಕೆ ಜಿ.ಪಂ. ಅನುದಾನ ಒದಗಿಸಲಿದೆ. ಗ್ರಾ.ಪಂ.ಗಳ ಅನಕ್ಷರಸ್ಥರನ್ನು ಗುರುತಿಸಿ ಅಕ್ಷರಾಭ್ಯಾಸ ಮಾಡಿ ಸಲು ಸ್ಥಳೀಯ ಬೋಧಕರನ್ನೇ ಆಯ್ಕೆ ಮಾಡ ಲಾಗುತ್ತದೆ. ಆಶಾ ಕಾರ್ಯಕರ್ತೆಯರು, ಅಂಗನ ವಾಡಿ ಕಾರ್ಯಕರ್ತೆಯರು, ಶಾಲಾ/ಕಾಲೇಜು ಶಿಕ್ಷಕ, ಉಪನ್ಯಾಸಕರು ಅಥವಾ ಕಾಲೇಜು ವಿದ್ಯಾರ್ಥಿಗಳನ್ನು ಬೋಧಕರಾಗಿ ನೇಮಿಸಿ ಅವರ ಮೂಲಕ ಅನಕ್ಷರಸ್ಥರಿಗೆ ಅಕ್ಷರ ಕಲಿಸಲಾಗುತ್ತದೆ.
ಸರ್ವೇ ಆಗಿಲ್ಲ
2023 24ನೇ ಸಾಲಿನ ಜಿ.ಪಂ. ಲಿಂಕ್ ಡಾಕ್ಯೂಮೆಂಟ್ ಕಾರ್ಯಕ್ರಮ ಅನುಷ್ಠಾನಕ್ಕೆ ಇನ್ನೂ ಸರ್ವೇ ಕಾರ್ಯ ಆರಂಭವಾಗಿಲ್ಲ. ಸದ್ಯ ಇಲಾಖೆಯಲ್ಲಿರುವುದು 2011ರ ಜನಗಣತಿಯ ಮಾಹಿತಿ. ಆದರೆ ಉಭಯ ಜಿಲ್ಲೆಯಲ್ಲಿ ಅನಕ್ಷರತೆ ಪ್ರಮಾಣ ಕಡಿಮೆ ಇರುವುದರಿಂದ ಗುರಿ ತಲುಪುವುದು ಸುಲಭವಾದರೂ ಸ್ಥಳೀಯವಾಗಿ ಸಮೀಕ್ಷೆ ಅಗತ್ಯವಿದೆ. ಈ ಸಮೀಕ್ಷೆ ಮಾಡಿದ ಅನಂತರವೇ ಕಾರ್ಯಕ್ರಮ ಅನುಷ್ಠಾನ ಸಾಧ್ಯ. ಈ ಕಾರ್ಯಕ್ರಮದಡಿ ಉಡುಪಿ ಜಿಲ್ಲೆಯಲ್ಲಿ 42 ಹಾಗೂ ದ.ಕ. ಜಿಲ್ಲೆಯಲ್ಲಿ ಸುಮಾರು 850 ಅನಕ್ಷರಸ್ಥರಿಗೆ ಅಕ್ಷರಾಭ್ಯಾಸದ ಗುರಿ ಹೊಂದಲಾಗಿದೆ.
1,000 ಗ್ರಾ.ಪಂ. ಸಾಕ್ಷರತೆ
ರಾಜ್ಯ ಸರಕಾರದ ಸಾವಿರ ಗ್ರಾ.ಪಂ. ಸಾಕ್ಷರತೆ ಯೋಜನೆಯಡಿ ಉಡುಪಿ ಜಿಲ್ಲೆಯ ಪ್ರತೀ ಬ್ಲಾಕ್‌ನ 5 ಗ್ರಾ.ಪಂ.ನಂತೆ 25 ಗ್ರಾ.ಪಂ.ಗಳನ್ನು ಗುರುತಿಸಲಾಗಿದೆ. ದ.ಕ. ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ಹಾಗೂ ಪುತ್ತೂರು ತಾಲೂಕಿನ 16 ಗ್ರಾ.ಪಂ.ಗಳನ್ನು ಗುರುತಿಸ ಲಾಗಿದೆ. ಅನಕ್ಷರಸ್ಥರನ್ನು ಗುರುತಿಸಲು ಆಯ್ಕೆಯಾದ ವ್ಯಕ್ತಿಗೆ ಪ್ರತೀ ಅನಕ್ಷರಸ್ಥರನ್ನು ಗುರುತಿಸಿರುವುದಕ್ಕೆ 15 ರೂ. ನೀಡಲಾಗುತ್ತದೆ. ಬೋಧಕರಿಗೆ 5 ತಿಂಗಳಿಗೆ 2,500 ರೂ. ವೇತನ ನೀಡಲಾಗುತ್ತದೆ.
ಅನಕ್ಷರಸ್ಥರಿಗೆ ಸಂಬಂಧಿಸಿ ನಿಖರವಾದ ಅಂಕಿ- ಅಂಶ ವಿಲ್ಲ. 2011ರ ಜನಗಣತಿ ಮಾಹಿತಿಯ ಆಧಾರದಲ್ಲೇ ಕಾರ್ಯ ಕ್ರಮ ಬರುತ್ತಿದೆ. ಸ್ಥಳೀಯವಾಗಿ ಅನಕ್ಷರಸ್ಥರನ್ನು ಗುರುತಿಸಿ ಅಕ್ಷರಾ ಭ್ಯಾಸ ಮಾಡಿಸಿ ಪ್ರಮಾಣಪತ್ರ ನೀಡಲಾಗುತ್ತದೆ. ಸ್ಥಳೀಯ ಬೋಧಕರನ್ನೇ ನೇಮಿಸುತ್ತೇವೆ. ಕೇಂದ್ರ ಸರಕಾರದ ನವ ಭಾರತ ಸಾಕ್ಷರತ ಯೋಜನೆಯು ಉಲ್ಲಾಸ್ ಆ್ಯಪ್ ಮೂಲಕ ನಡೆಯುತ್ತಿದೆ.
– ಯೋಗ ನರಸಿಂಗಸ್ವಾಮಿ ಕೆ.ಎಂ., ಲೋಕೇಶ್,
ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿ, ಉಡುಪಿ, ದ.ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vitla: ಜಾತ್ರೆ ಸಂತೆ ಶುಲ್ಕ ಹರಾಜು ಮೊತ್ತ ಇಳಿಸಲು ಆಗ್ರಹ
ಜೀವ ರಕ್ಷಕ ಕ್ರಿಟಿಕಲ್ ಕೇರ್ ಚಿಕಿತ್ಸೆ-ಹೊಸ ಮೈಲಿಗಲ್ಲು; ಮಂಗಳೂರು ಕೆಎಂಸಿ: ಎಕ್ಮೋ ಸೇವೆ
Puttur: ಜಲಸಿರಿ ನಂಬಿದರೆ ಬೇಸಗೆಯಲ್ಲಿ ಟ್ಯಾಂಕರೇ ಗತಿ; ಸದಸ್ಯರ ಆತಂಕ
ಅಪ್ಪಣ್ಣ ಹೆಗ್ಡೆ-90ರ ಸಂಭ್ರಮ-ಅಪ್ಪಣ್ಣ ಹೆಗ್ಡೆ ಆತ್ಮವಿಶ್ವಾಸದ ಪ್ರತೀಕ : ಡಾ| ಹೆಗ್ಗಡೆ
Belagavi: ಕಾಶ್ಮೀರದಲ್ಲಿ 300 ಅಡಿ ಆಳದ ಕಂದಕಕ್ಕೆ ಬಿದ್ದ ಸೇನಾ ವಾಹನ; ಯೋಧರು ಹುತಾತ್ಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.