ಜಾನುವಾರು – ಪಕ್ಷಿಗಳಿಗೆ ನೀರುಣಿಸಲು ಕರ್ಲ್ ಮರ್ಗಿ ವ್ಯವಸ್ಥೆ
Team Udayavani, Apr 4, 2019, 6:30 AM IST
ಉಡುಪಿ: ಜಾನುವಾರು ಹಾಗೂ ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾದ ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ರಥಬೀದಿ ರಾಘವೇಂದ್ರ ಮಠದ ಮುಂಭಾಗದ ಆಯಕಟ್ಟಿನ ಸ್ಥಳದಲ್ಲಿ ಕರ್ಲ್ ಮರ್ಗಿ ಇಡುವುದರ ಮೂಲಕ ಜೀವ ಸಂಕುಲಗಳಿಗೆ ದಾಹ ತಣಿಸಲು ಸಹಕರಿಸಿದೆ.
150 ವರ್ಷಗಳ ಹಳೆಯದಾಗಿರುವ ಈ ಕರ್ಲ್ ಮರ್ಗಿ ಭಂಡಾರಿಗ¨ªೆ ದಿ| ಎಲ್ಲು ಭಂಡಾರಿ ಅವರಿಗೆ ಸೇರಿದ್ದು ನೂರು ವರ್ಷಗಳ ಹಿಂದೆ ಜಾನುವಾರುಗಳಿಗೆ ನೀರು ಕುಡಿಯಲು ಇಡುತ್ತಿದ್ದರು. ಅವರು ಕಾಲವಾದ ನಂತರ ಈ ಸಂಪ್ರದಾಯ ಸ್ಥಗಿತಗೊಂಡಿತ್ತು. ಭಂಡಾರಿ ಕುಟುಂಬದ ಬಾಲಕೃಷ್ಣ ಭಂಡಾರಿ ಅವರ ಮನೆಯಲ್ಲಿ ರಕ್ಷಿಸಿಡಲಾದ ಕರ್ಲ್ ಮರ್ಗಿಯನ್ನು ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಅವರು ಪ್ರಾಣಿ ಪಕ್ಷಿಗಳಿಗೆ ನೀರುಣಿಸಲು ನೀಡುವಂತೆ ಕೇಳಿಕೊಂಡರು. ಮನೆಯವರು ಸಮಿತಿಯ ಯೋಜನೆಗೆ ಸಮ್ಮತಿಸಿ ಕಲ್ಲು ಮರ್ಗಿ ನೀಡಿದರು.
ಸಮಿತಿಯು ಎ.2 ರಂದು ರಾಘವೇಂದ್ರ ಮಠದ ಗೋಶಾಲೆಯ ಬಸವನಿಗೆ ಕರ್ಲ್ ಮರ್ಗಿಯ ನೀರುಣಿಸುವ ಮೂಲಕ ಜಾನುವಾರು ಪಕ್ಷಿಗಳಿಗೆ ನೀರುಣಿಸಲು ಅನಾವರಣ ಮಾಡಲಾಯಿತು.
ಪುರಾತನ ಕಾಲದ ನೀರಿಡುವ ಸಾಧನ ಇದಾದರಿಂದ ರಥಬೀದಿಯಲ್ಲಿ ಕರ್ಲ್ ಮರ್ಗಿಯು ಯಾತ್ರಿಕರ ಗಮನ ಸೆಳೆಯುತ್ತಿದೆ. ಅನಾವರಣ ಕಾರ್ಯಕ್ರಮದಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯರಾದ ತಾರಾನಾಥ್ ಮೇಸ್ತ ಶಿರೂರು, ಡೇವಿಡ್, ನಜೀರ್, ಮೋಹನ, ಕಿಶೋರ್ ಕುಮಾರ್ ಕರ್ನಪಾಡಿ, ಕಾರ್ತೀಕ್, ಮೋಹನ್ ದೇಶಪಾಂಡೆ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.