ಸಾಲ ಮರುಪಾವತಿಯಲ್ಲಿ ಶೇ. 97.48 ಸಾಧನೆ: ಉಡುಪಿ ಲೀಡ್ ಬ್ಯಾಂಕ್ ಸಭೆ
Team Udayavani, Jun 29, 2017, 3:35 AM IST
ಉಡುಪಿ: ಜಿಲ್ಲೆಯಲ್ಲಿ 2016-17ರ 4ನೇ ತ್ತೈಮಾಸಿಕದಲ್ಲಿ 20,705 ಕೋ.ರೂ. ಠೇವಣಿ ಸ್ವೀಕರಿಸಿ, ಶೇ. 14.22ರಷ್ಟು ಪ್ರಗತಿ ಸಾಧಿಸಲಾಗಿದೆ. 7014.70 ಕೋ.ರೂ.ಗಳಲ್ಲಿ 6,338 ಕೋ. ರೂ. ಸಾಲ ವಸೂಲಾತಿ ಮಾಡಲಾಗಿದ್ದು, ಒಟ್ಟು ಶೇ. 97.48ರಷ್ಟು ಸಾಧನೆ ಮಾಡಲಾಗಿದೆ. ಕೃಷಿ ಕ್ಷೇತ್ರಕ್ಕೆ 1,815.62 ಕೋ. ರೂ., ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 2,140.02 ಕೋ. ರೂ. ಸಾಲ ನೀಡಲಾಗಿದೆ ಎಂದು ಸಿಂಡಿಕೇಟ್ ಬ್ಯಾಂಕ್‌ನ ಉಪ ಮುಖ್ಯ ಪ್ರಬಂಧಕ ಎಸ್.ಎಸ್. ಹೆಗ್ಡೆ ತಿಳಿಸಿದರು.
ಅವರು ಮಂಗಳವಾರ ಜಿ.ಪಂ.ನ ಡಾ| ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕಿನ ಜಿಲ್ಲಾ ಮಟ್ಟದ ಪರಿಶೀಲನ ಸಮಿತಿ ಸಭೆಯಲ್ಲಿ ಮಾಹಿತಿ ನೀಡಿದರು. 5,392 ವಿದ್ಯಾರ್ಥಿಗಳಿಗೆ 72.78 ಕೋ. ರೂ. ಶಿಕ್ಷಣ ಸಾಲ, 322.64 ಕೋ. ರೂ. ವಸತಿ ಸಾಲ, ದುರ್ಬಲ ವರ್ಗದ 1,05,747 ಜನರಿಗೆ 1,121.39 ಕೋ. ರೂ., 21,371 ಎಸ್.ಸಿ. ಹಾಗೂ ಎಸ್.ಟಿ. ಫಲಾನುಭವಿಗಳಿಗೆ 180.12 ಕೋ. ರೂ., 39,638 ಅಲ್ಪಸಂಖ್ಯಾಕರಿಗೆ 350.86 ಕೋ. ರೂ., 72.78 ಕೋ. ರೂ. ಶಿಕ್ಷಣ ಸಾಲ, ಆದ್ಯತಾ ವಲಯಕ್ಕೆ 5,103.65 ಕೋ. ರೂ., ಆದ್ಯತೇತರ ವಲಯಕ್ಕೆ 1,734.35 ಕೋ. ರೂ. ಸಾಲ ವಿತರಿಸಲಾಗಿದೆ ಎಂದರು.
ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಫ್ರಾನ್ಸಿಸ್ ಬೋರ್ಗಿಯ ಮಾತನಾಡಿ, ವಿವಿಧ ಸರಕಾರಿ ಇಲಾಖೆಗಳಲ್ಲಿ ಪ್ರಸ್ತತ ಆರ್ಥಿಕ ವರ್ಷದಲ್ಲಿ ಜಾರಿಗೆ ಬಂದಿರುವ ವಿವಿಧ ಯೋಜನೆಗಳು, ವಸತಿ ಯೋಜನೆಯಲ್ಲಿ ಪರಿಷ್ಕೃತಗೊಂಡಿರುವ ಸಾಲದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಸ್ಟ್ಯಾಂಡಪ್ ಇಂಡಿಯಾ ಯೋಜನೆಯಲ್ಲಿ ಹೆಚ್ಚಿನ ಪ್ರಗತಿ ಆಗಿಲ್ಲ. ಈ ಕುರಿತು ಬ್ಯಾಂಕ್ ಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಆರ್‌ಬಿಐನ ಪಟ್ನಾಯಕ್ ಉಪಸ್ಥಿತರಿದ್ದರು.
“ಬೆಳೆ ವಿಮೆಗೆ ಆದ್ಯತೆ ಕೊಡಿ’
ಉಡುಪಿ ಜಿಲ್ಲೆಯ ರೈತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆಗೆ ನೋಂದಣಿ ಮಾಡಲು ಜಿಲ್ಲೆಯ ಎಲ್ಲ ಬ್ಯಾಂಕ್‌ಗಳು ಕ್ರಮ ಕೈಗೊಳ್ಳಬೇಕು. ಕೃಷಿ ಇಲಾಖೆಯಿಂದ ಭತ್ತದ ಬೆಳೆಗೆ ಜೂ. 30ರ ವರೆಗೆ ಮತ್ತು ತೋಟಗಾರಿಕಾ ಇಲಾಖೆಯಿಂದ ತೆಂಗು ಮತ್ತು ಕರಿ ಮೆಣಸು ಬೆಳೆಗೆ ಜು. 30ರ ವರೆಗೆ ಬೆಳೆ ವಿಮೆ ನೋಂದಣಿಗೆ ಅವಕಾಶವಿದ್ದು, ಜಿಲ್ಲೆಯ ರೈತರು ಈ ಯೋಜನೆಯ ಪ್ರಯೋಜನ ಪಡೆಯುವ ಕುರಿತಂತೆ ಎಲ್ಲ ಬ್ಯಾಂಕ್‌ಗಳು ಆದ್ಯತೆ ಮೇಲೆ ರೈತರಿಗೆ ಮಾಹಿತಿ ನೀಡಿ, ಹೆಚ್ಚಿನ ಸಂಖೈಯ ರೈತರ ನೋಂದಣಿಗೆ ಸಹಕರಿಸುವಂತೆ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!
Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ
ಜೋಡೋ ಯಾತ್ರೆಯಲ್ಲಿ”ನಗರ ನಕ್ಸಲರು’: ಮಹಾರಾಷ್ಟ್ರ ಸಿಎಂ ಫಡ್ನವೀಸ್
WPL 2025: ವನಿತಾ ಪ್ರೀಮಿಯರ್ ಲೀಗ್ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.