ಸ್ಥಳೀಯ ಸಂಸ್ಥೆಗಳ ಚುನಾವಣೆ : ವಾರ್ಡ್‌ವಾರು ಮೀಸಲಾತಿ ಪ್ರಕಟ
Team Udayavani, Jun 13, 2018, 3:55 AM IST
ಉಡುಪಿ/ಕೋಟ: ಸ್ಥಳೀಯಾಡಳಿತ ಸಂಸ್ಥೆಗಳ ಜಿದ್ದಾ-ಜಿದ್ದಿಗೆ ವೇದಿಕೆ ಸಿದ್ಧಗೊಂಡಿದ್ದು, ಉಡುಪಿ ನಗರ ಸಭೆ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ ವಾರ್ಡ್‌ವಾರು ಸದಸ್ಯರ ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ. ಮೀಸಲಾತಿ ಬೆನ್ನಿಗೆ ಗರಿಗೆದರಿದ ರಾಜಕೀಯ ವಾರ್ಡ್‌ವಾರು ಸದಸ್ಯರ ಮೀಸಲಾತಿ ಪಟ್ಟಿ ಜೂ. 11ರಂದು ಮುಖ್ಯಾಧಿಕಾರಿಗಳ ಕೈ ಸೇರಿದೆ. ಇದರೊಂದಿಗೆ ಅಕಾಂಕ್ಷಿಗಳ ಚಟುವಟಿಕೆ ಕೂಡ ಗರಿಗೆದರಿದೆ. ಅಭ್ಯರ್ಥಿಯಾಗುವ ಆಕಾಂಕ್ಷೆಯಿಂದ ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಕೆಲಸ ಮಾಡಿದವರು, ಒಂದಷ್ಟು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಉತ್ಸಾಹದಿಂದಿದ್ದಾರೆ. ತಮ್ಮ ವಾರ್ಡ್‌ನಲ್ಲಿ ಮೀಸಲಾತಿ ಆಧಾರದಲ್ಲಿ ಸ್ಪರ್ಧಿಸಲು ಅವಕಾಶವಿದೆಯೇ ಎಂದು ಪರಿಶೀಲಿಸಿಕೊಳ್ಳುತ್ತಿದ್ದಾರೆ. ಅವಕಾಶ ವಂಚಿತರಾದವರು ಏನಾದರೂ ಮಾಡಿ ಮೀಸಲಾತಿ ಬದಲಾಯಿಸಬೇಕು ಎಂದು ಪಕ್ಷದ ನಾಯಕರ ಬೆನ್ನು ಬಿದ್ದಿದ್ದಾರೆ. ಹಲವು ಮಂದಿ ಆಕಾಂಕ್ಷಿಗಳಿರುವ ಕಡೆ ಟಿಕೆಟ್ ಖಚಿತಪಡಿಸಿಕೊಳ್ಳಲು ಹೋರಾಟ ನಡೆಯುತ್ತಿದೆ.
ಉಡುಪಿ ನಗರಸಭೆ
ನಗರಸಭೆಯ ವಾರ್ಡುಗಳ ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸುವುದಿದ್ದರೆ ವಾರದೊಳಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕಾಗಿದೆ.
ಮೀಸಲಾತಿ ವಿವರ ಇಂತಿದೆ:
– ಕೊಳ, ಸುಬ್ರಹ್ಮಣ್ಯನಗರ, ಸರಳೆಬೆಟ್ಟು, ಬಡಗಬೆಟ್ಟು, ಗುಂಡಿಬೈಲು: ಹಿಂ. ವರ್ಗ ಎ ಮಹಿಳೆ.
– ವಡಭಾಂಡೇಶ್ವರ, ಕೊಡವೂರು, ಗೋಪಾಲಪುರ, ಕಕ್ಕುಂಜೆ, ಶೆಟ್ಟಿಬೆಟ್ಟು, ಪರ್ಕಳ, ಇಂದಿರಾನಗರ, ಚಿಟ್ಪಾಡಿ, ಬನ್ನಂಜೆ, ತೆಂಕಪೇಟೆ- ಸಾಮಾನ್ಯ.
– ಮಲ್ಪೆ ಸೆಂಟ್ರಲ್- ಹಿಂ. ವರ್ಗ ಬಿ ಮಹಿಳೆ.
– ಕಲ್ಮಾಡಿ, ಕರಂಬಳ್ಳಿ, ಈಶ್ವರನಗರ, ಕುಂಜಿಬೆಟ್ಟು, ವಳಕಾಡು: ಹಿಂ. ವರ್ಗ ಎ.
– ಮೂಡಬೆಟ್ಟು, ಮೂಡುಪೆರಂಪಳ್ಳಿ, ಕಡಿಯಾಳಿ, ಮಣಿಪಾಲ, ಬೈಲೂರು, ಕಿನ್ನಿಮೂಲ್ಕಿ, ಅಜ್ಜರಕಾಡು, ಶಿರಿಬೀಡು, ಅಂಬಲಪಾಡಿ: ಸಾಮಾನ್ಯ ಮಹಿಳೆ.
– ಕೊಡಂಕೂರು: ಪರಿಶಿಷ್ಟ ಜಾತಿ ಮಹಿಳೆ
– ನಿಟ್ಟೂರು: ಹಿಂ. ವರ್ಗ ಬಿ
– ಸಗ್ರಿ: ಪರಿಶಿಷ್ಟ ಪಂಗಡ ಮಹಿಳೆ
– ಇಂದ್ರಾಳಿ: ಪರಿಶಿಷ್ಟ ಪಂಗಡ
– ಕಸ್ತೂರ್ಬಾ ನಗರ: ಪರಿಶಿಷ್ಟ ಜಾತಿ.
ನಗರಸಭೆ, ಪುರಸಭೆ, ಪ.ಪಂ.: ಕರಡು ಮತದಾರರ ಪಟ್ಟಿ ಪ್ರಕಟ
ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಉಡುಪಿ ನಗರಸಭೆ, ಕುಂದಾಪುರ ಮತ್ತು ಕಾರ್ಕಳ ಪುರಸಭೆ ಹಾಗೂ ಸಾಲಿಗ್ರಾಮ ಪ.ಪಂ. ವ್ಯಾಪ್ತಿಯಲ್ಲಿ ಬರುವ ಕರಡು ಮತದಾರರ ಪಟ್ಟಿ ಸಿದ್ದಪಡಿಸಲಾಗಿದೆ. ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಕಚೇರಿ, ಸಹಾಯಕ ಕಮೀಷನರ್ ಕಚೇರಿ, ಉಡುಪಿ, ಕುಂದಾಪುರ, ಕಾರ್ಕಳ, ಕಾಪು, ಬ್ರಹ್ಮಾವರ, ಹೆಬ್ರಿ, ಬೈಂದೂರು ತಾಲೂಕು ಕಚೇರಿಗಳಲ್ಲಿ ಪ್ರಕಟಿಸಲಾಗಿದ್ದು, ಕಚೇರಿ ವೇಳೆ ಪರಿಶೀಲಿಸಬಹುದು.
ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸಲು ಅಥವಾ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಜೂ. 17ರ ಒಳಗೆ ಸಹಾಯಕ ಕಮೀಷನರ್ ಕಚೇರಿ, ತಾಲೂಕು ಕಚೇರಿ, ಜಿಲ್ಲಾಧಿಕಾರಿಯವರ ಕಚೇರಿಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸ್ವೀಕೃತವಾದ ಆಕ್ಷೇಪಣೆಗಳನ್ನು ಜೂ. 22ರ ಒಳಗೆ ಇತ್ಯರ್ಥಪಡಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
2 ಹೊಸ ವಾರ್ಡ್
ಪ.ಪಂ.ನ ಕಾರ್ಕಡ ಗ್ರಾಮದ ಬಡಾಹೋಳಿ ಮತ್ತು ತೆಂಕಹೋಳಿ ವಾರ್ಡ್‌ಗಳನ್ನು ಪರಿಷ್ಕರಿಸಿ ಹೊಸದಾಗಿ ಮೂಡುಹೋಳಿ ವಾರ್ಡ್ ರಚಿಸಲಾಗಿದೆ ಹಾಗೂ ಗುಂಡ್ಮಿ ಗ್ರಾಮದ ಚೆಲ್ಲಮಕ್ಕಿ ವಾರ್ಡ್ ನಡುವೆ ಯಕ್ಷಿಮಠ ವಾರ್ಡ್ ಸೃಷ್ಟಿಸಲಾಗಿದೆ. ಹೀಗಾಗಿ ಇದೀಗ ವಾರ್ಡ್‌ನ ಸಂಖ್ಯೆ 16ಕ್ಕೇರಿದೆ.
ಮೀಸಲಾತಿ ಅಧಿಕೃತ ಪ್ರಕಟ
ಸಾಲಿಗ್ರಾಮ ಪ.ಪಂ. 2018ರ ಸಾರ್ವತ್ರಿಕ ಚುನಾವಣೆಗೆ ಪೂರ್ವಭಾವಿಯಾಗಿ ಮತದಾರರ ಪಟ್ಟಿ ಸಿದ್ಧಪಡಿಸುವುದು ಇನ್ನಿತರ ಕಾರ್ಯಗಳು ಮುಕ್ತಾಯಗೊಂಡಿವೆ. ಜೂ.11ರಂದು ವಿಶೇಷ ರಾಜ್ಯ ಪತ್ರಿಕೆಯಲ್ಲಿ ಪ್ರಕಟಗೊಂಡ ವಾರ್ಡ್‌ವಾರು ಸದಸ್ಯರ ಮೀಸಲಾತಿ ಪಟ್ಟಿ ಕೈ ಸೇರಿದೆ. ಅದನ್ನು ಸಾರ್ವಜನಿಕರ ಅವಗಣನೆಗಾಗಿ ಸೂಚನಾ ಫಲಕದಲ್ಲಿ ಅಳವಡಿಸಿದ್ದು ಪ್ರಕಟಿತ ಮೀಸಲಾತಿಯಲ್ಲಿ ಯಾವುದೇ ಆಕ್ಷೇಪಣೆಗಳಿದಲ್ಲಿ ಲಿಖಿತ ರೂಪದಲ್ಲಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ನಿಗದಿತ ದಿನಾಂಕದ ಮೊದಲು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ಅವಕಾಶವಿದೆ.
– ಶ್ರೀಪಾದ್ ಪುರೋಹಿತ್, ಮುಖ್ಯಾಧಿಕಾರಿಗಳು ಸಾಲಿಗ್ರಾಮ ಪ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.