ಹಳ್ಳಿ ಗಾದಿ: ದಿನೇ ದಿನೆ ಹೆಚ್ಚುತ್ತಿದೆ ಚುನಾವಣ ಕಾವು
Team Udayavani, Dec 14, 2020, 12:22 PM IST
ಹೆಮ್ಮಾಡಿಯಲ್ಲಿ ನಾಮಪತ್ರ ಸಲ್ಲಿಕೆಗಾಗಿ ಸ್ಪರ್ಧಿಗಳು, ಬೆಂಬಲಿಗರು.
ಕುಂದಾಪುರ: ದಿನ ಕಳೆದಂತೆ ಪಂಚಾಯತ್ ಚುನಾವಣೆ ಕಾವು ಹೆಚ್ಚಾಗುತ್ತಿದ್ದು, ಈ ಬಾರಿ ಗ್ರಾ.ಪಂ. ಚುನಾವಣೆಯು ವಿಧಾನಸಭಾ ಚುನಾವಣೆಗಳಿಗಿಂತಲೂ ಹೆಚ್ಚು ಕುತೂಹಲ ಮೂಡಿಸುತ್ತಿದೆ ಎಂಬ ಮಾತು ಗ್ರಾಮೀಣ ಭಾಗದ ಜನರಿಂದ ಕೇಳಿಬರುತ್ತಿದೆ. ವಂಡ್ಸೆಯ ಸ್ವಾವಲಂಬನ ಕೇಂದ್ರ ತೆರವು ವಿಚಾರವು ವಂಡ್ಸೆ, ಚಿತ್ತೂರು, ಇಡೂರು– ಕುಂಜ್ಞಾಡಿ, ಹೆಮ್ಮಾಡಿ,
ಕಟ್‌ಬೆಲೂ¤ರು ಮತ್ತಿತರ ಗ್ರಾಮಗಳಲ್ಲಿ ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎನ್ನುವುದು ಬಹುತೇಕರ ಅಭಿಪ್ರಾಯ.
ಹಕ್ಲಾಡಿ: ಯುವಕರ ಹವಾ? :
ಹಕ್ಲಾಡಿ ಗ್ರಾ.ಪಂ.ನಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇದೇ ಮೊದಲ ಬಾರಿಗೆ ಎನ್ನುವಂತೆ ಯುವಕರು ಸ್ಫರ್ಧಾ ಕಣದತ್ತ ಆಸಕ್ತಿ ತೋರಿರುವುದು ಕಂಡುಬರುತ್ತಿದೆ. ಕೆಲವೆಡೆಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತರಾಗಿ ಸ್ಪರ್ಧೆಗಿಳಿಯಲು ಯುವಕರು ಸಜ್ಜಾಗಿದ್ದಾರೆ. ಹಕ್ಲಾಡಿ, ಕುಂದಬಾರಂದಾಡಿ, ನೂಜಾಡಿ ಗ್ರಾಮಗಳನ್ನು ಒಳಗೊಂಡ ಹಕ್ಲಾಡಿ ಗ್ರಾ.ಪಂ.ನಲ್ಲಿ 16 ಸ್ಥಾನಗಳಿವೆ. ಕಳೆದ ಬಾರಿ 16 ರಲ್ಲಿಯೂ ಕಾಂಗ್ರೆಸ್ ಬೆಂಬಲಿತರು ಗೆದ್ದಿದ್ದರು. ಇಲ್ಲಿ ಜಯಂತ್ ಶೆಟ್ಟಿ ಸತತ 5 ಬಾರಿ ಗೆದ್ದು ದಾಖಲೆ ನಿರ್ಮಿಸಿದ್ದರು.
ವಂಡ್ಸೆ : ಪ್ರತಿಷ್ಠೆಯ ಪೈಪೋಟಿ :
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿಯೇ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಗ್ರಾ.ಪಂ. ಎಂದರೆ ಅದು ವಂಡ್ಸೆ. ಸ್ವಾವಲಂಬನ ಕೇಂದ್ರದ ವಿಚಾರವು ಕೇವಲ ಈ ಗ್ರಾಮ ಮಾತ್ರವಲ್ಲದೆ, ಆಸುಪಾಸಿನ ಗ್ರಾಮಗಳ ಚುನಾವಣೆ ಮೇಲೂ ಪರಿಣಾಮ ಬೀರುತ್ತಿದ್ದು, ಆ ಕಾರಣದಿಂದ ಎಲ್ಲರ ಕೇಂದ್ರ ಬಿಂದು ವಾಗಿದೆ. ಕ್ಷೇತ್ರದ ಶಾಸಕರ ಸ್ವಗ್ರಾಮ ವಾಗಿದ್ದರೆ, ಮಾಜಿ ಶಾಸಕರು ಇಲ್ಲಿ ಶತಾಯ–ಗತಾಯ ತಮ್ಮ ಪಕ್ಷದ ಬೆಂಬಲಿಗರನ್ನು ಗೆಲ್ಲಿಸಿ, ಮತ್ತೂಮ್ಮೆ ಅಧಿಕಾರಕ್ಕೇರಿಸಲು ಪಣತೊಟ್ಟಿದ್ದಾರೆ. ಇಲ್ಲಿ 3 ವಾರ್ಡ್ ಗಳಿದ್ದು, 7 ಸ್ಥಾನಗಳಿವೆ. ಕಳೆದ ಬಾರಿ 7ರಲ್ಲಿಯೂ ಕಾಂಗ್ರೆಸ್ ಬೆಂಬಲಿತರು ಜಯ ಸಾಧಿಸಿದ್ದರು. ಈ ಬಾರಿ ಇಲ್ಲಿ ಬಿಜೆಪಿ ಖಾತೆ ತೆರೆಯುವುದರೊಂದಿಗೆ ಅಧಿಕಾರದ ಗದ್ದುಗೆಯೇರಲು ಹವಣಿಸುತ್ತಿದ್ದರೆ, ಕಾಂಗ್ರೆಸ್ ಕಳೆದ ಬಾರಿಯ ಫಲಿತಾಂಶದ ನಿರೀಕ್ಷೆಯಲ್ಲಿದೆ.
ಚಿತ್ತೂರು: ನಿಕಟ ಪೈಪೋಟಿ ಸಾಧ್ಯತೆ :
ಚಿತ್ತೂರು ಗ್ರಾ.ಪಂ.ನಲ್ಲಿ 3 ವಾರ್ಡ್‌ಗಳಿದ್ದು, 8 ಸ್ಥಾನಗಳಿವೆ. ಕಳೆದ ಬಾರಿ ತಲಾ 4ರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದರು. ಹೊಂದಾಣಿಕೆ ಸೂತ್ರದೊಂದಿಗೆ ಅಧ್ಯಕ್ಷ ಸ್ಥಾನ ಬಿಜೆಪಿ ಬೆಂಬಲಿತರಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಹಂಚಿಕೆಯಾಗಿತ್ತು. ಈ ಬಾರಿ ಹೆಚ್ಚು ಸ್ಥಾನ ಗೆಲ್ಲುವುದರತ್ತ ಉಭಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಕಣ್ಣಿಟ್ಟಿದ್ದಾರೆ.
ಇಡೂರು–ಕುಂಜ್ಞಾಡಿ: ದ್ವಿಪಕ್ಷೀಯ ಸ್ಪರ್ಧೆ :
ಇಡೂರು–ಕುಂಜ್ಞಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ 4 ವಾರ್ಡ್‌ಗಳಿದ್ದು, 12 ಸ್ಥಾನಗಳಿವೆ. ಕಳೆದ ಬಾರಿಯ ಚುನಾವಣೆಯಲ್ಲಿ ಐವರು ಬಿಜೆಪಿ ಬೆಂಬಲಿತರು ಹಾಗೂ 7 ಮಂದಿ ಕಾಂಗ್ರೆಸ್ ಬೆಂಬಲಿತರು ಜಯ ಸಾಧಿಸಿದ್ದರು. ಆದರೆ ಆಡಳಿತ ರಚನೆ ವೇಳೆ ಇಬ್ಬರು ಸದಸ್ಯರನ್ನು ತನ್ನ ತೆಕ್ಕೆಗೆ ಹಾಕಿಕೊಂಡ ಬಿಜೆಪಿ ಬೆಂಬಲಿತರು ಅಧಿಕಾರಕ್ಕೇರುವಲ್ಲಿ ಯಶಸ್ವಿಯಾಗಿದ್ದರು. ಈ ಬಾರಿಯೂ ಎರಡು ಪಕ್ಷಗಳ ಬೆಂಬಲಿತರ ಮಧ್ಯೆ ದ್ವಿಪಕ್ಷೀಯ ಸ್ಪರ್ಧೆ ಕಂಡು ಬರುತ್ತಿದೆ.
ತಲ್ಲೂರು: ತ್ರಿಕೋನ ಸ್ಪರ್ಧೆ :
ತಲ್ಲೂರು ಗ್ರಾ.ಪಂ. ವ್ಯಾಪ್ತಿಯ ತಲ್ಲೂರು ಗ್ರಾಮದಲ್ಲಿ 5 ಹಾಗೂ ಉಪ್ಪಿನಕುದ್ರು ಗ್ರಾಮದಲ್ಲಿ 3 ವಾರ್ಡ್‌ಗಳಿವೆ. ಒಟ್ಟು 16 ಸ್ಥಾನಗಳಿವೆ. ಕಳೆದ ಬಾರಿ 8ರಲ್ಲಿ ಕಾಂಗ್ರೆಸ್ ಬೆಂಬಲಿತರು, 6 ರಲ್ಲಿ ಬಿಜೆಪಿ ಬೆಂಬಲಿತರು, ಇಬ್ಬರು ಬಿಎಸ್‌ಪಿ ಪಕ್ಷದಿಂದ ಗೆದ್ದಿದ್ದರು. ಈ ಬಾರಿಯು ಕಾಂಗ್ರೆಸ್– ಬಿಜೆಪಿ ಬೆಂಬಲಿತರ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿಯಿದೆ. ಆದರೆ 8 ಕಡೆಗಳಲ್ಲಿ ಬಿಎಸ್‌ಪಿ ಅಭ್ಯರ್ಥಿಗಳು ಕಣಕ್ಕಿಳಿದಿರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕುಡಿಯುವ ನೀರಿನ ಸಮಸ್ಯೆ, ಹೆದ್ದಾರಿಯಲ್ಲಿ ಬೀದಿ ದೀಪ ಅಳವಡಿಸದಿರುವುದು, ಬಸ್ ನಿಲ್ದಾಣ ಸಮಸ್ಯೆ ಚುನಾವಣ ಪ್ರಚಾರದ ಪ್ರಮುಖ ವಿಷಯಗಳಾಗಿವೆ.
ಹೆಮ್ಮಾಡಿ: ಸ್ಪರ್ಧೆ–ಪ್ರತಿಸ್ಪರ್ಧೆ :
ಹೆದ್ದಾರಿಗೆ ಹೊಂದಿಕೊಂಡೇ ಇರುವ ಪಂಚಾಯತ್‌ಗಳಲ್ಲಿ ಹೆಮ್ಮಾಡಿಯೂ ಒಂದು. 4 ವಾರ್ಡ್ ಗಳಿದ್ದು, 11 ಸದಸ್ಯ ಸ್ಥಾನಗಳಿವೆ. ಕಳೆದ ಬಾರಿ ಎಲ್ಲ 11 ಸ್ಥಾನಗಳಲ್ಲಿ ಗೆದ್ದ ಹೆಗ್ಗಳಿಕೆ ಕಾಂಗ್ರೆಸ್ ಬೆಂಬಲಿತ ರದ್ದು. ಆದರೆ ಈ ಬಾರಿ ಆ ಪರಿಸ್ಥಿತಿ ಇದ್ದಂತಿಲ್ಲ. ಎಲ್ಲ ಕಡೆಗಳಲ್ಲಿ ಬಿಜೆಪಿ ಬೆಂಬಲಿತ ರಿಂದ ಪ್ರತಿಸ್ಪರ್ಧೆ ಕಾಣುತ್ತಿದೆ. ಕಳೆದ ಬಾರಿ 4 ಕಡೆಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರೆ, ಈ ಬಾರಿ ಎಲ್ಲೂ ಅವಿರೋಧ ಆಯ್ಕೆ ಸಂಭವ ಇದ್ದಂತೆ ಕಾಣುತ್ತಿಲ್ಲ. ಸಂತೋಷ್‌ನಗರ ಭಾಗದಲ್ಲಿ ಈ ಬಾರಿ ಕಾಂಗ್ರೆಸ್‌ಗೆ
ಪ್ರತಿಸ್ಪರ್ಧಿಯಾಗಿ ಎಸ್‌ಡಿಪಿಐ :
ಬೆಂಬಲಿತ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆ ಗಳಿವೆ. ಕುಡಿಯುವ ನೀರಿನ ಸಮಸ್ಯೆ, ಕೆಲವೆಡೆ ರಸ್ತೆ ಅವ್ಯವಸ್ಥೆ, ಹೆದ್ದಾರಿ ವ್ಯಾಪ್ತಿಯಲ್ಲಿ ಸರ್ವಿಸ್ ರಸ್ತೆ, ಡಿವೈಡರ್ ಕ್ರಾಸಿಂಗ್ ಇನ್ನಿತರ ಬೇಡಿಕೆಗಳು ಮತ್ತೆ ಮುನ್ನೆಲೆಗೆ ಬಂದಿವೆ.
ಕಟ್ ಬೆಲ್ತೂರು: ಪ್ರತಿಷ್ಠೆಯ ಕಣ :
ಕಟ್‌ಬೆಲೂ¤ರಿನಲ್ಲಿ 5 ವಾರ್ಡ್‌ಗಳಿದ್ದು, 13 ಸದಸ್ಯ ಸ್ಥಾನಗಳಿವೆ. ಇವುಗಳಲ್ಲಿ 3 ಕಟ್‌ಬೆಲೂ¤ರುಗ್ರಾಮಕ್ಕೆ, ಮತ್ತೆರಡು ವಾರ್ಡ್‌ಗಳು ದೇವಲ್ಕುಂದಗ್ರಾಮಕ್ಕೆ ಸೇರಿವೆ. ಕಳೆದ ಬಾರಿ 8 ರಲ್ಲಿ ಕಾಂಗ್ರೆಸ್ ಬೆಂಬಲಿತರು, 5 ಕಡೆ ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದರು. ಮಾಜಿ ಉಪಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ 4 ಬಾರಿ ಗೆದ್ದಿರುವುದು ದಾಖಲೆ.ಇವರು ಇದಕ್ಕೂ ಮುನ್ನ ಹೆಮ್ಮಾಡಿಯೊಂದಿಗಿದ್ದಾಗ ಅಧ್ಯಕ್ಷರಾಗಿಯೂ ಹಿಂದಿನ ಸಾಲಿನಲ್ಲಿಕಟ್ ಬೆಲ್ತೂರಿನ ಉಪಾಧ್ಯಕ್ಷರಾಗಿದ್ದುದು ವಿಶೇಷ. ಕುಡಿಯುವ ನೀರು, ಕೃಷಿ ಭೂಮಿಗೆ ಉಪ್ಪು ನೀರು ಸೇರ್ಪಡೆ ಗೊಳ್ಳುತ್ತಿರುವುದು ಇಲ್ಲಿನ ಬಗೆಹರಿಯದ ಸಮಸ್ಯೆಯಾಗಿದೆ. ಇದು ಬೈಂದೂರು ಕ್ಷೇತ್ರದ ಮಾಜಿ ಶಾಸಕರ ಸ್ವಗ್ರಾಮ ವಾಗಿರುವುದರಿಂದ ಪ್ರತಿಷ್ಠೆಯ ಪಂಚಾಯತ್ ಸಹ ಆಗಿದ್ದು, ನಿಕಟ ಪೈಪೋಟಿ ಸಾಧ್ಯತೆಗಳು ಕಾಣುತ್ತಿವೆ.
ಗುಜ್ಜಾಡಿ: ಬಂಡಾಯದ ಬಿಸಿ? : ಗುಜ್ಜಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ 5 ವಾರ್ಡ್ ಗಳಿದ್ದು, 16 ಸದಸ್ಯ ಸ್ಥಾನಗಳಿವೆ. ಕಳೆದ ಬಾರಿ 9 ರಲ್ಲಿ ಬಿಜೆಪಿ ಬೆಂಬಲಿತರು, 7 ಬಾರಿ ಕಾಂಗ್ರೆಸ್ ಬೆಂಬಲಿತರು ಸದಸ್ಯರಾಗಿದ್ದರು. ಸತತ 5 ಸಲಶೇಖರ್ ದೇವಾಡಿಗರು ಗೆದ್ದಿರುವುದು ದಾಖಲೆ.ಇಲ್ಲಿ ಕಾಂಗ್ರೆಸ್ ಬೆಂಬಲಿತರಲ್ಲಿ ಅಷ್ಟೇನೂಬಂಡಾಯದ ಬಿಸಿ ಇದ್ದಂತೆ ಕಾಣುತ್ತಿಲ್ಲ. ಆದರೆಬಿಜೆಪಿ ಬೆಂಬಲಿತರಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡ ದಿರುವುದರಿಂದ ಬಂಡಾಯದ ಬಿಸಿಎದುರಾಗಿದೆ. ನೀರಿನ ಅಭಾವ, ಕಸ ವಿಲೇವಾರಿ,ರಸ್ತೆ ದುರವಸ್ಥೆ, ಹಕ್ಕುಪತ್ರ ಸಮಸ್ಯೆಗಳು ಬಗೆಹರಿಯದ ಸಮಸ್ಯೆಗಳಾಗಿಯೇ ಉಳಿದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.