ಕಲಾಕೃತಿಯ ರಚನೆಗೆ ಸ್ಫೂರ್ತಿಯಾದ ಸಾರನಾಥದ ಅಶೋಕ ಸ್ತಂಭ


Team Udayavani, Aug 15, 2017, 8:55 PM IST

Ashoka-Pillar-15-8.jpg

ತೆಕ್ಕಟ್ಟೆ: ಭಾರತೀಯ ಕಲಾ ಸಂಸ್ಕೃತಿಗೆ ಇಡೀ ವಿಶ್ವವೇ ಬೆರಗಾಗಿದೆ.  ಇಲ್ಲಿನ ಗತ ಕಾಲದ ವೈಭವದ ಶಿಲ್ಪಕಲೆಗಳು ನಮ್ಮ ಮೂಲ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿದ್ದು  ಅದಕ್ಕೆ ಸಾಕ್ಷಿಯೇ ಸಾರನಾಥದಲ್ಲಿರುವ ಅಶೋಕ ಸ್ತಂಭದಲ್ಲಿರುವ ನಾಲ್ಕು ಮುಖಗಳ ಸಿಂಹಗಳು ಹಾಗೂ ಅದರಲ್ಲಿ ಓಡುತ್ತಿರುವ ಕುದುರೆ, ಎತ್ತು, ಸಿಂಹದ ಆಕೃತಿಗಳು ಜತೆಗೆ ಧರ್ಮದ ಚಕ್ರಗಳು ಅತ್ಯಂತ ಕಲಾತ್ಮಕವಾಗಿ ಕೆತ್ತಲ್ಪಟ್ಟಿದ್ದು ಇಂತಹ ಕಲಾತ್ಮಕವಾದ ಲಾಂಛನದ ಪ್ರತಿಕೃತಿಯ ರಚನೆಯಲ್ಲಿ ಕಳೆದ ಮೂವತ್ತೆರಡು ವರ್ಷಗಳಿಂದಲೂ ಕುಂದಾಪುರ ತಾಲೂಕಿನ  ತೆಕ್ಕಟ್ಟೆ ಕನ್ನುಕೆರೆ ರಾಮ ದೇವಾಡಿಗ ಇವರು  ನಿರತರಾಗಿದ್ದು ಇವರು ರಚಿಸಿದ ಸಿಮೆಂಟ್‌ ಕಲಾಕೃತಿಗಳಿಗೆ  ಆಪಾರ ಬೇಡಿಕೆ ಇದೆ.

ಮೂವತ್ತೆರಡು ವರ್ಷದಿಂದ…
ಕುಂಭಾಶಿ ಕೊರವಡಿಯ ದಿ| ಮಂಜುನಾಥ ಆಚಾರ್ಯ ಇವರ ಬಳಿ ಸಿಮೆಂಟ್‌ ಕಲಾಕೃತಿಯ ಬಗ್ಗೆ ತರಬೇತಿ ಪಡೆದಿರುವ ಇವರು ಸುಮಾರು 20 ವರ್ಷಗಳ ಕಾಲ ಕಾರ್ಯನಿರ್ವಹಿಸಿ ಅನಂತರ ಸ್ವ ಉದ್ಯೋಗದೆಡೆಗೆ ಆಸಕ್ತಿ ತಳೆದಿರುವ ಇವರು ಪ್ರಸ್ತುತ ನೀಲಾವರದಲ್ಲಿ ವಿವಿಧ ಕಲಾ ಪ್ರಕಾರದ ಸಿಮೆಂಟ್‌ ಕಲಾಕೃತಿಯನ್ನು ರಚಿಸುವ ಮೂಲಕ ಪರಿಸರದಲ್ಲಿ ತನ್ನದೆ ಆದ ಛಾಪು ಮೂಡಿಸಿದ್ದಾರೆ.

ಕೈನಲ್ಲಿಯೇ ತಯಾರಿ 
ಬದಲಾದ ಕಾಲಮಾನದಲ್ಲಿ ತಂತ್ರಜ್ಞಾನಕ್ಕೆ ಒಗ್ಗಿಕೊಂಡಿರುವ ಇಂದಿನ ಸಮುದಾಯಗಳಿಗೆ ವ್ಯತಿರಿಕ್ತವಾಗಿ ಇವರು ಕಲಾಕೃತಿಯ ರಚನೆಗೆ ಯಾವುದೇ ರೀತಿಯ ಅಚ್ಚುಗಳನ್ನು ಬಳಸದೆ ಸ್ವತಃ ಕೈಯಲ್ಲಿಯೇ ಸ್ತಂಭದಲ್ಲಿರುವ ನಾಲ್ಕು ಮುಖಗಳ ಸಿಂಹಗಳು, ಓಡುತ್ತಿರುವ ಕುದುರೆ, ಎತ್ತು, ಸಿಂಹದ ಆಕೃತಿಗಳು  ಹಾಗೂ ಧರ್ಮದ ಚಕ್ರಗಳನ್ನು ಪ್ರಮಾಣಕ್ಕೆ ಅನುಗುಣವಾಗಿ ಅತ್ಯಂತ ನಿಪುಣತೆಯಿಂದ ನೈಜತೆಯನ್ನು ಅಭಿವ್ಯಕ್ತಿಸಬಲ್ಲ ಗ್ರಾಮೀಣ ಕಲಾವಿದರಲ್ಲಿ ಕನ್ನುಕೆರೆ ರಾಮ ದೇವಾಡಿಗರು ಒಬ್ಬರು.


ನಲುಗಿದ ಕಲಾ ಬದುಕು

ಆಧುನಿಕತೆಯ ಭರಾಟೆಗೆ ಸಿಲುಕಿ ನಲುಗುತ್ತಿರುವ ನೈಜ್ಯ ಕಲಾ ಪ್ರಕಾರಗಳು ಒಂದೆಡೆಯಾದರೆ ಮತ್ತೂಂದೆಡೆಯಲ್ಲಿ ಇಂತಹ ಕಲೆಯನ್ನೇ ನಂಬಿ ಜೀವನ ನಿರ್ವಹಿಸುವ ಅದೆಷ್ಟೂ ನೈಜ ಗ್ರಾಮೀಣ ಕಲಾವಿದರ ಮೇಲೆ ಕಂಪ್ಯೂಟರ್‌ ಪ್ರಹಾರಗಳು ಎಡೆಬಿಡದೆ ಸಾಗುವುದರಿಂದ ಅದೆಷ್ಟೊ ಕಲಾವಿದರು ತೆರೆಯ ಮರೆಗೆ ಸರಿಯಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ವಾಸ್ತವ ಸತ್ಯ ಆದ್ದರಿಂದ ಸರಕಾರ ಇಂತಹ ಗ್ರಾಮೀಣ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದ ಅಗತ್ಯತೆ ಇದೆ.

ರಾಷ್ಟ್ರೀಯ ಲಾಂಛನ ಅಶೋಕ ಸ್ತಂಭ
ಭಾರತ ಸರಕಾರವು 1950 ಜನವರಿ 26 ರಂದು ಅಧಿಕೃತವಾಗಿ ಸಾರನಾಥದ ಅಶೋಕ ಸ್ತಂಭದಲ್ಲಿರುವ ನಾಲ್ಕು ಮುಖಗಳ ಸಿಂಹಗಳನ್ನು ತನ್ನ ರಾಷ್ಟ್ರ ಲಾಂಛನವಾಗಿ ಆಯ್ಕೆ ಮಾಡಿಕೊಂಡಿದ್ದು ಈ ಚಿಹ್ನೆಯಲ್ಲಿ ಮೂರು ಮುಖ ಕಾಣಿಸಿದರು ಕೂಡಾ ಲಾಂಛನವು ನಾಲ್ಕು ಸಿಂಹದ ಮುಖಗಳನ್ನು ಹೊಂದಿದೆ. ಈ ಲಾಂಛನವು ವೃತ್ತಾಕಾರದ ಹಾಸುಗಲ್ಲಿನ ಮೇಲೆ ಅಲಂಕರಿಸಿದ್ದು ನಾಲ್ಕು ಮುಖಗಳ ಸಿಂಹಗಳು, ಓಡುತ್ತಿರುವ ಕುದುರೆ, ಎತ್ತು, ಸಿಂಹದ ಆಕೃತಿಗಳು  ಹಾಗೂ ಧರ್ಮದ ಚಕ್ರ ಜತೆಗೆ ಹಾಸುಗಲ್ಲಿನ ಮೇಲೆ ಸತ್ಯಮೇವ ಜಯತೇ ಪದವನ್ನು ದೇವನಾಗರಿ ಲಿಪಿಯಲ್ಲಿ ಅಳವಡಿಸಿಕೊಳ್ಳಲಾಗಿದೆ ಇಂತಹ ಕಲಾಕೃತಿಗಳೇ  ನಮ್ಮ ಭಾರತದ ಲಾಂಛನವಾಗಿ ಇತಿಹಾಸದ ಗತ ವೈಭವವನ್ನು ಸಾರಿ ಸಾರಿ ಹೇಳುತ್ತಿದೆ.

– ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ 

ಟಾಪ್ ನ್ಯೂಸ್

ಶ್ವೇತಭವನ ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

1-shaba

Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ

Mang-Airport

Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sham

Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್‌ ಮೂಲದವರು

puttige-6-

Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

police

Udupi: ಕೋಳಿ ಅಂಕಕ್ಕೆ ದಾಳಿ; 9 ಕೋಳಿ ಸಹಿತ ನಾಲ್ವರ ವಶ

police crime

Gangolli, Ajekaru; ಮಹಿಳೆಯರಿಗೆ ಜೀವ ಬೆದರಿಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಶ್ವೇತಭವನ ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

1-shaba

Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ

Mang-Airport

Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ

1-tanker

Mangaluru; ಟ್ಯಾಂಕರ್‌ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.