ಶ್ರಮದಾನದಿಂದ ರಸ್ತೆ ಬದಿಯ ಹೊಂಡಗಳಿಗೆ ಮುಕ್ತಿ
ಶಂಕರನಾರಾಯಣ ರಾಜ್ಯ ಹೆದ್ದಾರಿ
Team Udayavani, May 9, 2019, 6:07 AM IST
ಸಿದ್ದಾಪುರ: ಶಂಕರನಾರಾಯಣ ಸಮೃದ್ಧಿ ಯುವಕ ಮಂಡಲ ಕುಳ್ಳುಂಜೆ, ಪೊಲೀಸ್ ಠಾಣೆ ಮತ್ತು ಜೆಸಿಐಇವರ ಜಂಟಿ ಆಶ್ರಯದಲ್ಲಿ ವಲಯ ಅರಣ್ಯ ಕಚೇರಿಯಿಂದ ಶೇಟ್ ಎಂಟರ್ ಪ್ರೈಸಸ್ಸ್ ಪೆಟ್ರೋಲ್ ಬಂಕ್ ತನಕ ಬೈಂದೂರು- ವಿರಾಜಪೇಟೆ ರಾಜ್ಯ ಹೆದ್ದಾರಿಯ ರಸ್ತೆ ಇಕ್ಕೆಲಗಳಲ್ಲಿ ಹೊಂಡಗಳಿಗೆ ಕಲ್ಲು ಮಣ್ಣನ್ನು ತುಂಬಿಸುವ ಮೂಲಕ ಶ್ರಮದಾನ ನಡೆಸಲಾಯಿತು.
ಹೆದ್ದಾರಿಯ ಬದಿಯಲ್ಲಿ ಮಳೆಗಾಲದ ನೀರು ಹರಿದು, ಕಂದಕಗಳು ನಿರ್ಮಾಣಗೊಂಡಿತ್ತು. ವಾಹನಗಳಿಗೆ ದಾರಿ ನೀಡುವಾಗ ದ್ವಿಚಕ್ರ ಸವಾರರು ಬಿದ್ದು ಗಾಯಗೊಂಡ ಘಟನೆಗಳು ನಡೆಯುತ್ತಿತ್ತು. ಇದನ್ನು ಮನಗಂಡು ಸ್ಥಳೀಯ ಠಾಣಾಧಿಕಾರಿ ಪ್ರಕಾಶ್ ಕೆ. ಅವರು ಸಮೃದ್ಧಿ ಯುವಕ ಮಂಡಲದ ಸದಸ್ಯರನ್ನು ಸಂಪರ್ಕಿಸಿ, ಶ್ರಮದಾನ ನಡೆಸುವ ಬಗ್ಗೆ ಚರ್ಚಿಸಿ ಕಾರ್ಯಪ್ರವೃತ್ತರಾದರು. ಆ ಮೂಲಕ ಸಂಭವನೀಯ ಅಪಾಯ ಮತ್ತು ಅಪಘಾತವನ್ನು ತಪ್ಪಿಸುವಲ್ಲಿ ಯುವಕರು ಶ್ರಮಿಸಿದರು.
ಯುವಕ ಮಂಡಲದ ಅಧ್ಯಕ್ಷ ನರಸಿಂಹ ದೇವಾಡಿಗ, ಕಾರ್ಯದರ್ಶಿ ಸಂತೋಷ ನಾಯ್ಕ, ಜೆಸಿಐ ಅಧ್ಯಕ್ಷ ರಾಜೇಶ್ ಆಚಾರ್ಯ, ಯುವಕ ಮಂಡಲದ ಪೂರ್ವಾಧ್ಯಕ್ಷ ರಘುರಾಮ ಕುಳ್ಳುಂಜೆ, ಗೋಪಾಲ್ ದೇವಾಡಿಗ, ಪ್ರವೀಣ್ ಬಾಳೆ ಕೋಡ್ಲು, ಉದಯ ನಾಯ್ಕ, ಕೃಷ್ಣ ಕೇರಿ, ಚಂದ್ರ ನಾಯ್ಕ, ಸುಭಿಕ್ಷ ಎಂಜಿನಿಯರಿಂಗ್ ವರ್ಕ್ಸ್ನ ಮಾಲಕ ಉದಯ್ ರಾವ್ ಮತ್ತು ಯುವಕ ಮಂಡಲದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
ಪೊಲೀಸ್ ಠಾಣಾ ಅಧಿಕಾರಿ ಪ್ರಕಾಶ್ ಕೆ, ಉಪ ಠಾಣಾಧಿಕಾರಿ ಶುಭಕರ್, ಸಿಬಂದಿ ಸುರೇಂದ್ರ ಶೆಟ್ಟಿ, ಪ್ರಭಾಕರ ಶೆಟ್ಟಿ, ಯುವಕ ಮಂಡಲದ ಸ್ಥಾಪಕಾಧ್ಯಕ್ಷ ನಾಗರಾಜ್ ತಲ್ಲಂಜೆ ಹಾಗೂ ಜೆಸಿಐನ ಸದಸ್ಯರು ಉಪಸ್ಥಿತರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.