ಸಾಸ್ತಾನ, ಹೆಜಮಾಡಿ: ಅಸಮರ್ಪಕ ಕಾಮಗಾರಿ ವಿರುದ್ಧ ಪ್ರತಿಭಟನೆ
Team Udayavani, Sep 21, 2018, 1:25 AM IST
ಕೋಟ: ಚತುಷ್ಪಥ ಹೆದ್ದಾರಿಯ ಅಸಮರ್ಪಕ ಕಾಮಗಾರಿ ವಿರೋಧಿಸಿ, ಸ್ಥಳೀಯ ವಾಹನಗಳಿಗೆ ಸುಂಕ ವಿನಾಯಿತಿ ಕೋರಿ ಸೆ. 20ರಂದು ಸಾಸ್ತಾನ ಟೋಲ್‌ಗೇಟ್ ಸಮೀಪ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನ ಸಭೆ ನಡೆಯಿತು. ಜಾಗೃತಿ ಸಮಿತಿಯ ಕಾನೂನು ಸಲಹೆಗಾರ ಶ್ಯಾಮ್‌ಸುಂದರ್ ನಾೖರಿ ಮಾತನಾಡಿ, ನವಯುಗ ಕಂಪೆನಿ ಮೂಲ ಒಡಂಬಡಿಕೆಯಂತೆ ಕಾಮಗಾರಿ ನಡೆಸಿಲ್ಲ. ಮಾಬುಕಳ ಮುಂತಾದ ಕಡೆಗಳಲ್ಲಿ ಹಳೆ ಸೇತುವೆಯನ್ನೇ ದುರಸ್ತಿಗೊಳಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ ಒಡಂಬಡಿಕೆಯಲ್ಲಿ ಹೊಸ ಸೇತುವೆ ನಿರ್ಮಿಸಬೇಕು ಎನ್ನುವ ಷರತ್ತಿದೆ. ಸಾಲಿಗ್ರಾಮದಲ್ಲಿ ಫ್ಲೈ ಓವರ್ ಮಂಜೂರಾಗಿದ್ದರು ಕಾಮಗಾರಿ ನಡೆದಿಲ್ಲ. ಸರ್ವೀಸ್ ರಸ್ತೆ, ಬಸ್ಸು ನಿಲ್ದಾಣ ಮುಂತಾದ ಅನೇಕ ಕಾಮಗಾರಿ ಬಾಕಿ ಇದೆ ಹಾಗೂ ಸ್ಥಳೀಯರಿಂದ ಟೋಲ್ ಸಂಗ್ರಹಿಸುತ್ತಿರುವುದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ. ಈ ಕುರಿತು ಈಗಾಗಲೇ ನ್ಯಾಯಾಲಯದ ಮೊರೆ ಹೋಗಿದ್ದು. ಇನ್ನಷ್ಟು ಹೋರಾಟ ನಡೆಯಲಿದೆ ಎಂದರು. ಈ ಸಂದರ್ಭ ಹಲವಾರು ಸಂಘ-ಸಂಸ್ಥೆಗಳ ಪ್ರಮುಖರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು ಹಾಗೂ ಯಾವುದೇ ಕಾರಣಕ್ಕೆ ಟೋಲ್ ಪಾವತಿಸುವುದಿಲ್ಲ ಎಂದರು. ಪ್ರತಿಭಟನೆಯ ಸಂದರ್ಭ ಟೋಲ್ ಪ್ಲಾಜಾದ ಸುತ್ತ ಬಿಗು ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್, ತಾ.ಪಂ.ಸದಸ್ಯೆ ಜ್ಯೋತಿ ಉದಯ್ ಪೂಜಾರಿ, ಐರೋಡಿ ಗ್ರಾ.ಪಂ. ಅಧ್ಯಕ್ಷ ಮೋಸೆಸ್ ರೋಡಿಗ್ರಸ್, ಪಾಂಡೇಶ್ವರ ಗ್ರಾ.ಪಂ. ಅಧ್ಯಕ್ಷ ಗೋವಿಂದ ಪೂಜಾರಿ, ಕುಂದಾಪುರ ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಸೋಮನಾಥ ಹೆಗ್ಡೆ ಬನ್ನಾಡಿ, ಸಾಸ್ತಾನ ವ್ಯಾವಸಾಯಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶ್ರೀಧರ್ ಪಿ.ಎಸ್., ಲಾರಿ ಮಾಲಕರ ಸಂಘದ ಗುಣಕರ ಶೆಟ್ಟಿ, ಮುಖಂಡರಾದ ರಾಧದಾಸ್, ರಾಜೇಶ್ ಕಾವೇರಿ, ಕಿಶೋರ್ ಕುಮಾರ್ , ಮಹೇಶ್ ಪೂಜಾರಿ, ಅಚ್ಯುತ್ ಪೂಜಾರಿ, ಸತೀಶ್ ಪೂಜಾರಿ ಸಾಲಿಗ್ರಾಮ, ನಾಗರಾಜ್ ಗಾಣಿಗ, ಭರತ್ ಕುಮಾರ್ ಶೆಟ್ಟಿ, ಸುಲತಾ ಹೆಗ್ಡೆ ಹಾಗೂ ಪ.ಪಂ., ಗ್ರಾ.ಪಂ. ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಡಿ.ವೈ.ಎಸ್.ಪಿ. ಕುಮಾರಸ್ವಾಮಿ, ಜಿಲ್ಲಾ ಅಪರಾಧ ನಿಗ್ರಹ ದಳದ ಸೀತಾರಾಮ್, ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್, ಕೋಟ ಪೊಲೀಸ್ ಠಾಣೆ ಉಪನಿರೀಕ್ಷಕ ನರಸಿಂಹ ಶೆಟ್ಟಿ, ಬ್ರಹ್ಮಾವರ ಎಸ್.ಐ. ರಾಘವೇಂದ್ರ, ಉಡುಪಿ ಮಹಿಳಾ ಠಾಣೆಯ ಫೆಮಿನಾ ಅವರ ನೇತೃತ್ವದಲ್ಲಿ ಕಾನೂನು ಸುವ್ಯವಸ್ಥೆ ನಿಭಾಯಿಸಲಾಯಿತು.
ಸಮಿತಿಯ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ವಿಟuಲ ಪೂಜಾರಿ ವಂದಿಸಿದರು.
ಟೋಲ್ ಪಾವತಿಸಲ್ಲ; ಹೋರಾಟ ನಿಲ್ಲಿಸಲ್ಲ
ಹೋರಾಟ ಕೇವಲ ಟೋಲ್ ಸಂಗ್ರಹಿಸಬಾರದು ಎನ್ನುವ ಒಂದೇ ಉದ್ದೇಶಕ್ಕೆ ನಡೆಯುತ್ತಿಲ್ಲ. ಅಸಮರ್ಪಕ ಕಾಮಗಾರಿ, ಬಾಕಿ ಇರುವ ಕೆಲಸ ಮಾಡಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ. ಆದರೆ ಯಾವುದೇ ಕಾರಣಕ್ಕೂ ಸ್ಥಳೀಯರು ಟೋಲ್ ಪಾವತಿಸುವುದಿಲ್ಲ. ಮುಂದಿನ ದಿನದಲ್ಲಿ ಮತ್ತೆ ನಿಮ್ಮೆಲ್ಲರ ಸಭೆ ಕರೆದು ಹೋರಾಟದ ರೂಪುರೇಷೆ ಸಿದ್ಧಪಡಿಸು ತ್ತೇವೆ. ಈಗಾಗಲೇ ಬ್ರಹ್ಮಾವರ, ಕೋಟ, ಬೀಜಾಡಿ ಭಾಗದವರು ಆಯಾಯ ಭಾಗದಲ್ಲಿ ಹೋರಾಟ ಸಂಘಟಿಸುವ ಸಿದ್ಧತೆಯಲ್ಲಿದ್ದಾರೆ. ಅದೇ ರೀತಿ ಎಲ್ಲ ಪ್ರದೇಶದಲ್ಲೂ ಹೋರಾಟ ನಡೆಯಲಿದೆ. ಆದ್ದರಿಂದ ಆದಷ್ಟು ಬೇಗ ಸಂಬಂಧಪಟ್ಟವರು ಜನಪರ ನಿರ್ಣಯವನ್ನು ಕೈಗೊಳ್ಳಬೇಕು ಎಂದು ಜಾಗೃತಿ ಸಮಿತಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ತಿಳಿಸಿದರು.
ಅಗತ್ಯವಿದ್ದರೆ ನಿಮ್ಮೊಂದಿಗೆ ಜೈಲಿಗೂ ಬರ್ತೇನೆ
ಈ ಹೋರಾಟದಲ್ಲಿ ನಾನು ಸಂಪೂರ್ಣವಾಗಿ ಜನರ ಬೆಂಬಲಕ್ಕಿದ್ದೇನೆ. ಹೋರಾಟಗಾರರ ಮೇಲೆ ಬಲಪ್ರಯೋಗಿಸಿ ಜೈಲಿಗೆ ಕಳುಹಿಸುವುದಾದರೆ ನಿಮ್ಮ ಜತೆ ನಾನು ಜೈಲಿಗೂ ಬರುತ್ತೇನೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಸಭೆಯಲ್ಲಿ ತಿಳಿಸಿದರು.
ಹೆಜಮಾಡಿ ಪ್ರತಿಭಟನೆ
ಮಾಜಿ ಸಚಿವ ವಿನಯಕುಮಾರ್ ಸೊರಕೆ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಕರೆ ನೀಡಿರುವ ಸಾಂಕೇತಿಕ ಪ್ರತಿಭಟನೆಯು ಹೆಜಮಾಡಿ ಟೋಲ್ ಪ್ಲಾಝಾ ಮುಂಭಾಗದಲ್ಲಿ ಸೆ.20ರಂದು ನಡೆಯಿತು. ಸುಮಾರು 500 ಮಂದಿ ಸಾರ್ವಜನಿ ಕರು, ಜನಪ್ರತಿನಿಧಿಗಳು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮೂಲ್ಕಿಯ ನಾಗರಿಕ ಸಮಿತಿ, ಕಿನ್ನಿಗೋಳಿಯ ಲಾರಿ ಚಾಲಕ ಮಾಲಕರ ಸಂಘ ಮತ್ತು ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಅಸೋಸಿಯೇಶನ್ ಸದಸ್ಯರು ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ, ಟೋಲ್‌ನಲ್ಲಿ ಕರಾವಳಿಗರಿಗೆ ಸಂಪೂರ್ಣ ಸುಂಕ ವಿನಾಯಿತಿ ನೀಡಲೇಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ರಾಜ್ಯ ಲೋಕೋಪಯೋಗಿ ಸಚಿವರನ್ನು ಶೀಘ್ರ ಭೇಟಿ ಮಾಡಿ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸುತ್ತೇನೆ. ಸಂಸದರ ಮೂಲಕ ನಿತಿನ್ ಗಡ್ಕರಿ ಭೇಟಿಗೂ ಕ್ರಮ ಕೈಗೊಳ್ಳಲಾಗುವುದು. ನಮ್ಮ ನ್ಯಾಯ ಯುತ ಬೇಡಿಕೆ ದೆಹಲಿ ತನಕವೂ ಮುಟ್ಟಬೇಕು ಎಂದರು.
ಪ್ರಮುಖ ನಾಯಕರುಗಳಾದ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ, ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮಾಜಿ ಉಡುಪಿ ಜಿ. ಪಂ. ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಜಿಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ವಾಸುದೇವ ರಾವ್, ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷೆ ದಮಯಂತಿ ವಿ.ಅಮೀನ್, ಉಪಾಧ್ಯಕ್ಷ ವೈ. ಸುಕುಮಾರ್, ಕಾಂಗ್ರೆಸ್ ನಾಯಕ ಪ್ರಖ್ಯಾತ್ ಶೆಟ್ಟಿ, ಜಿಲ್ಲಾ ಟ್ಯಾಕ್ಸಿಮೆನ್ ಎಸೋಸಿಯೇಶನ್ ಪ್ರ | ಕಾರ್ಯದರ್ಶಿ ರಮೇಶ್ ಕೋಟ್ಯಾನ್, ಕರವೇ ಜಿಲ್ಲಾಧ್ಯಕ್ಷ ಅನ್ಸರ್ ಅಹ್ಮದ್ ಮುಂತಾದವರು ಮಾತನಾಡಿದರು.
ವಿವಿಧ ನಾಯಕರು ಹೋರಾಟ ಸಮಿತಿಯ ಪರ ಮಾತನಾಡಿ ಜಿಲ್ಲೆಯ ಜನತೆಯನ್ನು ವಂಚಿಸುತ್ತಿರುವ ನವಯುಗ ಟೋಲ್ ಪ್ಲಾಝಾದ ವಿರುದ್ಧ ಕಿಡಿಕಾರಿದರು. ಹೋರಾಟ ಸಮಿತಿಯ ವತಿಯಿಂದ ಕೇಂದ್ರ ಹಾಗೂ ರಾಜ್ಯ ಭೂಸಾರಿಗೆ ಸಚಿವಾಲಯ, ಉಭಯ ಸಂಸದರು, ಜನಪ್ರತಿನಿಧಿಗಳು ಮತ್ತು ಉಭಯ ಜಿಲ್ಲಾಡಳಿತಕ್ಕೆ ಸಲ್ಲಿಸಲಾದ ಮನವಿಯನ್ನು ರಾಜ್ಯ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮತ್ತು ಮಾಜಿ ಶಾಸಕ ವಿನಯಕುಮಾರ್ ಸೊರಕೆ ಉಪಸ್ಥಿತಿಯಲ್ಲಿ ಕಾಪು ತಹಶೀಲ್ದಾರ್ ಗುರುಸಿದ್ಧಯ್ಯ ಹಿರೇಮಠ ಅವರಿಗೆ ಸಲ್ಲಿಸಲಾಯಿತು.ಸಮಿತಿಯ ಅಧ್ಯಕ್ಷ ಡಾ | ದೇವಿಪ್ರಸಾದ್ ಶೆಟ್ಟಿ, ಸಮಿತಿಯ ಸಂಚಾಲಕ ಶೇಖರ್ ಹೆಜ್ಮಾಡಿ,ಉಪಾಧ್ಯಕ್ಷ ಗುಲಾಂ ಮಹಮ್ಮದ್, ಗೌರವ ಸಲಹೆಗಾರ ಕಾಪು ದಿವಾಕರ ಶೆಟ್ಟಿ ಮನವಿ ಸಲ್ಲಿಸಿದರು.
ಜೆಡಿಎಸ್ ಕಾಪು ಕ್ಷೇತ್ರಾಧ್ಯಕ್ಷ ಸುಧಾಕರ ಶೆಟ್ಟಿ, ಜಿ. ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ, ಹೆಜಮಾಡಿ ಗ್ರಾ. ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಉಪಾಧ್ಯಕ್ಷ ಸುಧಾಕರ ಕರ್ಕೇರ, ಪಲಿಮಾರು ಗ್ರಾ. ಪಂ. ಅಧ್ಯಕ್ಷ ಜಿತೇಂದ್ರ ಫುರ್ಟಾಡೋ, ತಾ. ಪಂ. ಸದಸ್ಯರಾದ ರೇಣುಕಾ ಪುತ್ರನ್, ಯು. ಸಿ. ಶೇಖಬ್ಬ, ದಿನೇಶ್ ಕೋಟ್ಯಾನ್, ಮೂಲ್ಕಿ ಕಾರು ಚಾಲಕ ಮಾಲಕರ ಸಂಘದ ಅಧ್ಯಕ್ಷ ಮಧು ಆಚಾರ್ಯ, ದೇವಣ್ಣ ನಾಯಕ್, ದುರ್ಗಾಪ್ರಸಾದ್ ಹೆಗ್ಡೆ, ಧನಂಜಯ ಮಟ್ಟು, ಶಶಿಕಾಂತ್ ಶೆಟ್ಟಿ, ಮಾಜಿ ತಾ. ಪಂ. ಸದಸ್ಯ ಭಾಸ್ಕರ ಪಡುಬಿದ್ರಿ, ಮನ್ಸೂರ್ ಸಾಗ್, ಹರೀಶ್ ಶೆಟ್ಟಿ, ರವಿ ಶೆಟ್ಟಿ, ಇನ್ನ ಉದಯ ಕುಮಾರ್ ಶೆಟ್ಟಿ, ಡೇವಿಡ್ ಡಿ”ಸೋಜ,ಪ್ರಕಾಶ್ ಶೆಟ್ಟಿ ಪಡುಹಿತ್ಲು, ವಾಮನ ಕೋಟ್ಯಾನ್ ನಡಿಕುದ್ರು, ವೆಂಕಟೇಶ್ ಎಂ., ಹರೀಶ್ ನಾಯಕ್ ಕಾಪು, ಪ್ರಸನ್ನ ಶೆಟ್ಟಿ, ಸುಧೀರ್ ಕರ್ಕೇರ, ನವೀನ್‌ಚಂದ್ರ ಸುವರ್ಣ, ವಿನಯ್ ಬಲ್ಲಾಳ್ ಕಟಪಾಡಿ, ಪಾಂಡುರಂಗ ಕರ್ಕೇರ, ಸಂದೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.