ಪಲಿಮಾರು: ಗಡಿ ದಾಟಲು ಯತ್ನ, ಗೋಡೆ ಕಟ್ಟಲು ನಿರ್ಧಾರ
Team Udayavani, Apr 13, 2020, 6:48 AM IST
ಪಡುಬಿದ್ರಿ: ಜಿಲ್ಲಾ ಗಡಿಭಾಗವನ್ನು ದಾಟಿ ಬರಲು ಕರ್ನಿರೆ(ದ.ಕ.) ಜಿಲ್ಲಾ ಭಾಗದ ದ್ವಿಚಕ್ರ ಸವಾರ ಯುವಕರು ಹವಣಿಸುತ್ತಿರುವುದು ವರದಿಯಾಗಿದೆ.
ಕೆಂಪು ಮಣ್ಣ ರಾಶಿಯನ್ನೇ ಸರಿಸಿ ಅದನ್ನೇರಿ ಉಡುಪಿಯ ಭಾಗವಾದ ಪಲಿಮಾರು ಗ್ರಾಮವನ್ನು ಪ್ರವೇಶಿಸಲು ಆತುರಾಗಿರುವುದನ್ನು ಮನಗಂಡ ಕಾಪು ತಹಶೀಲ್ದಾರ್‌ಮಹಮ್ಮದ್ ಐಸಾಕ್ ಮತ್ತೆ ಗೋಡೆ ಕಟ್ಟಲು ಪಲಿಮಾರು ಗ್ರಾ. ಪಂ. ಗೆ ಸೂಚಿಸಿದ್ದಾರೆಂದು ಪಲಿಮಾರು ಗ್ರಾ. ಪಂ. ಅಧ್ಯಕ್ಷ ಜಿತೇಂದ್ರ ಫುರ್ಟಾಡೋ ಹೇಳಿದರು.
ಹೆದ್ದಾರಿ ಮೂಲಕ ಸಂಚರಿಸಲು ಹಲವರಿಗೆ ಕಷ್ಟವೆನಿಸಿದ್ದು ಹಲವಾರು ಘನವಾಹನಗಳ ಸಹಿತ ವಾಹನ ಸವಾರರು ಕರ್ನಿರೆ ಸೇತುವೆ ದಾಟಿ ಉಡುಪಿ ಜಿಲ್ಲೆಗೆ ಬರುತ್ತಿದ್ದು ರಸ್ತೆ ಹಾನಿ ಗೊಳಗಾಗುವುದೆನ್ನುವ ಭೀತಿಯಿಂದ ಇದೀಗ ಉಭಯ ಜಿಲ್ಲೆಯ ಈ ಗಡಿಯನ್ನು ಮಣ್ಣು ಪೇರಿಸಿ ಬಂದ್ ಮಾಡಲಾಗಿದೆ. ಆದರೆ ಅದರ ನಡುವೆಯೂ ತಮ್ಮ ದ್ವಿಚಕ್ರವಾಹನದ ಮೂಲಕ ನುಸುಳಲು ಯತ್ನಿಸಿದ ಪರಿಣಾಮವಾಗಿ ನಾಳೆ ಪಲಿಮಾರು ಗ್ರಾ. ಪಂ. ಹೊಲೋ ಬ್ಲಾಕ್‌ಗಳ ಗೋಡೆಯನ್ನು ಕಟ್ಟಬೇಕಾಗಿದೆ ಎಂದೂ ಜಿತೇಂದ್ರ ಫುರ್ಟಾಡೋ “ಉದಯವಾಣಿ’ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.