Lok Sabha Elections; ರಾಷ್ಟ್ರೀಯ ಪಕ್ಷಗಳು ಚುರುಕು
ಪ್ರಮುಖ ನಾಯಕರಿಂದ ಸರಣಿ ಸಭೆ, ಮತದಾನ ಹೆಚ್ಚಳಕ್ಕೆ ತಂತ್ರ
Team Udayavani, Feb 11, 2024, 7:00 AM IST
ಉಡುಪಿ/ ಮಂಗಳೂರು: ಲೋಕಸಭೆ ಚುನಾವಣೆ ಎಪ್ರಿಲ್-ಮೇಯಲ್ಲಿ ನಡೆಯುವ ಸಾಧ್ಯತೆಗಳಿದ್ದು, ಕರಾವಳಿಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಚುರುಕಾಗಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ಸರಣಿ ಸಭೆ ನಡೆಸುತ್ತಿವೆ. ರಾಜ್ಯ ಮಟ್ಟ ದಲ್ಲಿ ಕೈಗೊಳ್ಳುತ್ತಿರುವ ನಿರ್ಣಯಗಳನ್ನು ಇಲ್ಲಿಯೂ ಅನುಷ್ಠಾನಿಸಲಾಗುತ್ತಿದೆ.
ಜಿಲ್ಲಾಧಿಕಾರಿ ಕಚೇರಿ ಸಹಿತ ಜಿಲ್ಲೆಯ ವಿವಿಧೆಡೆ ಡಿಸೆಂಬರ್‌ನಿಂದಲೇ ಇವಿಎಂ ಪ್ರಾತ್ಯಕ್ಷಿಕೆ ನಡೆಯುತ್ತಿದೆ. ಚುನಾವಣೆ ಅಧಿಕೃತ ಘೋಷಣೆಯಾದ ಬಳಿಕ ಬೂತ್‌ಗಳ ಸಿದ್ಧತೆ, ಚೆಕ್‌ಪೋಸ್ಟ್‌ಗಳು, ಚುನಾವಣ ವೀಕ್ಷಕರ ನೇಮಕ, ನಾಮಿನೇಷನ್ ಪ್ರಕ್ರಿಯೆ, ಜಾಗೃತಿ ಮತ್ತಿತರ ಪ್ರಕ್ರಿಯೆಗಳು ನಡೆಯಲಿವೆ. ಉಭಯ ರಾಷ್ಟ್ರೀಯ ಪಕ್ಷಗಳ ಕೇಂದ್ರ ನಾಯಕರು ಈಗಾಗಲೇ ವಿವಿಧ ಹಂತದಲ್ಲಿ ಸಭೆ ನಡೆಸುತ್ತಿದ್ದಾರೆ. ಬಿಜೆಪಿಯು ಈಗಾಗಲೇ ರಾಜ್ಯ ಉಸ್ತು ವಾರಿ ಗಳನ್ನು ನೇಮಕ ಮಾಡಿದೆ.
ನಾಯಕರ ದೌಡು
ಬಿಜೆಪಿ ಹಾಗೂ ಕಾಂಗ್ರೆಸ್‌ನ ಮುಖಂಡರು ಜಿಲ್ಲೆಗೆ ಭೇಟಿ ನೀಡಿ ಸಭೆ ನಡೆಸುತ್ತಿದ್ದಾರೆ. ಈ ಹಿಂದಿನ ಫಲಿತಾಂಶಗಳನ್ನು ಅವಲೋಕಿಸಿ ಕೊಂಡು ಹೆಚ್ಚುವರಿ ಮತ ಗಳಿಸುವುದು ಹಾಗೂ ಕಡಿಮೆ ಮತದಾನ ಆದಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಕಾರ್ಯಯೋಜನೆ ಸಿದ್ಧಪಡಿಸ ಲಾಗುತ್ತಿದೆ. ಉಭಯ ಪಕ್ಷಗಳ ರಾಷ್ಟ್ರೀಯ ನಾಯಕರೂ ಜಿಲ್ಲೆಗೆ ಭೇಟಿ ನೀಡುವ ಸಾಧ್ಯತೆ ಇದೆ.
ವಿವಿಧ ಕಾರ್ಯಕ್ರಮ
ಮತದಾರರನ್ನು ಅದರಲ್ಲಿ ಮುಖ್ಯವಾಗಿ ಯುವ ಮತದಾರರು, ಹಿರಿಯರು ಸಹಿತ ಹೊರ ದೇಶದಲ್ಲಿರುವ ಮತದಾರ ರನ್ನು ಸೆಳೆಯಲು ನಾನಾ ತಂತ್ರಗಾರಿಕೆ ಹೆಣೆಯಲಾಗುತ್ತಿದೆ.
ಮತದಾರರ ಸಂಖ್ಯೆ ಹೆಚ್ಚಳ
2019ರಲ್ಲಿ ಉಡುಪಿ -ಚಿಕ್ಕ ಮಗಳೂರು ಕ್ಷೇತ್ರದಲ್ಲಿ 15,13,116 ರಷ್ಟಿದ್ದ ಮತದಾರರ ಸಂಖ್ಯೆ ಈಗ 15,65,339ಕ್ಕೆ ಏರಿದೆ. 2019ರಲ್ಲಿ 30,845 ಮಂದಿ ಯುವ ಮತದಾರರು ನೋಂದಣಿ ಮಾಡಿಸಿಕೊಂಡಿದ್ದು, ಈ ಬಾರಿ ಇದುವರೆಗೆ 28,149 ಮಂದಿ ನೋಂದಾಯಿಸಿಕೊಂಡಿದ್ದಾರೆ.
ಚುನಾವಣೆಗೆ 10 ದಿನ ಇರುವವರೆಗೂ ನೋಂದಣಿ ಪ್ರಕ್ರಿಯೆ ನಡೆಯ ಲಿರುವ ಕಾರಣ ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ. ದ.ಕ. ಜಿಲ್ಲೆಯಲ್ಲೂ ಹೊಸ ಮತದಾರರ ಸಂಖ್ಯೆ ಏರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.