ಶಿರೂರು – ನೀರ್ಗದ್ದೆ; ಗ್ಯಾರೇಜ್‌ನಿಂದ ಲಾರಿ ಕಳವು
Team Udayavani, Jun 2, 2019, 11:51 AM IST
ಬೈಂದೂರು: ಬೈಂದೂರು ಆರಕ್ಷಕ ಠಾಣಾ ವ್ಯಾಪ್ತಿಯ ನೀರ್ಗದ್ದೆಯ ಗ್ಯಾರೇಜಿನಲ್ಲಿ ದುರಸ್ತಿಗಾಗಿ ನಿಲ್ಲಿಸಿದ್ದ ಲಾರಿಯನ್ನು ಕಳ್ಳರು ಶುಕ್ರವಾರ ರಾತ್ರಿ ಕದ್ದೊಯ್ದಿದ್ದಾರೆ.
ನರಸಿಂಹ ದೇವಾಡಿಗ ಎನ್ನುವವರ ಮೂಕಾಂಬಿಕಾ ಕೃಪಾ ಎನ್ನುವ ಲಾರಿಯನ್ನು ಬಾಡಿ ಕೆಲಸ ಸಹಿತ ದುರಸ್ತಿಗಾಗಿ ಗ್ಯಾರೇಜಿನಲ್ಲಿ ಇರಿಸಲಾಗಿತ್ತು. ಈ ಸಂದರ್ಭ ಅದರ ಬ್ಯಾಟರಿಯನ್ನೂ ತೆಗೆದಿಡಲಾಗಿತ್ತು. ಆದರೆ ಕಳ್ಳರು ಬೇರೆ ಬ್ಯಾಟರಿ ತಂದು ಲಾರಿಯನ್ನು ಒಯ್ದಿದ್ದಾರೆ.
ನಿರಂತರ ಕಳವು
ಈ ಭಾಗದಲ್ಲಿ 2-3 ವರ್ಷಗಳಿಂದ ನಿರಂತರ ಕಳ್ಳತನ ನಡೆಯುತ್ತಿದೆ. ಮೂರು ವರ್ಷಗಳ ಹಿಂದೆ ಇಲ್ಲಿನ ವೃದ್ಧ ದಂಪತಿಯ ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ನಗ -ನಗದು ಕದ್ದೊಯ್ಯಲಾಗಿತ್ತು. ಬಳಿಕ ಸ್ಥಳೀಯ ಉದ್ಯೋಗಿಯೊಬ್ಬರ ಮನೆಯಿಂದ ಹಾಡಹಗಲೇ ಚಿನ್ನಾಭರಣ ಸಹಿತ 2.5 ಲ.ರೂ. ಮೌಲ್ಯದ ಸೊತ್ತನ್ನು ಕಳವು ಮಾಡಲಾಗಿತ್ತು. ಕಳೆದ ವರ್ಷ ನಿಲ್ಲಿಸಿದ್ದ 4 ಲಾರಿಗಳಿಂದ ಡೀಸೆಲ್ ಕದಿಯಲಾಗಿತ್ತು. ಬಳಿಕ ಲಾರಿಯೊಂದರ 6 ಟಯರ್‌ಗಳನ್ನು ಕದ್ದೊಯ್ಯಲಾಗಿತ್ತು. ಇಲ್ಲಿನ ಮನೆಯೊಂದರಿಂದ ಮೂರು ಸಲ ಕಳವು ಮಾಡಲಾಗಿತ್ತು. ಇತ್ತೀಚೆಗೆ ಸ್ಥಳೀಯ ಬೀಡಾ ಅಂಗಡಿಯೊಂದರಿಂದ ಗ್ಯಾಸ್ ಸಿಲಿಂಡರ್ ಕದ್ದೊಯ್ದು ಎ.ಟಿ.ಎಂ. ಕಳವಿಗೆ ಯತ್ನಿಸಲಾಗಿತ್ತು.
ಸ್ಥಳೀಯರ ಕೈವಾಡ ಶಂಕೆ
ಈ ಪರಿಸರದಲ್ಲಿ ಈಗಾಗಲೇ ಹತ್ತಕ್ಕೂ ಅಧಿಕ ಕಳವು ನಡೆದಿದ್ದು, ಸ್ಥಳೀಯರ ಕೈವಾಡದ ಶಂಕೆ ಎದ್ದು ಕಾಣುತ್ತಿದೆ.
ಸೂಕ್ತ ತನಿಖೆೆ: ಎಸ್.ಪಿ.
ಈ ಕುರಿತು ಪ್ರತಿಕ್ರಿಯಿಸಿದ ಎಸ್. ಪಿ. ನಿಶಾ ಜೇಮ್ಸ್ ಅವರು, ನೀರದ್ದೆ ಪ್ರಕರಣದ ಮಾಹಿತಿ ಸಿಕ್ಕಿದೆ. ಈ ಹಿಂದಿನ ಕಳ್ಳತನದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಕಳವು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.