ಕಡಿಮೆ ದಾಖಲಾತಿ ಕಾಲೇಜಿಗೆ ಸಿಗಲಿದೆ ಮರುಜೀವ
Team Udayavani, Aug 17, 2021, 4:00 AM IST
ಉಡುಪಿ: ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾದ ಕಾರಣದಿಂದ ಪದವಿ ತರಗತಿ ಗಳಿಗೆ ದಾಖಲಾತಿ ಹೆಚ್ಚಳವಾಗಲಿದೆ.
ದಾಖಲಾತಿ ಹೆಚ್ಚಿಸಲು ಸರಕಾರಿ ಪದವಿ ಕಾಲೇಜುಗಳಿಗೆ ಯಾವುದೇ ಸಮಸ್ಯೆ ಇಲ್ಲದಿದ್ದರೂ ಖಾಸಗಿ ಕಾಲೇಜುಗಳಿಗೆ ಸೀಟು ಹೆಚ್ಚಿಸಿಕೊಂಡರೂ ವಿ.ವಿ.ಯ ಕೆಲವು ಸೌಲಭ್ಯಗಳ ಕೊರತೆ ಸಮಸ್ಯೆಯಾಗಲಿದೆ. ಇನ್ನೊಂದೆಡೆ ಇದುವರೆಗೆ ದಾಖಲಾತಿ ಕಡಿಮೆ ಇರುವ ಪದವಿ ಕಾಲೇಜುಗಳಿಗೂ ಮರು ಜೀವ ಸಿಕ್ಕಂತಾಗುತ್ತದೆ. ಎಸೆಸೆಲ್ಸಿಯಲ್ಲಿಯೂ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಪದವಿಪೂರ್ವ ಕಾಲೇಜಿನ ದಾಖಲಾತಿಗೆ ಯಾವುದೇ ಸಮಸ್ಯೆ ಇಲ್ಲವಾಗಿದೆ.
ಸೀಟುಗಳು ಭರ್ತಿಯಾಗುವ ನಿರೀಕ್ಷೆ :
ಪ್ರತೀ ವರ್ಷ ಜಿಲ್ಲೆಯ ಸರಕಾರಿ ಪದವಿ ಕಾಲೇಜುಗಳಲ್ಲಿ ವಾಣಿಜ್ಯ ಹೊರತುಪಡಿಸಿ ಕಲಾ ಹಾಗೂ ವಿಜ್ಞಾನ ಕೋರ್ಸ್‌ಗಳ ಸೀಟುಗಳು ಉಳಿಯುತ್ತಿತ್ತು. ಈ ವರ್ಷ ಎಲ್ಲ ಸೀಟುಗಳು ಭರ್ತಿ ಯಾಗಬಹುದು ಎಂಬ ನಿರೀಕ್ಷೆಗಳಿವೆ. ಸಹಜವಾಗಿ ಬಿಕಾಂ ಹಾಗೂ ಬಿಸಿಎಗೆ ಹೆಚ್ಚಿನ ಬೇಡಿಕೆಯಿದೆ.
ಜಿಲ್ಲೆಯಲ್ಲಿ ಪ್ರತೀ ವರ್ಷ ಪರೀಕ್ಷೆ ಬರೆದ ಶೇ. 80ರಿಂದ 85ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ. ಇವರಲ್ಲಿ ಬಿ.ಎ., ಬಿಕಾಂ, ಬಿಎಸ್ಸಿ, ಬಿಸಿಎ, ಬಿಇ, ಎಂಬಿಬಿಎಸ್, ಪಾಲಿಟೆಕ್ನಿಕ್ ಸೇರಿದಂತೆ ಹಲವು ಕೋರ್ಸ್‌ಗಳಿಗೆ ಪ್ರವೇಶ ಪಡೆಯುತ್ತಿದ್ದರು. ಆದರೆ ಈ ವರ್ಷ ಶೇ. 100 ಫಲಿತಾಂಶ ಬಂದಿರುವುದು ದಾಖಲಾತಿ ಪ್ರಮಾಣ ಹೆಚ್ಚಾಗಲು ಪ್ರಮುಖ ಕಾರಣ.
ಕೋರ್ಸ್‌ಗಳಿಗೂ ಹೆಚ್ಚಿದ ಬೇಡಿಕೆ :
ಈ ವರ್ಷ ಕೆಲವು ಕೋರ್ಸ್ ಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಆದರೆ ಕಾಲೇಜುಗಳ ಲಭ್ಯವಿರುವ ಮೂಲಸೌಕರ್ಯ ಹಾಗೂ ಬೋಧನ ಸಿಬಂದಿಗೆ ಅನುಗುಣವಾಗಿ ನಿರ್ದಿಷ್ಟ ಸಂಖ್ಯೆಯ ಸೀಟುಗಳನ್ನು ಮಾತ್ರ ಭರ್ತಿ ಮಾಡಿಕೊಳ್ಳಬೇಕಾಗಿರುವುದರಿಂದ, ಎಲ್ಲರಿಗೂ ಇಷ್ಟಪಟ್ಟ ಕೋರ್ಸ್ ಗಳಿಗೆ ಪ್ರವೇಶ ಸಿಗುವುದು ಕಷ್ಟ. ಇತ್ತೀಚಿನ ದಿನಗಳಲ್ಲಿ ಕೋರ್ಸ್ ಗಳತ್ತ ಹೆಚ್ಚಿನ ವಿದ್ಯಾರ್ಥಿಗಳು ಆಕರ್ಷಿತರಾಗುತ್ತಿರುವುದರಿಂದಲೂ ಪದವಿ ತರಗತಿಗಳಿಗೆ ದಾಖಲಾತಿ ಹೆಚ್ಚ ಳ ವಾಗಲು ಕಾರಣವಾಗುತ್ತಿದೆ.
ಶೇ.15ರಿಂದ 20ರಷ್ಟು ದಾಖಲಾತಿ ಹೆಚ್ಚಳ :
ಉಡುಪಿ ಹಾಗೂ ದ.ಕ. ಜಿಲ್ಲೆಗಳು ಪ್ರತೀ ವರ್ಷ ಪಿಯುಸಿ ಫಲಿತಾಂಶದಲ್ಲಿ ಮುಂಚೂಣಿಯಲ್ಲಿರುತ್ತವೆ. ಸಾಮಾನ್ಯವಾಗಿ ಶೇ. 80ರಿಂದ 85ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವುದರಿಂದ ಈ ವರ್ಷ ಪದವಿ ಕಾಲೇಜುಗಳಲ್ಲಿ ಶೇ. 15ರಿಂದ 20ರಷ್ಟು ದಾಖಲಾತಿ ಹೆಚ್ಚಾಗಬಹುದು. ಹೆಚ್ಚುವರಿಯಾಗಿರುವ ಶೇ. 15ರಿಂದ 20ರಷ್ಟು ವಿದ್ಯಾರ್ಥಿಗಳಲ್ಲಿ ಮೆಡಿಕಲ್, ಎಂಜಿನಿಯ ರಿಂಗ್, ಪಾಲಿಟಿಕ್ನಿಕ್ ಸೇರುವವರೂ ಇದ್ದಾರೆ.
ಬ್ಯಾಚ್ ಸಂಖ್ಯೆ ಹೆಚ್ಚಳ ಸಾಧ್ಯತೆ : ಪ್ರತೀ ವರ್ಷ ಜಿಲ್ಲೆಯ ಸರಕಾರಿ ಪದವಿ ಕಾಲೇಜುಗಳಲ್ಲಿ ವಾಣಿಜ್ಯ ಹೊರತುಪಡಿಸಿ ಕಲಾ ಹಾಗೂ ವಿಜ್ಞಾನ ಕೋರ್ಸ್‌ಗಳ ಸೀಟುಗಳು ಉಳಿಯುತ್ತಿತ್ತು. ಈ ವರ್ಷ ಎಲ್ಲ ಸೀಟುಗಳು ಭರ್ತಿಯಾಗಬಹುದು ಎಂಬ ನಿರೀಕ್ಷೆಗಳಿವೆ. ಸಹಜವಾಗಿ ಬಿಸಿಎ ಹಾಗೂ ಬಿಕಾಂಗೆ ಹೆಚ್ಚು ಬೇಡಿಕೆಯಿದ್ದು, ಈ ವರ್ಷ ವಾಣಿಜ್ಯ ಕೋರ್ಸ್‌ಗೆ ಬ್ಯಾಚ್ ಸಂಖ್ಯೆ ಹೆಚ್ಚಿಸುವ ಸಾಧ್ಯತೆಗಳೂ ಹೆಚ್ಚಿವೆ.
ದ್ವಿತೀಯ ಪಿಯುಸಿಗೆ ದಾಖಲಾತಿ ಆರಂಭಗೊಂಡಿದೆ. ಎಲ್ಲ ಬ್ಯಾಚ್‌ಗಳಲ್ಲಿಯೂ ಶೇ.80 ರಷ್ಟು ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ. ಎಸೆಸೆಲ್ಸಿಯಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದರಿಂದ ದಾಖಲಾತಿ ಹೆಚ್ಚಳವಾಗಿದೆ. ಸರಕಾರಿ ಸಹಿತ ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಬೇಕಿರುವ ಎಲ್ಲ ರೀತಿಯ ಮೂಲಸೌಕರ್ಯಗಳು ಲಭ್ಯವಿವೆ.-ಮಾರುತಿ, ಡಿಡಿಪಿಯು, ಉಡುಪಿ
ಪದವಿ ಕಾಲೇಜುಗಳಲ್ಲಿ ಲಭ್ಯವಿರುವ ಸೀಟುಗಳು ಭರ್ತಿಯಾಗಬಹುದು. ಸೀಟು ಸಿಗಲಾರದ ಸಮಸ್ಯೆ ಉದ್ಭವವಾಗುವ ಸಾಧ್ಯತೆಗಳು ಕಡಿಮೆ. -ಡಾ| ಗಣನಾಥ ಎಕ್ಕಾರು, ಜಿಲ್ಲೆಯ ಲೀಡ್ (ತೆಂಕನಿಡಿಯೂರು ಸರಕಾರಿ ಪದವಿ ಕಾಲೇಜು) ಕಾಲೇಜು ಪ್ರಾಂಶುಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.