ಮಾ. 18-31: ಕನಕೋಡ ಶ್ರೀ ಪಂಡರೀನಾಥ ಭಜನ ಮಂದಿರದ 80ರ ಸಂಭ್ರಮ
Team Udayavani, Mar 16, 2018, 3:38 PM IST
ಕಟಪಾಡಿ ಮಾ. 15: ಉದ್ಯಾವರ ಪಡುಕರೆ ಕನಕೋಡ ಶ್ರೀ ಪಂಡರೀನಾಥ ಭಜನ ಮಂದಿರವು ಮಾ. 18ರಿಂದ ಮಾ. 31ರ ವರೆಗೆ 80ರ ಸಂಭ್ರಮ ಆಚರಿಸಲಿದೆ. ಆ ಪ್ರಯುಕ್ತ 80ನೇ ಭಜನ ಮಂಗಲೋ ತ್ಸವ, ಬ್ರಹ್ಮಕಲಶ, ಬೆಳ್ಳಿಯ ಪ್ರಭಾ ವಳಿ, ಪೀಠಕ್ಕೆ ಬೆಳ್ಳಿಯ ಕವಚ ಅರ್ಪಣೆ, 6ನೇ ವರ್ಷದ ಅಖಂಡ ಭಜನ ಕಾರ್ಯಕ್ರಮ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಸಾರ್ವ ಜನಿಕ ಶ್ರೀ ಸತ್ಯನಾರಾಯಣ ಪೂಜೆ, ಚಂಡಿಕಾ ಹೋಮ, ಮಹಾ ಅನ್ನ ಸಂತರ್ಪಣೆ ಹಾಗೂ ಧಾರ್ಮಿಕ ಕಾರ್ಯ ಕ್ರಮಗಳು ಜರಗಲಿವೆ.
ಮಾ. 18ಕ್ಕೆ ಮಧ್ಯಾಹ್ನ 2.30ಕ್ಕೆ ಮಲ್ಪೆ ಶನೀಶ್ವರ ಪೂಜಾ ಮಂದಿರದಿಂದ ಹಸಿರು ಹೊರೆಕಾಣಿಕೆ ಮೆರವಣಿಗೆಯಲ್ಲಿ ಶ್ರೀ ದೇವರ ಬೆಳ್ಳಿಯ ಪ್ರಭಾವಳಿ, ಪೀಠದ ಬೆಳ್ಳಿಯ ಕವಚಗಳು ಪಡುಕರೆಯ ಮುಖ್ಯ ಮಾರ್ಗವಾಗಿ ಸಾಗಿ ಬರಲಿವೆ. ಮಾ. 19ಕ್ಕೆ ಬೆಳಗ್ಗೆ 10.40ಕ್ಕೆ ಶ್ರೀ ಪಂಡರಿನಾಥ ದೇವರ ಪುನಃಪ್ರತಿಷ್ಠೆ ಧಾರ್ಮಿಕ ವಿಧಿ ವಿಧಾನಗಳು ಜರಗ ಲಿವೆ. ಮಾ. 20ಕ್ಕೆ ಬೆಳಗ್ಗೆ 10.35ಕ್ಕೆ ಅಷ್ಟೋತ್ತರ ಕಲಶಾಭಿಷೇಕ ಪೂರ್ವಕ ಬ್ರಹ್ಮಕುಂಭಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪಲ್ಲಪೂಜೆ, ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ಸಂಜೆ ನಗರ ಭಜನೆಗೆ ಚಾಲನೆ, ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಮಾ. 26ಕ್ಕೆ ಅಖಂಡ ಭಜನ ಕಾರ್ಯ ಕ್ರಮಕ್ಕೆ ಚಾಲನೆ, ಮಾ. 27ಕ್ಕೆ ಉಚಿತ ಆರೋಗ್ಯ ತಪಾಸಣ ಶಿಬಿರ, ಮಾ. 28ಕ್ಕೆ ಕುಟುಂಬ ಪ್ರಬೋಧನ್ ಜರಗಲಿದೆ. ಮಾ.30ಕ್ಕೆ ಬೆಳಗ್ಗೆ 9ರಿಂದ ಸತ್ಯನಾರಾಯಣ ಪೂಜೆ, ಚಂಡಿಕಾ ಹೋಮ, ಮಧ್ಯಾಹ್ನ ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ಮಾ. 31ರ ಮುಂಜಾನೆ 3.30ರಿಂದ ಓಕುಳಿ ಸ್ನಾನ, ಸೂರ್ಯೋದಯಕ್ಕೆ ಮಹಾಮಂಗಳ್ಳೋತ್ಸವ, ಸಂಜೆ ಧಾರ್ಮಿಕ ಸಭೆ ಜರಗಲಿದೆ. ವಿವಿಧ ದಿನಗಳಲ್ಲಿ ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ, ಶ್ರೀ ಈಶ ವಿಠಲ ದಾಸ ಸ್ವಾಮೀಜಿ, ಶ್ರೀ ಗುರುದೇವಾನಂದ ಸ್ವಾಮೀಜಿ, ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.