ಅನೇಕ ಯುವಕರನ್ನುಬೆಳೆಸಿದ ಸಮಾಧಾನವಿದೆ
Team Udayavani, Apr 2, 2018, 6:45 AM IST
ಓರ್ವ ಸಾಮಾನ್ಯ ಕಾರ್ಯಕರ್ತ ಮತ್ತು ಅತ್ಯುನ್ನತ ನಾಯಕ – ಈ ಎರಡೂ ಕೆಲಸಗಳನ್ನು ಏಕಕಾಲದಲ್ಲಿ ನಿಭಾಯಿಸುವ ವಿಶಿಷ್ಟ ಸಾಮರ್ಥ್ಯದ ಬಿಜೆಪಿಯ ಹಿರಿಯ ಮುಖಂಡ (ಕಾರ್ಯಕರ್ತ) ಎಂ. ಸೋಮಶೇಖರ ಭಟ್. ಕಾರ್ಯಕರ್ತರೊಂದಿಗೆ ಬೆರೆಯುವ ಜತೆ ಜತೆಗೆ ಉನ್ನತ ಮಟ್ಟದ ನಿರ್ಣಯ ತೆಗೆದುಕೊಳ್ಳುವ ನಾಯಕರೊಂದಿಗೂ ವೇದಿಕೆ ಹಂಚಿಕೊಳ್ಳುವ ಭಟ್ ಅವರು ಕೆಳಗಿನಿಂದ ಮೇಲಿನವರೆಗೂ “ಸೋಮಣ್ಣ’. 1968ರಲ್ಲಿ ಇಡೀ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಎಂಬಂತೆ ಉಡುಪಿ ಪುರಸಭೆಯಲ್ಲಿ ಜನಸಂಘ ಅಧಿಕಾರಕ್ಕೆ ಬಂದಾಗ ಸದಸ್ಯರಾಗಿ ಆಯ್ಕೆಯಾದವರು. ಬಳಿಕ ಅಧ್ಯಕ್ಷರೂ ಆದರು. ಆಗ ದಿಲ್ಲಿ ಮಹಾನಗರಪಾಲಿಕೆ ಮಾತ್ರ ಜನಸಂಘದ ಆಡಳಿತದಲ್ಲಿತ್ತು. 1984ರಲ್ಲಿ ಕರಂಬಳ್ಳಿ ಸಂಜೀವ ಶೆಟ್ಟಿ ಲೋಕಸಭೆ ಮತ್ತು ಸೋಮಶೇಖರ ಭಟ್ ಅವರು ವಿಧಾನಸಭೆಗೆ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಆಗಲೇ ಬಿಜೆಪಿ ಠೇವಣಿ ಉಳಿಸಿಕೊ ಳ್ಳುವಂತಹ ಸಾಧನೆಯನ್ನು ಈ ಇಬ್ಬರೂ ದಾಖಲಿಸಿದ್ದರು.
ಆಗ ಮತ್ತು ಈಗಿನ ಪಕ್ಷ ನಿಷ್ಠೆ ಹೇಗಿದೆ?
ಪಕ್ಷನಿಷ್ಠೆಯ ತೀವ್ರತೆ ಸ್ವಲ್ಪ ಕಡಿಮೆಯಾಗುತ್ತಿದೆ ಎಂದೆನಿ ಸುತ್ತದೆ. ಆದರೆ ಬೇರೆ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿಯಲ್ಲಿ ಪಕ್ಷ ನಿಷ್ಠೆ ಹೆಚ್ಚು. ಇಂದಿಗೂ ಅಂತಹ ಕಾರ್ಯಕರ್ತರ ದೊಡ್ಡ ಪಡೆ ನಮ್ಮೊಂದಿಗಿದೆ. ಅವರು ನಮ್ಮ ಸೊತ್ತು.
ಈ ಬಾರಿ ಬಿಜೆಪಿ ಗೆಲುವು ಖಾತರಿಯೇ?
ಹೌದು. ಕಳೆದ ಬಾರಿ ನಮ್ಮದೇ ತಪ್ಪುಗಳಿಂದ ಸೋಲ ಬೇಕಾಯಿತು. ಈ ಬಾರಿ ಕಾಂಗ್ರೆಸ್ ಮುಕ್ತ ಭಾರತವಾಗುತ್ತಿದೆ. ಕರ್ನಾಟಕದಲ್ಲಿಯೂ ಬಿಜೆಪಿ ಜಯ ಸಾಧಿಸುತ್ತದೆ. ಜಿಲ್ಲೆಯ ಎಲ್ಲ 5 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುವ ವಿಶ್ವಾಸವಿದೆ.
ನೀವು ಸಕ್ರಿಯ ರಾಜಕಾರಣದಲ್ಲಿದ್ದೀರಾ?
ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು 1980ರ ದಶಕದಲ್ಲೇ ಘೋಷಿಸಿದ್ದೇನೆ. ಅನಂತರ ಅನೇಕ ಮಂದಿ ಯುವಕರನ್ನು ಬೆಳೆಸಿದ ಸಮಾಧಾನ ನನಗಿದೆ. ಈಗಲೂ ಅದೇ ರೀತಿಯ ಕೆಲಸದಲ್ಲಿ ತೊಡಗಿಕೊಂಡಿದ್ದೇನೆ. ಮೋದಿ ಅವರ ಉತ್ತಮ ಆಡಳಿತ, ಅವರನ್ನು ಬೆಂಬಲಿಸುತ್ತಿರುವ ಹಿರಿಯ – ಕಿರಿಯರನ್ನು ನೋಡುವಾಗ ಖುಷಿಯಾಗುತ್ತಿದೆ.
ಉಡುಪಿಯ ಪ್ರಸ್ತುತ ಸ್ಥಿತಿ ಹೇಗಿದೆ?
ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳಾಗಿಲ್ಲ. ಶಿಲಾನ್ಯಾಸ ನಡೆದ ಮಾತ್ರಕ್ಕೆ ಅಭಿವೃದ್ಧಿ ಎಂದಲ್ಲ. ಪ್ರಮೋದ್ ಬಿಜೆಪಿ ಸೇರ್ಪಡೆ ಕುರಿತು ನನಗೆ ಹೊಸದಿಲ್ಲಿಯ ಬಿಜೆಪಿ ಮುಖಂಡರಿಂದ ಕರೆ ಬಂದಾಗ ನಾನು ಸಮ್ಮತಿಸಿಲ್ಲ.
ಯುವಕರಿಗೆ ಸಂದೇಶ…
ಯುವಕರು ರಾಜಕೀಯವಾಗಿಯೂ ಬೆಳೆಯಬೇಕು. ಗ್ರಾ.ಪಂ., ತಾ.ಪಂ. ನಗರಸಭೆ ಮೊದಲಾದ ಸ್ಥಳೀಯ ಸಂಸ್ಥೆಗಳಲ್ಲೂ ಅಧಿಕಾರ ನಡೆಸಿ ಅನುಭವ ಪಡೆಯುವಂತಾಗಬೇಕು. ಬಿಜೆಪಿಯಲ್ಲಿ ಈ ಬಾರಿಯೂ 40ರಿಂದ 50 ವರ್ಷ ವಯಸ್ಸಿನವರು ಹೆಚ್ಚಿನ ಸಂಖ್ಯೆಯಲ್ಲಿ ಅವಕಾಶ ಪಡೆಯುವ ವಿಶ್ವಾಸವಿದೆ.
– ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.