ಮಾ. 18-19: ಕೈತೋಟ ವೀಕ್ಷಣೆ
Team Udayavani, Mar 17, 2017, 3:56 PM IST
ಉಡುಪಿ: “ಹಸಿರು ನಮ್ಮ ಉಸಿರು’, ಕೈತೋಟ ನಮ್ಮ ಪರ್ಯಾಯ ಶ್ವಾಸಕೋಶ ಎಂಬುದರ ಅರಿವು ಮೂಡಿಸಲು ಹಿರಿಯ ಕೃಷಿಕ ಡಾ| ಕೆ.ಎನ್. ಪೈ ಅವರ ಮಣಿಪಾಲ ಈಶ್ವರನಗರದ ಮಿಲ್ಕ್ ಡೈರಿ ರಸ್ತೆಯಲ್ಲಿರುವ ನಿವಾಸದಲ್ಲಿ ಮಾ. 18 ಹಾಗೂ 19ರಂದು ಸಂಜೆ 5ರಿಂದ 6 ಗಂಟೆ ವರೆಗೆ ಕೈತೋಟ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಸಾವಯವ ಕೃಷಿಯಲ್ಲಿ ಹಣ್ಣಿನ ಗಿಡಗಳು, ತರಕಾರಿಗಳನ್ನು ಇಲ್ಲಿ ಬೆಳೆಸಲಾಗಿದೆ. ಇದಲ್ಲದೆ ಬಹುಮಹಡಿ ಮಿಶ್ರಬೆಳೆ ಪದ್ಧತಿ, ಮಳೆನೀರು ಕೊಯ್ಲು, ಛಾವಣಿ ನೀರು ಸಂಗ್ರಹ, ನೀರು ಇಂಗಿಸುವಿಕೆ, ಇಂಗುಗುಂಡಿ, ಸ್ನಾನದ ನೀರಿನ ಸದ್ಬಳಕೆ, ಜೈವಿಕ ತ್ಯಾಜ್ಯ, ಅಡುಗೆಮನೆ ತ್ಯಾಜ್ಯಗಳಿಂದ ಕಾಂಪೋಸ್ಟ್ ತಯಾರಿ, ಹಸಿರೆಲೆ ಗೊಬ್ಬರ, ಮಣ್ಣಿನ ಫಲವತ್ತತೆಯಲ್ಲಿ ಎರೆಹುಳು ಗೊಬ್ಬರದ ಪ್ರಾಮುಖ್ಯತೆ, ಮಣ್ಣಿನ ಸೂಕ್ಷ್ಮಾಣು ಜೀವಿಗಳು, ಹ್ಯೂಮಸ್ ವೃದ್ಧಿಗೆ ಕ್ರಮಗಳು, ಮಲಿcಂಗ್ ಜೀವಾಮೃತ ಇತ್ಯಾದಿ ಬಗ್ಗೆ ಈ ಕೈತೋಟದಲ್ಲಿ ಮಾಹಿತಿ ಉಚಿತವಾಗಿ ನೀಡಲಾಗುವುದು. ಆಸಕ್ತರು ಡಾ| ಕೆ.ಎನ್ ಪೈ ಅವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಡಂಪಿಂಗ್ ಯಾರ್ಡ್ ಆದ ಮಣ್ಣಪಳ್ಳ!
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Trasi: ಸಾಂಪ್ರದಾಯಿಕ ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ, ಗೋಪಾಲ ಪೂಜಾರಿ ಭಾಗಿ
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.