ಸಂಚಾರಕ್ಕೆ ದುಸ್ತರವಾದ ಮದನಾಡು- ಪರಪ್ಪಾಡಿ ಸಂಪರ್ಕ ರಸ್ತೆ
Team Udayavani, Jun 27, 2019, 5:44 AM IST
ಪಳ್ಳಿ: ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮದನಾಡು ರಸ್ತೆಯು ಸುಮಾರು 1 ಕಿ.ಮೀ. ಡಾಮರು ಕಾಣದ್ದರಿಂದ ಇಲ್ಲಿ ಮಳೆಗಾಲದಲ್ಲಿ ಸಂಚರಿಸುವುದು ಕಷ್ಟಕರವಾಗಿದೆ.
ಮದನಾಡು ರಸ್ತೆಯು 3 ಕಿ.ಮೀ. ಉದ್ದವಿದ್ದು ಈ ಮಾರ್ಗವಾಗಿ ಬೋಳ, ಕೆಮ್ಮಣ್ಣು, ಬೇಲಾಡಿ ಹಾಗೂ ಪರಪ್ಪಾಡಿ, ಬಾರಾಡಿ ಮಾರ್ಗವಾಗಿ ಬೆಳುವಾಯಿಗೆ ಅತಿ ಹತ್ತಿರದ ಸಂಪರ್ಕ ರಸ್ತೆಯಾಗಿದೆ. ಆದರೆ 1 ಕಿ.ಮೀ. ರಸ್ತೆ ಡಾಮರು ಕಾಣದ್ದರಿಂದ ಮತ್ತು ಚರಂಡಿ ಇಲ್ಲದೆ ರಸ್ತೆ ಕೆಸರುಮಯವಾಗಿದೆ.
ಬಾಕಿ ಉಳಿದ ಕಾಮಗಾರಿ
2004 ನೇ ಸಾಲಿನಲ್ಲಿ 2 ಕಿ.ಮೀ ರಸ್ತೆ ಡಾಮರೀಕರಣಗೊಂಡಿದ್ದು, ಉಳಿದ 1 ಕಿ.ಮೀ ರಸ್ತೆ ಕಚ್ಚಾ ರಸ್ತೆಯಾಗಿಯೇ ಉಳಿದಿದೆ. ಕಳೆದ ಬಾರಿ 2 ಕಿ.ಮೀ ರಸ್ತೆಗೆ ತೇಪೆ ಕಾರ್ಯ ನಡೆಸಲಾಗಿದೆ.
ಮಳೆಗಾಲದಲ್ಲಿ ಇಲ್ಲಿ ರಸ್ತೆಯಲ್ಲೇ ನೀರು ಹರಿಯುವುದರಿಂದ ರಸ್ತೆ ಹೊಂಡ-ಗುಂಡಿಯಿಂದ ತುಂಬಿದ್ದು, ವಾಹನ ಸವಾರರಿಗೆ ಸಂಕಷ್ಟ ತಂದಿದೆ. ಮದೆನಾಡು ವ್ಯಾಪ್ತಿಯಲ್ಲಿ ಸುಮಾರು 100ಕ್ಕೂ ಅಧಿಕ ಮನೆಗಳಿದ್ದು 5 ಸೆಂಟ್ಸ್ ಕಾಲನಿಯನ್ನು ಹೊಂದಿದೆ. ಈ ಮಾರ್ಗವನ್ನು ವಿದ್ಯಾರ್ಥಿಗಳು, ಕಾರ್ಮಿಕರು, ಪರಪ್ಪಾಡಿ, ಬಾರಾಡಿ ಆಸುಪಾಸಿನ ನಿವಾಸಿಗಳು ಅವಲಂಬಿಸಿದ್ದಾರೆ.
ಕಿರು ಸೇತುವೆ ಅಗತ್ಯ
ಈ ರಸ್ತೆಯಲ್ಲಿ ಅತೀ ಹಳೆಯದಾದ ಸ್ಥಳೀಯರೇ ಅಳವಡಿಸಿದ್ದ ಮೋರಿಯಿದೆ. ಇದೀಗ ಹಳತಾಗಿದೆ. ಧಾರಾಕಾರವಾಗಿ ಮಳೆ ಸುರಿದರೆ ಮೋರಿ ಮುಳುಗಡೆ ಹೊಂದಿ ಸಂಚಾರ ಸ್ಥಗಿತಗೊಳ್ಳುತ್ತದೆ. ಮೋರಿಯ ಎರಡು ಇಕ್ಕೆಲಗಳಲ್ಲಿ ತಡೆಗೋಡೆ ಇಲ್ಲದೆ ಇರುವುದರಿಂದ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.