ಎಕ್ಸ್ಪ್ರೆಸ್ ರೈಲು ಹೆಸರಿಗೆ ಮಾತ್ರ ಸೀಮಿತ ಆಗದಿರಲಿ… ಅದೇ ವೇಳಾಪಟ್ಟಿ, ಅದೇ ವೇಗ; ದರ ಮಾತ್ರ ದುಪ್ಪಟ್ಟು!
Team Udayavani, Jan 8, 2023, 7:35 AM IST
ಕುಂದಾಪುರ : ಮಡಗಾಂವ್ – ಮಂಗಳೂರು ಮೆಮು ರೈಲು ಹಾಗೂ ಮಂಗಳೂರು – ಮಡಗಾಂವ್ ಪ್ಯಾಸೆಂಜರ್ ರೈಲು ಈಗ ಎಕ್ಸ್ಪ್ರೆಸ್ ಆಗಿ ಪರಿವರ್ತಿಸಲಾಗಿದೆ. ಇದರಿಂದ ಕೊಂಕಣ ಕರಾವಳಿಗೆ ಪ್ಯಾಸೆಂಜರ್ ರೈಲು ಸೇವೆಗಳೇ ಇಲ್ಲದ ಪರಿಸ್ಥಿತಿ ಬಂದಿದೆ. ಅದೇ ಹಳೆಯ ಸಮಯ ಪಟ್ಟಿ ಅದೇ ಹಳೆಯ ವೇಗಕ್ಕೆ ದುಪ್ಪಟ್ಟು ಎಕ್ಸ್ಪ್ರೆಸ್ ದರ ಕೊಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಎಷ್ಟೇ ರೈಲ್ವೇ ಮಂಡಳಿಯ ನಿಯಮಗಳು ಅಂತಾದರೂ ಕನಿಷ್ಠ ಒಂದು ಸೆಕ್ಷನ್, ಒಂದು ಪ್ಯಾಸೆಂಜರ್ ರೈಲು ಎಂಬ ಬಗ್ಗೆ ಕೊಂಕಣ ನಿಗಮ ರೈಲು ಮಂಡಳಿಗೆ ಮನವರಿಕೆ ಮಾಡಿಕೋಡಬೇಕಾಗಿದೆ ಎಂದು ಕುಂದಾಪುರ ರೈಲು ಹಿತರಕ್ಷಣಾ ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಎಲ್ಲ ರೈಲುಗಳು ತನ್ನ ಹಳೆಯ ಸಂಖ್ಯೆಯ ಜತೆ ಓಡಾಡಬೇಕು ಎಂದು ರೈಲು ಮಂಡಳಿ ಈ ಹಿಂದೆಯೇ ಸುತ್ತೋಲೆ ಕಳಿಸಿದರೂ ದಕ್ಷಿಣ ರೈಲ್ವೇ ಮಾತ್ರ ಇಂದಿಗೂ ವಿಶೇಷ ಎಕ್ಸ್ಪ್ರೆಸ್ ರೈಲಾಗಿ ಮಂಗಳೂರು ಮಡಗಾಂವ್ ರೈಲನ್ನು ಓಡಿಸಲು ಹೊರಟಿರುವುದು ಯಾಕೆ ಮತ್ತು ಹಳೆಯ ನಂಬರ್ ಯಾವಾಗ ಸಿಗಲಿದೆ ಎಂಬ ಪ್ರಶ್ನೆ ಸಮಿತಿಯದ್ದು.
ಎಕ್ಸ್ಪ್ರೆಸ್ ರೈಲುಗಳನ್ನು ಸಮಿತಿ ಯಾವತ್ತಿಗೂ ಸ್ವಾಗತಿಸುತ್ತದೆ. ಆದರೆ ಅವು ನೈಜ ಎಕ್ಸ್ಪ್ರೆಸ್ ರೈಲುಗಳಂತಿರಬೇಕೇ ಹೊರತೂ ಕೇವಲ ನಾಮಫಲಕ ಬದಲಾವಣೆಯಲ್ಲ ಎಂದು ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.