ನೆನೆಯುವ ಅನುದಿನ: ಉಡುಪಿ ಶ್ರೀ ಅನಂತೇಶ್ವರ ದೇವಸ್ಥಾನ, ಕಳತ್ತೂರು ಶ್ರೀ ಮಹಾಲಿಂಗೇಶ್ವರ


Team Udayavani, Feb 21, 2020, 5:04 AM IST

shiva

ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕೆ ಸಾಟಿ ಬೇರಿಲ್ಲ ಎನ್ನುತ್ತದೆ ಒಂದು ಹಾಡು. ಶಿವನನ್ನು ಭಜಿಸುವುದರ ಮಹತ್ವ ಇಂಥದ್ದು. ಅಂಥ ಮಹಾಶಿವದಿನವಿದು, ಶಿವರಾತ್ರಿ. ಉಪವಾಸ, ಜಾಗರಣೆಗಳೊಂದಿಗೆ ಲಯಾಧಿಪತಿ ಸದಾಶಿವನ ಭಜನೆ ಈ ದಿನದ ವೈಶಿಷ್ಟé. ನಾಡಿನ ಎಲ್ಲ ಶಿವ ದೇಗುಲಗಳು ಶಿವರಾತ್ರಿ ಆಚರಣೆಗೆ ಸಿದ್ಧವಾಗಿವೆ. ಮನೆಗಳಲ್ಲೂ ಹರನಿಗೆ ವಿಶೇಷ ಅರ್ಚನೆ, ಅಭಿಷೇಕ ಇತ್ಯಾದಿ ನಡೆಯಲಿವೆ. ಈ ಹಿನ್ನೆಲೆಯಲ್ಲಿ ವಿವಿಧ ದೇವಾಲಯಗಳ ಶಿವರಾತ್ರಿ ಸಂಭ್ರಮದ ಇಣುಕುನೋಟ ಇಲ್ಲಿದೆ.

ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
ಕಾಪು: ಭೃಗು ಮುನಿಗಳು ಪ್ರತಿಷ್ಠಾಪಿಸಿದ ನಾಲ್ಕು ಶಿವ ಕ್ಷೇತ್ರಗಳಲ್ಲಿ ಒಂದಾದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ಸುಮಾರು 1,200 ವರ್ಷಗಳಷ್ಟು ಪುರಾತನವಾ ದುದ್ದಾಗಿದೆ. ಕುತ್ಯಾರು- ಪಾದೂರು-ಕಳತ್ತೂರು ಗ್ರಾಮಸ್ಥರ ಪ್ರಮುಖ ಆರಾಧನಾ ಕೇಂದ್ರದಲ್ಲಿ ಮಹಾಲಿಂಗೇಶ್ವರ ದೇವರು, ಗಣಪತಿ ದೇವರು ಮತ್ತು ಪಂಚ ದೈವಿಕ ಶಕ್ತಿಗಳು ಇಲ್ಲಿ ಸಾನ್ನಿಧ್ಯ ವಹಿಸಿವೆ. ಶಿವರಾತ್ರಿ ಇಲ್ಲಿ ಪ್ರಮುಖ ಹಬ್ಬವಾಗಿ ಆಚರಿಸಲ್ಪಡುತ್ತದೆ. ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ
ಈ ಬಾರಿಯ ವಿಶೇಷ: ಮಹಾಶಿವರಾತ್ರಿ ಉತ್ಸವದ ಪ್ರಯುಕ್ತ ವಿವಿಧ ಭಜನಾ ತಂಡಗಳ ಪಾಲ್ಗೊಳ್ಳುವಿಕೆಯೊಂದಿಗೆ ಭಜನ ಕಾರ್ಯಕ್ರಮ, ರಾತ್ರಿ 10 ಗಂಟೆಗೆ ರಂಗಪೂಜೆ ನಡೆಯಲಿದೆ.

ಕಾಪು ಪಡುಗ್ರಾಮ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ
ಕಾಪು: ಕಾಪು ಪಡುಗ್ರಾಮದ ಲೈಟ್‌ ಹೌಸ್‌ ಬಳಿಯ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲ ಕಾಪು ಬೀಡು ಜೈನರಸರ ಮನೆತನಕ್ಕೆ ಸಂಬಂಧ ಪಟ್ಟ ಕ್ಷೇತ್ರವಾಗಿದೆ. ಪ್ರತಿ ಸೋಮವಾರ ನಡೆ ಯುವ ಭಜನೆ ಇಲ್ಲಿನ ವಿಶೇಷ. ಪುರಾತನವಾದ ಬ್ರಹ್ಮಲಿಂಗೇಶ್ವರನ ಸನ್ನಿಧಿ ಯಲ್ಲಿ ಗ್ರಾಮಸ್ಥರ ಕೂಡುವಿಕೆಯೊಂದಿಗೆ ಪ್ರಶ್ನೆ ಚಿಂತನೆಯ ಬಳಿಕ 2018ರಲ್ಲಿ ಜೀರ್ಣೋ ದ್ಧಾರ ಕಾರ್ಯಗಳು ನಡೆದು, ಬ್ರಹ್ಮಕಲಶೋತ್ಸವ ಸಂಪನ್ನಗೊಡಿದೆ. ಬ್ರಹ್ಮಲಿಂಗೇಶ್ವರ ದೇವರು ಪ್ರಧಾನ ಶಕ್ತಿಯಾಗಿದ್ದು, ನಾಗದೇವರು, ರಕ್ತೇಶ್ವರಿ, ಯಕ್ಷ ಗಂಧರ್ವ, ನಂದಿಗೋಣ, ಬಬ್ಬರ್ಯ, ಕ್ಷೇತ್ರಪಾಲನ ಸನ್ನಿಧಿಯಿದೆ.

ಈ ಬಾರಿಯ ವಿಶೇಷ: ಬೆಳಗ್ಗೆ 8ರಿಂದ ಶಿವ ಪಂಚಾಕ್ಷರಿ ಹೋಮ, ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಪೂಜೆ, ಮಹಾ ಅನ್ನಸಂತರ್ಪಣೆ, ಸಂಜೆ ಭಜನೆ ಕಾರ್ಯಕ್ರಮ, ಮಹಾಪೂಜೆ, ಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆಯಲಿದೆ.

ಪಿಲಾರುಕಾನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
ಶಿರ್ವ: ಶಿರ್ವ-ಬೆಳ್ಮಣ್‌ಮುಖ್ಯ ರಸ್ತೆಯ ಪಿಲಾರುಕಾನದ ಬಳಿ ದಟ್ಟ ಅರಣ್ಯದ ನಡುವೆ ಇರುವ ಪಿಲಾರುಖಾನ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನ ಭಾರ್ಗವ ಮುನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಪರ ಶಿವನ ಕ್ಷೇತ್ರವಾಗಿದೆ. ಇಲ್ಲಿ ಪರಶಿವನೊಂದಿಗೆ ಮಹಾಗಣಪತಿಯೂ ನೆಲೆಸಿದ್ದು, ಬೆಳಗ್ಗೆ ಮತ್ತು ಮಧ್ಯಾಹ್ನದ ಮಹಾಪೂಜೆ ನೆರವೇರುತ್ತದೆ. ದೇವ ಸ್ಥಾನದಲ್ಲಿ ಪರಶಿವ ಮತ್ತು ಮಹಾಗಣಪತಿಯನ್ನು ಪ್ರತಿಷ್ಠಾಪಿಸಿದ ಭಾರ್ಗವ ಮುನಿಗಳೇ ಇಂದಿಗೂ ರಾತ್ರಿ ಪೂಜೆ ನೆರವೇರಿಸುತ್ತಾರೆ ಎಂಬ ಪ್ರತೀತಿ ಇದ್ದು ಆದ್ದರಿಂದ ರಾತ್ರಿ ಪೂಜೆ ಇಲ್ಲ.

ಈ ಬಾರಿಯ ವಿಶೇಷ: ವರ್ಷಂಪ್ರತಿ ಮಹಾಶಿವ ರಾತ್ರಿಯಂದು ಧ್ವಜಾರೋಹಣ ನಡೆದು 5 ದಿನಗಳ ಕಾಲ ವಾರ್ಷಿಕ ಮಹೋತ್ಸವದೊಂದಿಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

ಸಗ್ರಿ ಚಕ್ರತೀರ್ಥ ಶ್ರೀ ಉಮಾಮಹೇಶ್ವರ ದೇವಸ್ಥಾನ
ಉಡುಪಿ: ಸಗ್ರಿ ಚಕ್ರತೀರ್ಥ ಶ್ರೀ ಉಮಾಮಹೇಶ್ವರ ದೇವಸ್ಥಾನ ಬಹಳಷ್ಟು ಪುರಾತನದ್ದಾಗಿದೆ. ದೇವಸ್ಥಾನವು ಕಾನನ ಮಧ್ಯೆ ನೆಲೆ ನಿಂತಿದೆ. ಇಲ್ಲಿರುವುದು ಉದ್ಭವ ಲಿಂಗ ದೇವರು. ಇಲ್ಲಿನ ಸಾಮಂತ್‌ ಮನೆತನದವರು ದೇವರ ಆರಾಧನೆ ಕೈಂಕರ್ಯವನ್ನು ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದಾರೆ. ದೇಗುಲದಲ್ಲಿ ಪ್ರತಿ ವರ್ಷವು ಮಹಾಶಿವರಾತ್ರಿಯನ್ನು ಆಚರಿಸುತ್ತ ಬರಲಾಗುತ್ತಿದೆ.

ಈ ಬಾರಿಯ ವಿಶೇಷ: ಶಿವರಾತ್ರಿ ಪ್ರಯುಕ್ತ ರಾತ್ರಿ ಜಾಗರಣೆ, ಭಜನೆ, ಪಂಚಾಮೃತ ಅಭಿಷೇಕ, ಸಹಸ್ರ ಬಿಲ್ವಾರ್ಚನೆ ಮೊದಲಾದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಜಲಂಚಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
ಕಾಪು: ಮಜೂರು ಗ್ರಾಮದ ಪಾದೂರು ಜಲಂಚಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ. 21ರಂದು ಮಹಾಶಿವರಾತ್ರಿ ಉತ್ಸವ ನಡೆಯಲಿದೆ. ಭೃಗುಮುನಿ ಕರಾರ್ಚಿತ ಶಿವಲಿಂಗವನ್ನು ಹೊಂದಿರುವ ಸನ್ನಿಧಿಯು ಜಲದ ಅಂಚಿನಲ್ಲಿರುವುದರಿಂದ ಜಲಂಚಾರು ಕ್ಷೇತ್ರ ಎಂದು ಪ್ರಸಿದ್ಧಿಯನ್ನು ಗಳಿಸಿದೆ. ಜಲಂಚಾರು ದೇಗುಲದಲ್ಲಿ ಮಹಾಲಿಂಗೇಶ್ವರ ದೇವರು ಪ್ರಧಾನ ದೇವರಾಗಿದ್ದು, ಮಹಾಗಣಪತಿ, ನಾಗ, ಬ್ರಹ್ಮ, ನಂದಿಗೋಣ, ರಕ್ತೇಶ್ವರಿ, ಅಬ್ಬಗ ದಾರಗ ಸನ್ನಿಧಿಯೂ ಇಲ್ಲಿದೆ.
ಈ ಬಾರಿಯ ವಿಶೇಷ: ಮಹಾಶಿವರಾತ್ರಿಯಂದು ಬೆಳಗ್ಗೆ 9 ರಿಂದ ಶತರುದ್ರಾಭಿಷೇಕ, ಮಧ್ಯಾಹ್ನ ಅನ್ನಸಂತರ್ಪಣೆ ಮತ್ತು ರಾತ್ರಿ ರಂಗಪೂಜೆ ಕಾರ್ಯಕ್ರಮಗಳು ನೆರವೇರಲಿವೆ.

ಮೂಡಬೆಟ್ಟು ಶ್ರೀಮಹಾಲಿಂಗೇಶ್ವರ ದೇವಸ್ಥಾನ
ಕಟಪಾಡಿ: ಕಟಪಾಡಿ ಮೂಡಬೆಟ್ಟು ಶ್ರೀ ಮಹಾಲಿಂಗೇಶ್ವರ ಸುಮಾರು 1200 ವರ್ಷಗಳ ಇತಿಹಾಸವುಳ್ಳ ದೇವಸ್ಥಾನವಾಗಿದೆ. ಇಲ್ಲಿನ ಶಿವಲಿಂಗವು (ಉದ್ಭವ) ಮೂಡಿ ಬಂದ ಕಾರಣದಿಂದ ಮೂಡಬೆಟ್ಟು ಎಂಬುದಾಗಿ ನಾಮಕರಣಗೊಂಡಿದೆ ಎಂಬ ಪ್ರತೀತಿ ಇದೆ. ಜೈನ ಮನೆತನದ ಆಡಳಿತದಲ್ಲಿದ್ದ 6 ಮಾಗಣೆಯ ಒಡೆಯ ಶ್ರೀ ಮಹಾಲಿಂಗೇಶ್ವರ ದೇವರು ಇಲ್ಲಿದ್ದಾರೆ.

ಈ ಬಾರಿಯ ವಿಶೇಷ: ಮಹಾಶಿವರಾತ್ರಿಯಂದು ವಿಶೇಷವಾಗಿ ಆರಾಧನೆ, ಸೇವೆಗಳು ಸಲ್ಲುತ್ತವೆ. ವರ್ಷಂಪ್ರತಿಯಂತೆ ಶಿವರಾತ್ರಿಯ ದಿನಗಳಲ್ಲಿ ದೇವರ ಸನ್ನಿಧಿಯಲ್ಲಿ ಬೆಳಿಗ್ಗೆ ಸೀಯಾಳಾಭಿಷೇಕ, ¸ಳಗ್ಗಿನಿಂದ ಸಂಜೆಯ ತನಕ ಭಜನೆ, ರಾತ್ರಿ ಸಣ್ಣ ರಂಗಪೂಜೆ,

ನಯಂಪಳ್ಳಿ ಶ್ರೀ ಮಡಿಮಲ್ಲಿಕಾರ್ಜುನ ದೇಗುಲ
ಉಡುಪಿ: ನಯಂಪಳ್ಳಿ ಸಂತೆಕಟ್ಟೆ ಶ್ರೀ ಮಡಿಮಲ್ಲಿಕಾರ್ಜುನ ದೇವಸ್ಥಾನ ಪುರಾತನವಾದುದು. ಮಧ್ವಾಚಾರ್ಯರು ಬಾಲಕನಾಗಿದ್ದಾಗ ತಾಯಿ ಜತೆ ನಯಂಪಳ್ಳಿಗೆ ಬಂದಾಗ ಈ ದೇವಸ್ಥಾನಕ್ಕೂ ಬಂದ ಉಲ್ಲೇಖ ಮಧ್ವ ವಿಜಯದಲ್ಲಿದೆ. ಇಲ್ಲಿ ಪುರಾಣಶ್ರವಣ ಮಾಡು ವವರಲ್ಲಿ ವಿಮರ್ಶೆ ಮಾಡಿದ ಬಾಲಕ ತನ್ನ ಸಾಮರ್ಥ್ಯವನ್ನು ಎಳವೆ ಯಲ್ಲೇ ತೋರಿಸಿದ್ದ. ಇಲ್ಲಿ ವರ್ಷಂಪ್ರತಿ ಮಹಾಶಿವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ.

ಈ ಬಾರಿಯ ವಿಶೇಷ: 52ನೇ ವರ್ಷದ ಭಜನಾ ಮಂಗಲೋತ್ಸವವು ಫೆ.14ರಿಂದ ಆರಂಭಗೊಂಡಿದೆ. ಫೆ.22ರ ತನಕ ಅದು ನಡೆಯಲಿದೆ. ಶಿವರಾತ್ರಿ ಸಂದರ್ಭ ಭಕ್ತರಿಂದ ಜಾಗರಣೆ ನಡೆಯಲಿದೆ. ಭಜನೆ ತಂಡಗಳಿಂದ ರಾತ್ರಿ ಪೂರ್ತಿ ಸಂಕೀರ್ತನೆ ನಡೆಯಲಿದೆ.

ಉದ್ಯಾವರ ಶ್ರೀ ಶಂಭುಶೈಲೇಶ್ವರ ಕ್ಷೇತ್ರ
ಕಟಪಾಡಿ: ಶಂಭುಕಲ್ಲು ಮೇಲಿನ ಮಾರ್ಕಂಡೇಯ ಮುನಿಗೊಲಿದ ಶಿವಸಾನ್ನಿಧ್ಯವೇ ಉದ್ಯಾವರ ಶ್ರೀ ಶಂಭುಶೈಲೇಶ್ವರ. ಒಂದೇ ಬಂಡೆಯ ಮೇಲೆ ಕೇವಲ ಇಪ್ಪತ್ತು ಅಡಿ ಅಂತರದಲ್ಲಿ ಎರಡು ದೇವಾಯತನ ಹೊಂದಿದ್ದು, ಪ್ರಸನ್ನ ಸೋಮೇಶ್ವರ ಗಜಪೃಷ್ಠ ಆಕಾರದಲ್ಲಿ ದೇಗುಲದ ಗರ್ಭಗುಡಿ ಇದೆ. ಈ ಶಿವ ದೇವಾಲಯವು 1300 ವರ್ಷಗಳ ಹಿಂದೆ ಆಳುಪರ ಅಧಿಕಾ ರದಲ್ಲಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.ಈ ದೇಗುಲದಲ್ಲಿ ಶಿವರಾತ್ರಿ ಮಹೋತ್ಸವ ವಿಶೇಷವಾಗಿದೆ. ಪಂಚಾಮೃತಾಭಿಷೇಕ, ರುದ್ರ ಪಾರಾಯಣ ಸಹಿತ ರುದ್ರಾಭಿಷೇಕ, ಸಂಜೆ ಬಿಲ್ವಾರ್ಚನೆ, ಅಷ್ಟೋತ್ತರ, ಮಹಾಪೂಜೆ, ರಥೋತ್ಸವವು ನಡೆದು ಪ್ರಸಾದ ವಿತರಣೆ ಅನಂತರ ರಾತ್ರಿ 12 ಗಂಟೆಗೆ ಮಹಾಶಿವರಾತ್ರಿ ಪೂಜೆಯು ಜರಗಲಿದೆ. ಫೆ.22ರಂದು ರುದ್ರಯಾಗ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಉಡುಪಿ ಶ್ರೀ ಅನಂತೇಶ್ವರ ದೇವಸ್ಥಾನ
ಉಡುಪಿ: ಶ್ರೀ ಅನಂತೇಶ್ವರ ಮತ್ತು ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ ಉಡುಪಿಯ ಅತ್ಯಂತ ಪುರಾತನ ದೇವಸ್ಥಾನಗಳು. ಉಡುಪಿಗೆ ರಜತ ಪೀಠಪುರ ಎಂಬ ಹೆಸರೂ, ಉಡುಪಿ ಎಂಬ ಹೆಸರೂ ಬರಲು ಇವೆರಡು ದೇವಸ್ಥಾನಗಳ ಇತಿಹಾಸ ಕಾರಣ. ಪರಶು ರಾಮನಿಂದ ನಿಯುಕ್ತನಾದ ರಾಮಭೋಜ ರಾಜ ಅಶ್ವ ಮೇಧಯಾಗ ಮಾಡುವ ಸಂದರ್ಭ ಯಜ್ಞದ ಪ್ರತಿಪಾದ್ಯನಾಗಿ ಪರಶು ರಾಮನನ್ನು ಬೆಳ್ಳಿ ಪೀಠದಲ್ಲಿ ಕುಳ್ಳಿರಿಸಿದ ಕಾರಣ ರಜತಪೀಠ ಎಂಬ ಹೆಸರು ಬಂತು. ಅನಂತರ ಪರಶುರಾಮ ಲಿಂಗರೂಪದಲ್ಲಿ ನೆಲೆಗೊಂಡ. ಇದು ಅನಂತೇಶ್ವರನೆಂದು ಪ್ರಸಿದ್ಧವಾಯಿತು. ದಕ್ಷನಿಂದ ಕಳಾಹೀನನಾದ ಚಂದ್ರ ಶಿವನನ್ನು ಕುರಿತು ತಪಸ್ಸು ಮಾಡಿದಾಗ ಶಿವ ಪ್ರತ್ಯಕ್ಷವಾದ ದೇಗುಲವೇ ಚಂದ್ರಮೌಳೀಶ್ವರ. ಫೆ.20ರಿಂದ ಫೆ. 27ರ ವರೆಗೆ ಉತ್ಸವ ನಡೆಯಲಿದೆ. ಫೆ. 25ರಂದು ಮಹಾರಥೋತ್ಸವ ನಡೆಯಲಿದೆ. ಪ್ರತಿನಿತ್ಯ ಭಜನೆ, ಧಾರ್ಮಿಕ ಪ್ರವಚನ ನಡೆಯಲಿದೆ.

ಉಚ್ಚಿಲ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನಪಡುಬಿದ್ರಿ: ಇತಿಹಾಸ ಪ್ರಸಿದ್ಧ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಶಿವರಾತ್ರಿಪ್ರಯುಕ್ತ ಬೆಳಿಗ್ಗೆ 9-30ಕ್ಕೆ ಧ್ವಜಾ ರೋಹಣವು ನಡೆದು ಫೆ. 24ರಂದು ವರ್ಷಾವಧಿ ರಥೋತ್ಸವವು ನಡೆಯ ಲಿದೆ. ಸೂರ್ಯೋ ದಯದಿಂದ ಸೂರ್ಯಾ ಸ್ತದವರೆಗೆ ನಿರಂತರ ರುದ್ರಾಭಿಷೇಕ, ರುದ್ರ ಪಾರಾಯಣ, ಆಯನ ಬಲಿಗಳು ನಡೆಯಲಿವೆ. ಫೆ. 22ರಂದು ತಪ್ಪಂಗಾಯಿ ಬಲಿ, ಫೆ. 23ರಂದು ಸಂಜೆ 5ಗಂಟೆಗೆ ಶ್ರೀ ನಾಗದೇವರ ಸನ್ನಿಧಾನದಲ್ಲಿ ಆಶ್ಲೇಷಾ ಬಲಿ, ರಾತ್ರಿ 7ಗಂಟೆಗೆ ಬಯನ ಬಲಿ, ಕಟ್ಟೆಪೂಜೆ, ಫೆ. 24ರಂದು ಬೆಳಗ್ಗೆ 11-30ಕ್ಕೆ ರಥಾರೋಹಣ, ರಾತ್ರಿ 9ಗಂಟೆಗೆ ಶ್ರೀಮನ್ಮಹಾರಥೋತ್ಸವ, ಭೂತ ಬಲಿ, ಕವಾಟ ಬಂಧನ, ಫೆ. 25ರಂದು ಕವಾಟೋದ್ಘಾಟನೆ, ಬಲಿ, ತುಲಾಭಾರಸೇವೆ, ಫೆ. 26ರಂದು ಮಹಾ ಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ, ವರ್ಷಾವಧಿ ರಥೋತ್ಸವದ ಕಾರ್ಯಕ್ರಮದಂಗವಾಗಿ ನಡೆಯಲಿವೆ.

ಚೊಕ್ಕಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
ಕಟಪಾಡಿ: ಚೊಕ್ಕಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಸುಮಾರು 800 ವರ್ಷಗಳ ಹಿಂದಿನ ಇತಿಹಾಸವನ್ನು ಹೊಂದಿದ್ದು, ಭೃಗು ಋಷಿ ಮುನಿಗಳಿಂದ ಸ್ಥಾಪಿಸಲ್ಪಟ್ಟಿದೆ ಎಂಬ ಇತಿಹಾಸವನ್ನು ಹೊಂದಿರುತ್ತದೆ.ಕಟಪಾಡಿ ಬಳಿಯ ಏಣಗುಡ್ಡೆ ಗ್ರಾಮದಲ್ಲಿನ ಈ ದೇಗುಲದಲ್ಲಿ ಮಹಾಶಿವರಾತ್ರಿ ಮಹೋತ್ಸವವು ನಡೆಯಲಿದ್ದು, ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಮಹಾಪೂಜೆ, ಸಂಜೆ ಬಿಲ್ವಾರ್ಚನೆ, ಸೀಯಾಳಾಭಿಷೇಕದ ಬಳಿಕ ವಿಶೇಷ ಮಹಾಪೂಜೆಯು ನಡೆಯುತ್ತದೆ. ಸಂಜೆ ಭಜನೆ, ರಾತ್ರಿ ರಂಗಪೂಜೆಯು ನಡೆಯಲಿದೆ.

ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನ
ಉಡುಪಿ: ಪರ್ಕಳ ಮಹಾ ಲಿಂಗೇಶ್ವರ ಮಹಾ ಗಣಪತಿ ದೇವ ಸ್ಥಾನದಲ್ಲಿ ಶಿವರಾತ್ರಿಯ ಅಂಗವಾಗಿ ಫೆ. 21 ರಿಂದ ಫೆ. 22ರವರೆಗೆ 40ನೇ ವರ್ಷದ ಭಜನ ಮಂಗ ಲೋತ್ಸವ ಕಾರ್ಯಕ್ರಮ ನಡೆಯಲಿದೆ. ಫೆ. 21ರ ಬೆಳಗ್ಗೆ ಸಾಮೂಹಿಕ ಶತರುದ್ರಾಭಿಷೇಕ ಹಾಗೂ 1008 ಕಾಯಿ ಮೂಡುಗಣಪತಿ ಪೂಜೆ, ರಾತ್ರಿ 6 ಗಂಟೆಯಿಂದ ಭಜನೆ, 9.30ಕ್ಕೆ
ರಂಗಪೂಜೆ ನಡೆಯಲಿದೆ. ಫೆ.22 ಬೆಳಗ್ಗೆ 6.30ಕ್ಕೆ ದೀಪ ವಿಸರ್ಜನೆ ಮಂಗಲ, ಓಕುಳಿ ಕಾರ್ಯಕ್ರಮ ನಡೆಯಲಿದೆ.

ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ
ಕಟಪಾಡಿ: ಕಾಶೀ ವಿಶ್ವನಾಥ ನೆಲೆಯೂರಿದ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರವು ಬಿಲ್ಲವರ ದ್ವಿತೀಯ ಕ್ಷೇತ್ರವಾಗಿ ಮುಂಚೂ ಣಿಯಲ್ಲಿದ್ದು, 1952ರಲ್ಲಿ ಶಿವಗಿರಿ ಮಠಾಧೀಶ ಶ್ರೀ ಶಂಕರಾನಂದ ಸ್ವಾಮೀಜಿ ಯವರ ಅಮೃತ ಹಸ್ತ ದಿಂದ ಪ್ರತಿಷ್ಠೆಗೊಂಡ ಉಲ್ಲೇಖವಿದೆ. ಪ್ರತೀ ಸೋಮವಾರ ಇಲ್ಲಿ ಅನ್ನದಾನ ಸೇವೆಯು ನಡೆಯುತ್ತದೆ. ಶಿವರಾತ್ರಿ ಯಂದು ವಿಶೇಷವಾಗಿ ನವಕ ಪ್ರಧಾನ ಕಲಶಾ ಭಿಷೇಕ, ಮಹಾರುದ್ರಾಭಿಷೇಕ, ಸೀಯಾಳಾ ಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಭಜನೆ ಜಾಗರಣೆ ಯೊಂದಿಗೆ ರಾತ್ರಿ 12 ಗಂಟೆಗೆ ಮಹಾಪೂಜೆ ನಡೆಯುತ್ತದೆ.

ಬಾಪುತೋಟ ಶ್ರೀ ಕ್ಷೇತ್ರ ಸರ್ವೇಶ್ವರ ದೇವಸ್ಥಾನ
ಮಲ್ಪೆ: ಬಾಪುತೋಟ ಪಡುಗಡ್ಡೆ ಶ್ರೀ ಸರ್ವೇಶ್ವರ ದೇವಸ್ಥಾನ ಪ್ರಾಚೀನವೂ, ಪ್ರಸಿದ್ಧವೂ ಆಗಿದೆ. ಪೂರ್ವದಿಂದ ಹರಿದು ಬಂದು ಸಮುದ್ರ ಸೇರುವ ನದಿಯ ಮರಳು ದಿಣ್ಣೆಯೆ ಪವಿತ್ರ ಪಡುಗುಡ್ಡೆ. ಇದು ಸರ್ವೇಶ್ವರ, ರಕ್ತೇಶ್ವರಿ ದೇವಿ, ನಾಗ ಬ್ರಹ್ಮ ಮೊದ ಲಾದ ದೈವ ದೇವತೆಗಳ ಆವಾಸ ಸ್ಥಾನವಾಗಿದೆ. ಈ ಪುಣ್ಯಕೇÒತ್ರಕ್ಕೆ ಸುಮಾರು 500 ವರ್ಷಗಳ ಇತಿಹಾಸವಿದ್ದು ದೇವಾ ಲಯವು ಜೈನರ ಕಾಲಕ್ಕೆ ಸೇರಿದ್ದಾಗಿದೆ ಎಂದು ಹೇಳಲಾಗುತ್ತಿದೆ. ಒಂದು ಕಾಲದಲ್ಲಿ ಸಂಪೂರ್ಣ ಭೂಗತವಾಗಿದ್ದ ಈ ದೇವಾಲಯವನ್ನು 1995ರ ಡಿಸೆಂಬರ್‌ 10 ರಂದು ಜೀರ್ಣೋದ್ಧಾರ ಮಾಡಲಾಗಿದೆ.

ಈ ಬಾರಿಯ ವಿಶೇಷ: ಶಿವರಾತ್ರಿಯ ಜತೆಗೆ 24ನೇ ವರ್ಧಂತಿ ಉತ್ಸವವು ಆಚರಿಸಲಾಗುತ್ತಿದೆ. ಮೂರು ಧಾರ್ಮಿಕ ಕಾರ್ಯಕ್ರಮಗಳ‌ಲ್ಲಿ ತುಲಾಭಾರ, ರಂಗಪೂಜೆ, ಬ್ರಹ್ಮಕಲಶಾಭಿಷೇಕ ನಡೆಯಲಿದೆ.

ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
ಮಲ್ಪೆ: ಸಹ್ಯಾದ್ರಿ ಖಂಡದಲ್ಲಿ ಉಲ್ಲೇಖವಿರುವ ಖರ ಮತ್ತು ರಟ್ಟರೆಂಬ ಪರಮ ಶಿವಭಕ್ತರು ತಮ್ಮ ಆರಾಧನೆಗಾಗಿ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವರನ್ನು ಸ್ಥಾಪಿಸಿ ಪೂಜಿ ಸುತ್ತಿದ್ದರೆಂಬ ಪೌರಾಣಿಕ ಹಿನ್ನೆಲೆ ಈ ದೇವಾಲಯಕ್ಕೆ ಇದೆ. ಕಡಲ ತೀರದಿಂದ ಶ್ರೀಕೃಷ್ಣ ವಿಗ್ರಹವನ್ನು ಮಧ್ವಾಚಾರ್ಯರು ಉಡುಪಿಗೆ ತರುವ ವೇಳೆ ಬನ್ನಂಜೆ ದೇವಳದಲ್ಲೊಮ್ಮೆ ಇರಿಸಿ ಪೂಜಿಸಿದ್ದಾರೆ ಎಂದು ಹೇಳಲಾಗುತ್ತದೆ. ಈ ಮಾಹಿತಿಯನ್ನು ಪುಷ್ಟೀಕರಿಸಲು ಇಂದಿಗೂ ಅಷ್ಟಮಠದ ಯತಿಗಳು ಪರ್ಯಾಯ ಪೀಠವನ್ನೇರುವ ಪೂರ್ವದಲ್ಲಿ ಬನ್ನಂಜೆ ದೇವಳಕ್ಕೆ ಆಗಮಿಸಿ ಪ್ರಾರ್ಥಿಸುವ ಸಂಪ್ರದಾಯವಿದೆ. ದೇವಳದ ಶಾಸನವೊಂದರಲ್ಲಿ ಅಳುಪ ಅರಸನೋರ್ವ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮಕಲಶ ಮಾಡಿಸಿದ ಉಲ್ಲೇಖವಿದೆ.

ಈ ಬಾರಿಯ ವಿಶೇಷ: ಫೆ. 21ರಂದು ರಥೋ ತ್ಸವ, ಮಹಾ ರಂಗಪೂಜೆ, ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಉದ್ಯಾವರ ಶ್ರೀಬ್ರಹ್ಮೇಶ್ವರ ಮಹಾಲಿಂಗೇಶ್ವರ
ಕಟಪಾಡಿ: ತುಳುನಾಡನ್ನು ದೀರ್ಘ‌ ಅವಧಿಗೆ ಆಳಿದ ರಾಜವಂಶ ಆಳುಪರು ಈ ದೇವಾಲಯದ ಸ್ಥಾಪಕರು. ಆಳುಪ ಅಚಲಮಹಾದೇವಿಯು ದಾನ ನೀಡಿದ ಮಾಹಿತಿಯ ಶಿಲಾಶಾಸನವೊಂದು ಇಲ್ಲಿದೆ. ಧಾರ್ಮಿಕ ಶ್ರದ್ಧೆ, ಪ್ರಜೆಗಳ ಶ್ರೇಯೋ ಭಿವೃದ್ಧಿಯ ಚಿಂತನೆ, ರೂಢಿಯಲ್ಲಿದ್ದ ಸಾಂಸ್ಕೃ ತಿಕ ಮೌಲ್ಯಗಳ ಪ್ರತೀ ಕವಾಗಿ ಸುಮಾರು 1000-1200 ವರ್ಷಗಳ ಪೂರ್ವದಲ್ಲಿ ಉದ್ಯಾವರ ಕೇದಾರ್‌ ಶ್ರೀ ಬ್ರಹ್ಮೇಶ್ವರ ಮಹಾಲಿಂಗೇಶ್ವರ ಮತ್ತು ಶ್ರೀ ಮಹಾವಿಷ್ಣುಮೂರ್ತಿ ದೇವ ಸ್ಥಾನ ಸ್ಥಾಪಿಸಿದ ಉಲ್ಲೇಖವಿದೆ. ಬ್ರಹ್ಮಸೂತ್ರವಿರುವ ಲಿಂಗ ಹೊಂದಿರುವ-ಇತಿಹಾಸ ಪ್ರಸಿದ್ಧವಾದ ದೇಗುಲ ಇದಾಗಿದೆ.

ಈ ಬಾರಿಯ ವಿಶೇಷ: ಆದ್ಯ ಗಣಯಾಗ, ಪಂಚಾ ಮೃತ ಅಭಿಷೇಕ, 108 ಸೀಯಾಳ ಅಭಿಷೇಕ, ದೃಢಕಲಶಾ ಭಿಷೇಕ, 1008 ಬಿಲ್ವಾರ್ಚನೆ, ಮಹಾಪೂಜೆ, ದೀಪಾರಾಧನೆ, ರಂಗಪೂಜೆ, ಕಲೊ³àಕ್ತ ಪೂಜೆ, ರಾತ್ರಿಪೂಜೆ ಜರಗಲಿದೆ.

ಎಲ್ಲೂರು ಮಹತೋಭಾರ ವಿಶ್ವೇಶ್ವರ ದೇವಸ್ಥಾನ
ಕಾಪು: ಕುಂದಕುಲದ ಅರಸನೊಬ್ಬನ ಭಕ್ತಿಗೊಲಿದು ಕಾಶಿ ಯಿಂದ ಎಲ್ಲೂರಿಗೆ ಬಂದು ಸ್ವಯಂಭೂವಾಗಿ ವಿಶ್ವನಾಥ ದೇವರು ಮಣ್ಣಿನಲ್ಲಿ ಸುಪ್ತವಾಗಿದ್ದರು. ಮಣ್ಣಿನ ಮಗಳು ಕೊರ ಪಳುವಿಗೆ ಪ್ರಥಮ ಸಂದರ್ಶನವಿತ್ತ ದೇವರು ಕಾಶಿಯಿಂದ ಬಂದ “ಉಲ್ಲಾಯ’ನೆಂದೇ ಪ್ರಕಟಗೊಂಡವರು ಎಂಬುದು ಎಲ್ಲೂರು ಶ್ರೀ ವಿಶ್ವೇಶ್ವರ ದೇಗು ಲದ ಹಿರಿಮೆ. ವಿಶ್ವೇಶ್ವರ ದೇವ ಸ್ಥಾನವು ಸುಮಾರು ಒಂದು ಸಾವಿರ ವರ್ಷದ ಇತಿಹಾಸವನ್ನು ಹೊಂದಿದೆ. ಕರ್ನಲ್‌ ಕಾಲಸ್‌ ಮೆಕೆಂಜಿ ಸಂಗ್ರಹಿ ಸಿದ ಕೈಫಿಯತ್ತುಗಳಲ್ಲಿ ಎಲ್ಲೂರಿನ ಇತಿಹಾಸವೂ ಒಂದಾಗಿದೆ. ಶಿವರಾತ್ರಿಯನ್ನು ಇಲ್ಲಿ ಉತ್ಸವವಾಗಿ ಆಚರಿಸಲಾಗುತ್ತದೆ.

ಈ ಬಾರಿಯ ವಿಶೇಷ: ಬೆಳಗ್ಗೆ 9ರಿಂದ ರುದ್ರ ಪಾರಾಯಣ, ರುದ್ರಾಭಿಷೇಕ, 11ಕ್ಕೆ ಮಹಾಪೂಜೆ, ರಾತ್ರಿ 8.30ಕ್ಕೆ ಮಹಾರಂಗಪೂಜೆ, 9.30ಕ್ಕೆ ಉತ್ಸವ ಬಲಿ, ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಭಜನೆ ನಡೆಯಲಿದೆ.

ಕಲ್ಯ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ
ಕಾಪು: 1,500 ವರ್ಷಗಳಷ್ಟು ಪುರಾತನವಾದ ಬ್ರಹ್ಮಲಿಂಗೇಶ್ವರ ದೇವಸ್ಥಾನವು ಪ್ರಕೃತಿಯ ಮಧ್ಯದಲ್ಲಿ ಉದ್ಭವ ಲಿಂಗ – ಪ್ರತಿಷ್ಠಾ ಲಿಂಗದ ಸನ್ನಿಧಿಯನ್ನು ಹೊಂದಿದೆ. ದೇವಸ್ಥಾನವು ವೃತ್ತ, ಚೌಕ, ಆಯತ, ಗಜಪೃಷ್ಠ ಮತ್ತು ಉದ್ದ ಆಯತ ಹೀಗೆ ಅಪರೂಪವಾದ ಐದು ವಿಧದ ವಾಸ್ತು ಹೊಂದಿದೆ. ಬ್ರಹ್ಮಲಿಂಗೇಶ್ವರ, ನಾಗ, ರಕ್ತೇಶ್ವರಿ, ಚಾಮುಂಡೇಶ್ವರಿ, ನಂದಿ ಗೋಣ, ಕ್ಷೇತ್ರಪಾಲ ಹಾಗೂ ನವಗ್ರಹ ವನ, ನವಗ್ರಹ ಕುಂಡ ಸಹಿತವಾಗಿ ನವಗ್ರಹ ದೇವರ ಸನ್ನಿಧಿ ಇಲ್ಲಿದೆ.

ಈ ಬಾರಿಯ ವಿಶೇಷ: ಬೆಳಗ್ಗೆ 9ರಿಂದ ನವಕ ಕಲಶಾಭಿಷೇಕ, ಏಕಾದಶರುದ್ರಾಭಿಷೇಕ, ಭಜನ ಕಾರ್ಯಕ್ರಮ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಸೀಯಾಳಾಭಿಷೇಕ, ಸಾರ್ವಜನಿಕ ಬಿಲ್ವ ಪತ್ರಾರ್ಚನೆ, ಮಹಾರಂಗಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ನಗರದ ವಿವಿಧೆಡೆ ಶಿವರಾತ್ರಿ ಆಚರಣೆ
ಉಡುಪಿ: ಇಂದು ಮಹಾ ಶಿವರಾತ್ರಿ ಪ್ರಯುಕ್ತ ನಗರದ ವಿವಿಧ ದೇವಸ್ಥಾನಗಳಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಆಚರಣೆಗಳು ನಡೆಯಲಿವೆ.

ಸರಳಬೆಟ್ಟು ಉಮಾಮಹೇಶ್ವರ ದೇವಸ್ಥಾನ
ಉಡುಪಿ: ಸರಳಬೆಟ್ಟು ಉಮಾಮಹೇಶ್ವರ ದೇವಸ್ಥಾನ ಶಿವರಾತ್ರಿ ಮಹೋತ್ಸವ ಫೆ. 21 ರಂದು ನಡೆಯಲಿದೆ. ಬೆಳಗ್ಗೆ 6 ರಿಂದ ಮಧ್ಯಾಹ್ನ 2ಗಂಟೆವರೆಗೆ ಸಂಜೆ 4 ರಿಂದ ರಾತ್ರಿ 10ಗಂಟೆವರೆಗೆ ಭಕ್ತರ ಸೇವೆಗಳಾದ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10 ಗಂಟೆಯ ಬಳಿಕ ಸಹಸ್ರ ಬಿಲ್ವಾರ್ಚನೆ ರಂಗ ಪೂಜೆ ನಡೆಯಲಿದೆ. ಭಕ್ತ ಮಂಡಳಿಯಿಂದ ಸಂಜೆ ಭಜನೆ, ರಾತ್ರಿ ಹನುಮಗಿರಿ ಮೇಳದ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.

ಪೆರ್ಡೂರು ಕಾನದಪಾಡಿ
ಪೆರ್ಡೂರು:ಪೆರ್ಡೂರು ಕಾನದಪಾಡಿಯಲ್ಲಿ ಶಿವರಾತ್ರಿ ಮಹೋತ್ಸವದ ಅಂಗವಾಗಿ ಕ್ಷೇತ್ರದಲ್ಲಿ ಶಿವಂ ಫೌಂಡೇಶನ್‌ ಆಶ್ರಯದಲ್ಲಿ ಶಿವರಾತ್ರಿ ಭಜನೋತ್ಸವ ಫೆ.21ರಂದು ಬೆಳಿಗ್ಗೆ 9ರಿಂದ ರಾತ್ರಿ 12ರತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಅನಂತಪದ್ಮನಾಭ ದೇವಸ್ಥಾನ
ಪೆರ್ಡೂರು: ಇಲ್ಲಿನ ಅನಂತಪದ್ಮನಾಭ ದೇವಸ್ಥಾನದಲ್ಲಿ ಫೆ.21 ರಂದು ಶಿವರಾತ್ರಿ ಮಹೋತ್ಸವದ ಅಂಗವಾಗಿ ರಾತ್ರಿ ದೇವರಿಗೆ ವಿಶೇಷ ಪೂಜೆ,ಕೆರೆದೀಪ ಹಾಗೂ ರಥೋತ್ಸವ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಬೈರಂಜೆ : ಭವಾನಿಶಂಕರ ದೇವಸ್ಥಾನ
ಹಿರಿಯಡಕ: ಬೈರಂಜೆ ಭವಾನಿಶಂಕರ ದೇವಸ್ಥಾನದಲ್ಲಿ ಫೆ.21 ರಂದು ಶಿವರಾತ್ರಿ ಮಹೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಪೂಜೆ, ರುದ್ರಾಭಿಷೇಕ, ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಹಿರಿಯಡಕ: ವೀರಭದ್ರ ದೇವಸ್ಥಾನ ಹಿರಿಯಡಕ: ಇತಿಹಾಸ ಪ್ರಸಿದ್ಧ ಹಿರಿಯಡಕ ವೀರಭದ್ರ ದೇವಸ್ಥಾನದಲ್ಲಿ ಶಿವರಾತ್ರಿ ಮಹೋ ತ್ಸವದ ಅಂಗವಾಗಿ ದೇವರಿಗೆ ವಿಶೇಷ ಪೂಜೆ,ರುದ್ರಾಭಿಷೇಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ
ಉಡುಪಿ: ಮಣಿಪಾಲ ಹುಡ್ಕೋ ಕಾಲನಿಯ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಫೆ.21ರಂದು ಮಹಾಶಿವರಾತ್ರಿ ಆಚರಣೆ ನಡೆಯಲಿದೆ. ರಾತ್ರಿ 7.30ರಿಂದ 12.30ರ ತನಕ ದೇವಸ್ಥಾನದ ಭಜನ ಮಂಡಳಿ ಬಳಗದವರಿಂದ ಭಜನೆ, 12.30ಕ್ಕೆ ಮಹಾಪೂಜೆ, ಅನಂತರ ಪ್ರಸಾದ ವಿತರಣೆ ಇರುತ್ತದೆ.

ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
ಉಡುಪಿ: ಎಸ್‌ಪಿವೈಎಸ್‌ಎಸ್‌ ಕರ್ನಾಟಕ ನೇತ್ರಾವತಿ ವಲಯ ಉಡುಪಿ ಇದರ ವತಿಯಿಂದ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಸಾಮೂಹಿಕ ಶಿವ ನಮಸ್ಕಾರ ಫೆ. 23 ರಂದು ಬೆಳಗ್ಗೆ 5ರಿಂದ 6.30ರ ವರೆಗೆ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನ
ಉಡುಪಿ: ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿರುವ ಶ್ರೀ ಉಮಾಮಹೇಶ್ವರ ಸನ್ನಿಧಿಯಲ್ಲಿ ಮಹಾಶಿವರಾತ್ರಿ ಮಹೋತ್ಸವ ನಡೆಯಲಿದೆ. ಬೆಳಗ್ಗೆ 8.30 ರಿಂದ ದೇವರಿಗೆ ಶತರುದ್ರಾಭಿಷೇಕ ಸಹಿತ ಮಹಾಪೂಜೆ, ಸಂಜೆ 6 ರಿಂದ ಭಜನೆ, 7.30 ಕ್ಕೆ ರಂಗಪೂಜೆ ಪ್ರಸಾದ ವಿತರಣೆ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ಶಾಸಕ ಕೆ. ರಘುಪತಿ ಭಟ್‌ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

accident

Udupi: ಬೈಕ್‌ ಢಿಕ್ಕಿ; ವ್ಯಕ್ತಿಗೆ ಗಾಯ; ಪ್ರಕರಣ ದಾಖಲು

2

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

complaint

Udupi: ಕಾರ್ಮಿಕನ ಬೈಕ್‌ ಕಳ್ಳತನ; ಪ್ರಕರಣ ದಾಖಲು

sand

Karkala: ಪರವಾನಿಗೆ ಇಲ್ಲದೆ ಮರಳು ಲೂಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.