8 ವರ್ಷಗಳ ಪರಿಶ್ರಮದ “ಮಹಾ’ಭಾರತ
ನ. 7ರಂದು ಉಡುಪಿಯಲ್ಲಿ ಲೋಕಾರ್ಪಣೆ
Team Udayavani, Nov 5, 2019, 5:38 AM IST
ಉಡುಪಿ: ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿಯವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸಮಗ್ರ ಮಹಾಭಾರತ ಕನ್ನಡ ಮತ್ತು ಸಂಸ್ಕೃತ ಮುದ್ರಿತ ಹಾಗೂ ಇ- ಬುಕ್ ಆವೃತ್ತಿ ಲೋಕಾರ್ಪಣೆಗೆ ಕ್ಷಣಗಣನೆ ಆರಂಭ ಗೊಂಡಿದೆ. ನ. 6ರಂದು ವ್ಯಾಸ-ದಾಸ- ವಿಜಯ ಉತ್ಸವ ಉದ್ಘಾಟನೆ ಗೊಳ್ಳಲಿದ್ದು, ನ. 7ರಂದು ಸಂಪುಟಗಳು ಬಿಡುಗಡೆ ಗೊಳ್ಳಲಿವೆ.
ಪ್ರಾಚೀನ ಗ್ರಂಥಗಳ ಲ್ಲೊಂದಾದ ವೇದವ್ಯಾಸ ವಿರಚಿತ ಮಹಾಭಾರತದ ಶುದ್ಧ ಪ್ರತಿಯನ್ನು ಶ್ರಾವಕರಿಗೆ ನೀಡಬೇಕೆನ್ನುವುದು ಪಲಿಮಾರು ಮಠದ ಪೂರ್ವಯತಿ ಶ್ರೀ ವಿದ್ಯಾಮಾನ್ಯತೀರ್ಥರ ಕನಸಾ ಗಿತ್ತು. ಅದೀಗ ನನಸಾಗುತ್ತಿದೆ. 8 ವರ್ಷಗಳಿಂದ ಬೆ.ನಾ. ವಿಜಯೀಂದ್ರಾಚಾರ್ಯ ನೇತೃತ್ವದ 40 ವಿದ್ವಾಂಸರ ತಂಡ ಸಂಶೋಧನೆಯಲ್ಲಿ ನಿರತರಾಗಿದ್ದಾರೆ.
ಆ್ಯಂಡ್ರಾಯ್ಡ ಆ್ಯಪ್
ಪಲಿಮಾರು ಮಠದ ತಣ್ತೀಸಂಶೋಧನ ಸಂಸತ್ ಮಹಾಭಾರತದ ಕನ್ನಡ 37 ಮತ್ತು ಸಂಸ್ಕೃತದ 24 ಸಂಪುಟಗಳನ್ನು ಇ-ಬುಕ್ ಮತ್ತು ಆ್ಯಂಡ್ರಾಯ್ಡ ಆ್ಯಪ್ ಆಗಿ ಪ್ರಕಟಪಡಿಸುತ್ತಿದೆ. ಈ ಆ್ಯಪನ್ನು ಗೂಗಲ್ ಪ್ಲೇಸ್ಟೋರಿನಲ್ಲಿ ಪಡೆಯ ಬಹುದಾಗಿದೆ. ಆ್ಯಪ್ ಅನ್ನು ಸಂಸ್ಕೃತ ಪಾಠಶಾಲೆಯ ಡಾ| ಕಡಂದಲೆ ಗಣಪತಿ ಭಟ್ ತಂಡ ಅಭಿವೃದ್ಧಿಪಡಿಸಿದೆ.
250 ಪ್ರಾಚೀನ ತಾಳೆ ಪತ್ರ ಬಳಕೆ
ಮಧ್ವಾಚಾರ್ಯರ “ತಾತ್ಪರ್ಯ ನಿರ್ಣಯ’ ಮತ್ತು ವಾದಿರಾಜರ “ಲಕ್ಷಾಲಂಕಾರ’ ಗಳನ್ನು ಸಂಯೋಜಿಸಿಕೊಂಡು 40 ವಿದ್ವಾಂಸರ ಸಹಕಾರದಿಂದ ಮಹಾ ಭಾರತದ ಶುದ್ಧಪ್ರತಿ ಸಿದ್ಧಪಡಿಸಲಾಗಿದೆ. ಪೂರಕವಾಗಿ ಅಷ್ಟಮಠ ಮತ್ತು ಸುಬ್ರಹ್ಮಣ್ಯ ಮಠ ಸೇರಿದಂತೆ ವಿವಿಧೆಡೆಗಳಿಂದ 450ವರ್ಷಕ್ಕೂ ಹಿಂದಿನ 250ಕ್ಕೂ ಹೆಚ್ಚಿನ ಪ್ರಾಚೀನ ತಾಡಪತ್ರಗಳನ್ನು ಕಲೆಹಾಕಿ ಸಂಶೋಧನೆ ನಡೆಸಲಾಗಿದೆ.
ಮೊಘಲರ ಆಕ್ರಮಣ ದಿಂದಾಗಿ ಉ.ಭಾರತದಲ್ಲಿ ರಾಮಾಯಣ, ಮಹಾ ಭಾರತದ ಮೂಲಪ್ರತಿಗಳು ನಾಶವಾಗಿವೆ. ಆದರೆ ದ. ಭಾರತದ ಮಠಗಳಲ್ಲಿ ತಾಳೆಗರಿಯ ಮೂಲ ಪ್ರತಿಗಳು ಲಭ್ಯವಿವೆ. ಅಷ್ಟ ಮಠಗಳು ಮತ್ತು ಸುಬ್ರಹ್ಮಣ್ಯ ಮಠದ ಸಂಗ್ರಹದಲ್ಲಿದ್ದ ತುಳು ಲಿಪಿಯ ತಾಳೆಗರಿಗಳು ಮತ್ತು 40 ಮಂದಿ ವಿದ್ವಾಂಸರ ಸಹಕಾರದಿಂದ ಮಹಾ ಭಾರತದ ಶುದ್ಧಪಾಠ ಸಿದ್ಧಪಡಿಸಲಾಗಿದ್ದು, ವಿದ್ವಾಂಸರು ಸ್ವೀಕರಿಸುತ್ತಾರೆ ಎಂಬ ವಿಶ್ವಾಸವಿದೆ.
-ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ
ಪರ್ಯಾಯ ಶ್ರೀ ಪಲಿಮಾರು ಮಠ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.