ಮಹಾಮಳೆ: ಉಡುಪಿ, ಕಾಪು, ಬ್ರಹ್ಮಾವರದಲ್ಲಿ ಲಕ್ಷಾಂತರ ರೂ. ಆಸ್ತಿ ನಷ್ಟ
Team Udayavani, Aug 8, 2019, 5:35 AM IST
ಕೊಚ್ಚಿ ಹೋಗುತ್ತಿರುವ ಅಂಬಲಪಾಡಿ ಸಮೀಪದ ಸರ್ವಿಸ್ ರಸ್ತೆ.
ಉಡುಪಿ: ಕಳೆದ 2 ದಿನಗಳಿಂದ ಎಡೆ ಬಿಡದೆ ಸುರಿಯುತ್ತಿರುವ ಬಿರುಗಾಳಿ ಸಹಿತ ಮಳೆ ಯಿಂದ ಉಡುಪಿ, ಬ್ರಹ್ಮಾವರ ಹಾಗೂ ಕಾಪುವಿನಲ್ಲಿ ಒಟ್ಟು 78 ಮನೆಗಳಿಗೆ ಹಾನಿಯಾಗಿದೆ. ಸುಮಾರು 36 ಲ.ರೂ. ಆಸ್ತಿ ನಷ್ಟವಾಗಿದೆ.
ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನಗರದ ತಗ್ಗು ಪ್ರದೇಶದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಸೀತಾ ಹಾಗೂ ಸುವರ್ಣ ನದಿಗಳಲ್ಲಿ ನೀರಿನಮಟ್ಟ ಏರಿಕೆಯಾಗಿದೆ. ನೀಲಾವರ, ಮಟಪಾಡಿ, ಉಪ್ಪೂರು, ಸೇರಿದಂತೆ ಕೆಲ ಗ್ರಾಮಗಳು ಜಲಾವೃತವಾಗಿವೆ.
ನೆರೆ ಆವೃತವಾದ ಸ್ಥಳಗಳಿಗೆ ಜಿಲ್ಲಾಡಳಿತದ ವತಿಯಿಂದ ಸ್ಥಳೀಯರಿಗೆ ರಸ್ತೆ ದಾಟಲು ಬೋಟ್ ವ್ಯವಸ್ಥೆ ಮಾಡಲಾಗಿದೆ. ಸ್ಥಳದಲ್ಲಿ ಅಗ್ನಿಶಾಮಕ ದಳ ಹಾಗೂ ನುರಿತ ಈಜುಗಾರರನ್ನು ನಿಯೋಜಿಸಲಾಗಿದೆ. ಮಳೆಯ ನೀರಿನಲ್ಲಿ ತಾಲೂಕಿನ ನೂರಾರು ಎಕರೆ ಭತ್ತದ ಗದ್ದೆ ಮಳುಗಡೆಯಾಗಿವೆ. ಉಡುಪಿಯಲ್ಲಿ 97.4, ಕಾರ್ಕಳದಲ್ಲಿ 112. ಮಿ.ಮೀ. ಮಳೆಯಾಗಿದೆ. ಆ. 7ರ ಬೆಳಗ್ಗೆಯಿಂದ ಮಳೆಯ ಪ್ರಮಾಣ ಕಡಿಮೆಯಾಗಿದೆ.
ಸರ್ವಿಸ್ ರಸ್ತೆ ಕೊಚ್ಚಿ ಹೋಯ್ತು !
ಮಳೆಯಿಂದಾಗಿ ಹೆ.ರಾ. 66ರ ಅಂಬಲಪಾಡಿಯ ಅಭಿನಂದನ್ ಪೆಟ್ರೋಲ್ ಬಂಕ್ ಸಮೀಪದ ಸರ್ವಿಸ್ ರಸ್ತೆಯು ಮಳೆಯ ನೀರಿನಿಂದ ಕೊಚ್ಚಿ ಹೋಗುತ್ತಿದೆ.
ಶಾಲೆಯ ಕಂಪ್ಯೂಟರ್ ಹಾನಿ
ಬಿರುಗಾಳಿ ಮಳೆಯಿಂದಾಗಿ ಅಜ್ಜರಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯ ಕಂಪ್ಯೂಟರ್ ಲ್ಯಾಬ್ ಕೊಠಡಿಯ ಮೇಲ್ಛಾವಣಿಗೆ ಮರ ಉರುಳಿ ಬಿದ್ದು, ಹಲವು ಕಂಪ್ಯೂಟರ್ ಗಳು ಹಾಳಾಗಿ ಸಾವಿರಾರು ರೂ. ನಷ್ಟವಾಗಿದೆ.
ಮನೆ ಹಾನಿ
ಗಾಳಿ ಮಳೆಗೆ ಬ್ರಹ್ಮಾವರ ವ್ಯಾಪ್ತಿಯಲ್ಲಿ ಒಟ್ಟು 17 ಮನೆಗಳಿಗೆ ಹಾನಿಯಾಗಿದೆ. ಸುಮಾರು 4.94 ಲ.ರೂ. ನಷ್ಟವಾಗಿದೆ. ಕಾಪುವಿನಲ್ಲಿ ಒಟ್ಟು 15 ಮನೆಗಳು ಹಾನಿಯಾಗಿವೆ.ಸುಮಾರು 9.88 ಲ.ರೂ. ನಷ್ಟವಾಗಿದೆ. ಉಡುಪಿಯಲ್ಲಿ ಒಟ್ಟು 46 ಮನೆಗಳಿಗೆ ಹಾನಿಯಾಗಿದ್ದು, ಸುಮಾರು 21.30 ಲ.ರೂ. ನಷ್ಟವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lokayukta police: ಮುಡಾ ಮಾಜಿ ಆಯುಕ್ತ ನಟೇಶ್ ವಿಚಾರಣೆ
ಯುದ್ಧ ಸನ್ನದ್ಧರಾಗಿ: ನಾಗರಿಕರಿಗೆ ಸ್ವೀಡನ್, ಫಿನ್ ಲ್ಯಾಂಡ್ ಎಚ್ಚರಿಕೆ!
BIMS: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು ಆರೋಪ: ಕುಟುಂಬಿಕರ ಪ್ರತಿಭಟನೆ
BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ
Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್ ಸ್ಥಾಪನೆ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.