ಮರವಂತೆ: ವರಾಹ ಮಾರಸ್ವಾಮಿ ಜಾತ್ರೆ ಸಂಪನ್ನ
Team Udayavani, Jul 24, 2017, 6:15 AM IST
ಮರವಂತೆ: ಪುರಾಣ ಪ್ರಸಿದ್ಧ ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದದಲ್ಲಿ ಕರ್ಕಾಟಕ ಅಮಾವಾಸ್ಯೆಯ ಜಾತ್ರಾ ಮಹೋತ್ಸವವು ಸಕಲ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ ನೆರವೇರಿತು.
ವಿವಿಧ ಭಾಗಗಳಿಂದ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ನಸುಕಿನಲ್ಲಿಯೇ ದೇಗುಲಕ್ಕೆ ಬಂದು ಸಮುದ್ರ ಹಾಗೂ ಸೌರ್ಪಣಿಕಾ ನದಿಯಲ್ಲಿ ಸ್ನಾನ ಮಾಡಿ ಶ್ರೀ ದೇವರ ದರ್ಶನ ಪಡೆದು ಹರಕೆಗಳನ್ನು ಸಲ್ಲಿಸಿದರು.
ಭೂಮಾತೆಯನ್ನು ದುಷ್ಟ ರಕ್ಕಸರಿಂದ ರಕ್ಷಿಸಿದ ಶ್ರೀ ವರಾಹ ಸ್ವಾಮಿಯು ಲೋಕಕ್ಕೆ ಕಲ್ಯಾಣ ವನ್ನು ಉಂಟುಮಾಡಿ ಸಕಲ ಜೀವರಾಶಿಗಳನ್ನು ಕಾಯುವವನು. ಆದರಿಂದ ಸಂಪ್ರದಾಯದಂತೆ ವಿವಾಹಿತ ನವಜೋಡಿಗಳು ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆಗಳನ್ನು ಸಲ್ಲಿಸಿದ್ದರು.
ಶ್ರೀ ದೇವರು ಪ್ರಕೃತಿ ವಿಕೋಪದಿಂದ ಹಾಗೂ ಕಷ್ಟಕಾರ್ಪಣಗಳಿಂದ ರಕ್ಷಿಸಿ ಪೊರೆಯುವ ಮಹಿಮಾ ನ್ವಿತನೂ, ಅಭಯದಾತನೂ ಆಗಿ ಭಕ್ತ ಕೋಟಿ ಜನರನ್ನು ಕಾಯುತ್ತಿರುವ ದೇವರಲ್ಲಿ ಕರಾವಳಿಯ ಭಾಗದ ಮೀನುಗಾರರು ಮೀನುಗಾರಿಕೆಯಲ್ಲಿ ಸಮೃದ್ಧಿಯನ್ನು ಕರುಣಿಸು ಎಂದು ಪ್ರಾರ್ಥನೆಗೈದರು.
ಜಟಿ ಜಟಿ ಮಳೆ
ಮುಂಜಾನೆಯಿಂದ ಮಳೆ ಮತ್ತು ಬಿಸಿಲಿನ ನಡುವೆ ಸ್ಪರ್ಧೆ ಏರ್ಪಟ್ಟಂತೆ ಕಂಡುಬಂತು. ಸ್ವಲ್ಪ ಸಮಯ ಆಗಾಗ ಉರಿಬಿಸಿಲು ಇದ್ದರೆ ನಡುವೆ ಒಂದಿಷ್ಟು ಹೊತ್ತು ತಂಗಾಳಿಯ ಜತೆ ಜಟಿಜಟಿಯಾಗಿ ಸುರಿಯುತ್ತಿರುವ ಮಳೆಯಿಂದ ಭಕ್ತರಿಗೆ ತಣ್ಣನೆಯ ಅನುಭವ ಒದಗಿಸಿತ್ತು.
ಬಿಗಿ ಬದ್ರತೆ
ರಾ.ಹೆ.ಯಲ್ಲಿ ದೇವಸ್ಥಾನದ ಜಾತ್ರಾ ಸ್ಥಳವಾಗಿರುವುದರಿಂದ ಟ್ರಾಫಿಕ್ ವ್ಯವಸ್ಥೆ ಸೇರಿದಂತೆ, ಸಮುದ್ರ ತೀರಗಳಲ್ಲಿ ಹಾಗೂ ನದಿ ತೀರಗಳಲ್ಲಿ ಜನತೆಯ ಸುರಕ್ಷೆಯ ದೃಷ್ಟಿಯಿಂದ ಅನೇಕ ಪೊಲೀಸ್ ಸಿಬಂದಿಯನ್ನು ನಿಯೋಜಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
State Government Programme: ರೈತರಿಂದ ದೂರ ಸರಿದ ಕೃಷಿ ಯಂತ್ರಧಾರೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ
MUST WATCH
ಹೊಸ ಸೇರ್ಪಡೆ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.