98 ಲ.ರೂ. ವೆಚ್ಚದ ಕಾಮಗಾರಿಗೆ ಒಂದೂವರೆ ವರ್ಷ ಆಯುಷ್ಯ!

ಮಹಾತ್ಮಾ ಗಾಂಧಿ ಬಯಲು ರಂಗಮಂದಿರ‌ ಈಗ ಪ್ರಾಣಿಗಳ ಆವಾಸ ಸ್ಥಳ

Team Udayavani, Jan 11, 2021, 7:00 AM IST

98 ಲ.ರೂ. ವೆಚ್ಚದ ಕಾಮಗಾರಿಗೆ ಒಂದೂವರೆ ವರ್ಷ ಆಯುಷ್ಯ!

ಉಡುಪಿ: ನಗರದ ಬೀಡಿನಗುಡ್ಡೆಯಲ್ಲಿ ಲಕ್ಷಾಂತರ ರೂ.  ವೆಚ್ಚದಲ್ಲಿ ನಿರ್ಮಿಸಲಾದ ಮಹಾತ್ಮಾ ಗಾಂಧಿ ಬಯಲು ರಂಗಮಂದಿರ‌ ಇದೀಗ ಪ್ರಾಣಿಗಳ ಆವಾಸ ಸ್ಥಳವಾಗಿ ಪರಿವರ್ತನೆಗೊಂಡಿದೆ. ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಬೀಡಿನಗುಡ್ಡೆಯಲ್ಲಿ  ಇದನ್ನು 2016ರ ಜ.26ರಂದು  ಅಂದಿನ ಉಸ್ತುವಾರಿ ಸಚಿವರಾಗಿದ್ದ ವಿನಯಕುಮಾರ್‌ ಸೊರಕೆ ಉದ್ಘಾಟಿಸಿ ದ್ದರು. ಆ ಬಳಿಕ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಸೇರಿದಂತೆ ಇತರ  ಕೆಲವು ಸರಕಾರಿ ಕಾರ್ಯಕ್ರಮಗಳು ಇದೇ ವೇದಿಕೆಯಲ್ಲಿ ನಡೆದಿತ್ತು. ವೇದಿಕೆಯ ಬಾಡಿಗೆ ಶುಲ್ಕವನ್ನು  ಅಂದಿನ ಡಿಸಿ ಡಾ| ವಿಶಾಲ್‌ ಅವರಿಗೆ ಮನವಿ ನೀಡಿದ ಅನಂತರ  ಇದರ ಶುಲ್ಕವನ್ನು ಪರಿಷ್ಕೃತಗೊಳಿಸಿದ್ದರು.

ಒಂದೂವರೆ ವರ್ಷದಲ್ಲಿ ಕುಸಿತ :

ಇದು  ನಿರ್ಮಾಣಗೊಂಡ  ಒಂದೂವರೆ  ವರ್ಷದೊಳಗೆ ಇದರ ಮುಂಭಾಗದ  ಅವರಣ ಗೋಡೆ ಕುಸಿದಿದ್ದು   ಇದುವರೆಗೂ ದುರಸ್ತಿ ಕಂಡಿಲ್ಲ. ಕೋವಿಡ್‌- 19ರ ಸಂದರ್ಭ ಇಲ್ಲಿ ಸಂತೆ  ನಡೆದಾಗ  ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಇದರ ಆವರಣ ಗೋಡೆ ಮತ್ತೆ ಕುಸಿದಿತ್ತು. ಪ್ರಸ್ತುತ ಅಡಿಕೆಯ ಸಲಿಕೆ, ಬಿದಿರು ತುಂಡುಗಳನ್ನಿಟ್ಟು ತಡೆಬೇಲಿ ಹಾಕಲಾಗಿದೆ.

98 ಲ.ರೂ. ವೆಚ್ಚದಲ್ಲಿ ನಿರ್ಮಾಣ :

ನಗರಸಭೆಯ ಸುಮಾರು 3.5 ಎಕ್ರೆ  ಪ್ರದೇಶದಲ್ಲಿ ವಿಶೇಷ ಅನುದಾನದಿಂದ 98 ಲ.ರೂ. ವೆಚ್ಚದಲ್ಲಿ  ಅವರಣ ಗೋಡೆ  ನಿರ್ಮಿಸಿ ವಿವಿಧ ಕಾರ್ಯಕ್ರಮಗಳ ಬಳಕೆಗೆ  ಇದನ್ನು ನೀಡಲಾಗಿತ್ತು. ಕೋವಿಡ್‌-19ರ ಬಳಿಕ ಇಲ್ಲಿ ಕಾರ್ಯಕ್ರಮನಡೆದಿರುವುದು ಕಡಿಮೆ. ಈ ರಂಗಮಂದಿರ ನಗರಸಭೆ ವ್ಯಾಪ್ತಿಯ ಲ್ಲಿದೆ.  ಜಿಲ್ಲಾಧಿಕಾರಿ ಇದರ ಉಸ್ತುವಾರಿ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಯಾವುದೇ ಕ್ರಮವಿಲ್ಲ :

ಇಷ್ಟು  ವೆಚ್ಚದ ಕಾಮಗಾರಿ ಒಂದೇ  ವರ್ಷದಲ್ಲಿ ಕುಸಿದಿದ್ದರೂ ಗುತ್ತಿಗೆ ದಾರರ ವಿರುದ್ಧ  ಯಾವುದೇ  ಕ್ರಮ ಕೈಗೊಂಡಿಲ್ಲ. ಮಳೆಯಿಂದ ಹಾಳಾಗಿವೆಎನ್ನುವ ಸಬೂಬು ನೀಡಲಾಗಿದೆ. ಇದೀಗ ಅವರಣ ಗೋಡೆ ದುರಸ್ತಿಗೆ 56,000  ರೂ. ಮೊತ್ತದ ಅಂದಾಜುಪಟ್ಟಿ ತಯಾರಿಸಲಾಗಿದ್ದು  ಇದರ ಕಾಮಗಾರಿಗೆ ಆಡಳಿತ ಮಂಜೂರಾತಿ  ಕೋರಿ ಡಿ. 22ರಂದು ನಡೆದ ಸಾಮಾನ್ಯ ಸಭೆಯಲ್ಲಿ ಮಂಡಿಸಿದ್ದು, ಇದಕ್ಕೆ ನಗರಸಭೆಯ ಜನಪ್ರತಿನಿಧಿಗಳು ಒಪ್ಪಿಗೆ ಸೂಚಿಸಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಬೀಡಿನ ಗುಡ್ಡೆಯಲ್ಲಿ ಸಂತೆ  ನಡೆದಿತ್ತು.  ಈ ಸಂದರ್ಭ ಲಾರಿಯೊಂದು ನಿಯಂತ್ರಣ ತಪ್ಪಿ ಆವರಣಗೋಡೆಗೆ ಗುದ್ದಿತ್ತು. ಅದರ ದುರಸ್ತಿಗೆ 56,000 ರೂ. ಮೊತ್ತದ ಕಾಮಗಾರಿ ನಡೆಸಲಾಗುತ್ತದೆ. -ಸುಮಿತ್ರಾ ನಾಯಕ್‌,  ಅಧ್ಯಕ್ಷರು, ನಗರಸಭೆ, ಉಡುಪಿ.

ಟಾಪ್ ನ್ಯೂಸ್

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

1-gopal

Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮೃತರ ಕುಟುಂಬಸ್ಥರು ಪಾರದರ್ಶಕ ತನಿಖೆಗೆ ಒತ್ತಾಯಿಸಿ ಮನವಿ ಸಲ್ಲಿಸಿದರು

AjekarCase: ತನಿಖೆ ದಿಕ್ಕು ತಪ್ಪುತ್ತಿದೆ: ದಿಲೀಪ್ ತಂದೆ ವಿರುದ್ದ ಬಾಲಕೃಷ್ಣ ಮನೆಯವರ ಆರೋಪ

8

Katpadi: ಭತ್ತದ ತೆನೆಯಿಂದಲೇ ಆಟೋ ರಿಕ್ಷಾ ಅಲಂಕರಿಸಿ ಸಂಭ್ರಮಿಸಿದ ಚಾಲಕ

Udupi: ಗೀತಾರ್ಥ ಚಿಂತನೆ-83: ಅಪೇಕ್ಷಿತ-ಅನಪೇಕ್ಷಿತ ವಂಶವಾಹಿಗಳು

Udupi: ಗೀತಾರ್ಥ ಚಿಂತನೆ-83: ಅಪೇಕ್ಷಿತ-ಅನಪೇಕ್ಷಿತ ವಂಶವಾಹಿಗಳು

ರಾಜ್ಯ ಸರಕಾರದ ವಿರುದ್ಧ ಮೂರು ಹಂತದ ಪ್ರತಿಭಟನೆ: ಕಿಶೋರ್‌

Congress Govt.,: ರಾಜ್ಯ ಸರಕಾರದ ವಿರುದ್ಧ ಮೂರು ಹಂತದ ಪ್ರತಿಭಟನೆ: ಕಿಶೋರ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-wqqwewq

Australia ಗೆಲುವಿಗೆ ಕಮಿನ್ಸ್‌  ನೆರವು: ಪಾಕಿಸ್ಥಾನ 203; ಆಸೀಸ್‌  8 ವಿಕೆಟಿಗೆ 204

crime

Trasi: ಕಾರು ಢಿಕ್ಕಿಯಾಗಿ ಗಾಯ; ಪ್ರಕರಣ ದಾಖಲು

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.