Manipal: ಮಾಹೆ; ಸಿಜಿಎಂಪಿ ಕೇಂದ್ರಕ್ಕೆ ಭಾರತ ಫಾರ್ಮಾ ಪ್ರಶಸ್ತಿ
Team Udayavani, Nov 27, 2024, 11:11 PM IST
ಮಣಿಪಾಲ: ಮಾಹೆ ವಿ.ವಿ.ಯ ಸಿಜಿಎಂಪಿ ಕೇಂದ್ರಕ್ಕೆ ಸತತ ಎರಡನೇ ಬಾರಿಗೆ ಔಷಧೀಯ ಗುಣಮಟ್ಟಕ್ಕೆ ನೀಡಿದ ಗಣನೀಯ ಕೊಡುಗೆಯನ್ನು ಗುರುತಿಸಿ ಪ್ರತಿಷ್ಠಿತ ಇಂಡಿಯಾ ಫಾರ್ಮಾ ಅವಾರ್ಡ್ಸ್ 2024 ಅನ್ನು ನೀಡಲಾಗಿದೆ.
ಈ ಕೇಂದ್ರವು ತನ್ನ ಪ್ರವರ್ತಕ ಉಪಕ್ರಮವಾದ ಮಣಿಪಾಲ್ ಸಿಜಿಎಂಪಿ ವಸ್ತುಸಂಗ್ರಹಾಲಯಕ್ಕಾಗಿ ಗುಣಮಟ್ಟದಲ್ಲಿ ಉತ್ಕೃಷ್ಟತೆ ವಿಭಾಗದಲ್ಲಿ ವಿಶೇಷ ಮನ್ನಣೆ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಇಂಡಿಯಾ ಫಾರ್ಮಾ ಅವಾರ್ಡ್ಸ್
2024 ಸಮಾರಂಭ ಸಿಪಿಎಚ್‌ಐ- ಪಿಎಂಇಸಿ ಇಂಡಿ ಯಾದ ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಸೆಂಟರ್‌ನಲ್ಲಿ ನಡೆಯಿತು. ಇದರಲ್ಲಿ 2 ಸಾವಿರಕ್ಕೂ ಹೆಚ್ಚು ಪ್ರದರ್ಶಕರು ಮತ್ತು 50 ಸಾವಿರ ಪ್ರತಿನಿಧಿಗಳು ಭಾಗವಹಿಸಿದ್ದರು.
ಕೇಂದ್ರ ಸಂಯೋಜಕ ಡಾ| ಗಿರೀಶ್ ಪೈ ಕೆ., ಸಹ-ಸಂಯೋಜಕ ಡಾ| ಮುದುಕೃಷ್ಣ ಬಿ.ಎಸ್. ಮಣಿಪಾಲವನ್ನು ಪ್ರತಿನಿಧಿಸಿದರು. 3 ನಿಮಿಷಗಳ ಆಕರ್ಷಕ ಪ್ರಸ್ತುತಿಯನ್ನು ನೀಡಿದರು.
ಇದು ಗುಣಮಟ್ಟ ನಿಯಂತ್ರಣ ವ್ಯವಸ್ಥೆಗಳು, ನಿಯಂತ್ರಕ ಅನುಸರಣೆ, ಆಂತರಿಕ ತರಬೇತಿ ಮತ್ತು ವೆಚ್ಚ ದಕ್ಷತೆಯಂತಹ ಪ್ರಮುಖ ನಿಯತಾಂಕಗಳನ್ನು ಎತ್ತಿ ತೋರಿಸಿತ್ತು. ತೀರ್ಪುಗಾರರ ಸದಸ್ಯರು ಈ ಉಪಕ್ರಮವನ್ನು ಅದರ ನಾವೀನ್ಯ ಮತ್ತು ದೀರ್ಘಕಾಲೀನ ಸಾಮಾಜಿಕ ಪ್ರಭಾವಕ್ಕಾಗಿ ಶ್ಲಾಘಿಸಿದರು. ಇದು ಔಷಧೀಯ ವಲಯಕ್ಕೆ ಗಮನಾರ್ಹ ಕೊಡುಗೆಯಾಗಿದೆ ಎಂದು ಗುರುತಿಸಿದರು.
ಡಾ| ಗಿರೀಶ್ ಪೈ ಕೆ. ಮತ್ತು ಡಾ| ಮುದುಕೃಷ್ಣ ಬಿ.ಎಸ್. ಅವರು ಬ್ಲೂ ಕ್ರಾಸ್ ಲ್ಯಾಬೋರೇಟರೀಸ್ ಲಿ. ಜಂಟಿ ವ್ಯವಸ್ಥಾಪಕ ನಿರ್ದೇಶಕ ಬಾಲಚಂದ್ರ ಬಾರ್ವೆ ಅವರಿಂದ ಉದ್ಯಮ ಕ್ಷೇತ್ರದ ಪ್ರಮುಖರು, ಔಷಧೀಯ ಉದ್ಯಮಿಗಳು ಮತ್ತು ಜಾಗತಿಕ ಫಾರ್ಮಾ ಕಂಪೆನಿಗಳ ಕಾರ್ಯನಿರ್ವಾಹಕರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.