ಮಾಹೆ ಮಂಗಳೂರು ಕ್ಯಾಂಪಸ್ : ಸಹಕುಲಪತಿ ಡಾ| ದಿಲೀಪ್ ನಾಯ್ಕ
Team Udayavani, Jul 3, 2020, 9:09 AM IST
ಉಡುಪಿ: ಮಂಗಳೂರಿನ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ (ಎಂಕಾಡ್ಸ್) ಡೀನ್ ಡಾ| ದಿಲೀಪ್ ಜಿ. ನಾಯ್ಕ ಅವರನ್ನು ಜು. 1ರಿಂದ ಮಾಹೆ ವಿಶ್ವವಿದ್ಯಾನಿಲಯದ ಮಂಗಳೂರು ಕ್ಯಾಂಪಸ್ ಸಹಕುಲಪತಿಯಾಗಿ ನೇಮಿಸಲಾಗಿದೆ.
ಮಣಿಪಾಲದ ದಂತ ಕಾಲೇಜಿನಲ್ಲಿ ಕಲಿತ ಡಾ| ದಿಲೀಪ್ ನಾಯ್ಕ ಅವರು 1983ರಲ್ಲಿ ಬಿಡಿಎಸ್ ಪದವಿ, 1986ರಲ್ಲಿ ಎಂಡಿಎಸ್ (ಪೀರಿಯೋಡಾಂಟಾಲಜಿ) ಪದವಿ ಪಡೆದರು. ಲಿಬಿಯಾದ ಆಲ್‌ಅರಬ್ ವೈದ್ಯಕೀಯ ವಿ.ವಿ.ಯಲ್ಲಿ ಎಂಟು ವರ್ಷ ಸೇವೆ ಸಲ್ಲಿಸಿ 2000ರಲ್ಲಿ ಮಂಗಳೂರು ಎಂಕಾಡ್ಸ್ ಸಹ ಡೀನ್ ಆಗಿ ಸೇರಿದರು. 2012ರಲ್ಲಿ ಡೀನ್ ಆಗಿ ಪದೋನ್ನತಿ ಹೊಂದಿ ಇದುವರೆಗೂ ಮುಂದುವರಿದರು. ಸುಮಾರು ಎರಡು ದಶಕಗಳ ಕಾಲ ಆಡಳಿತಾನುಭವ ಹೊಂದಿದ್ದಾರೆ. ಅವರ ನೇತೃತ್ವದಲ್ಲಿ ಮಂಗಳೂರಿನ ಎಂಕಾಡ್ಸ್ ಭಾರತದ ಶ್ರೇಷ್ಠ ಐದು ಖಾಸಗಿ ದಂತ ಕಾಲೇಜುಗಳಲ್ಲಿ ಒಂದಾಗಿ ಕಳೆದ ಮೂರು ವರ್ಷಗಳಲ್ಲಿ ಸತತ ಮಾನ್ಯತೆ ಹೊಂದಿತು. ಈ ವರ್ಷ ಎನ್‌ಐಆರ್‌ಎಫ್ ದಂತ ಕಾಲೇಜು ರ್‍ಯಾಂಕಿನಲ್ಲಿ 6ನೇ ಸ್ಥಾನವನ್ನು ಮೊತ್ತಮೊದಲಾಗಿ ಪಡೆದಿದೆ.
ಮಲೇಶ್ಯಾದ ಮೆಲಕಾ – ಮಣಿಪಾಲ ವೈದ್ಯಕೀಯ ಕಾಲೇಜಿನಲ್ಲಿ ಡೆಂಟಿಸ್ಟ್ರಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು. ಡಾ| ದಿಲೀಪ್ ಅವರು ಜರ್ಮನಿಯಲ್ಲಿ ಓರಲ್ ಇಂಪ್ಲಾಟಾಲಜಿ ತರಬೇತಿ ಪಡೆದಿದ್ದಾರೆ. 65ಕ್ಕೂ ಹೆಚ್ಚು ಪ್ರಬಂಧಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಕಾಶನಗಳು ಪ್ರಕಟಿಸಿವೆ.
ಡಾ| ದಿಲೀಪ್ ಅವರು ಇಂಡಿಯನ್ ಸೊಸೈಟಿ ಆಫ್ ಪೀರಿಯೋಡಾಂಟಾಲಜಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಸತತ ಎರಡು ಅವಧಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕದ ರಾಜೀವ್ ಗಾಂಧಿ ಆರೋಗ್ಯ ವಿ.ವಿ., ಕೇರಳದ ಆರೋಗ್ಯ ವಿ.ವಿ., ಮಂಗಳೂರಿನ ನಿಟ್ಟೆ ವಿ.ವಿ. ಅಧ್ಯಯನ ಮಂಡಳಿ ಸದಸ್ಯರಾಗಿದ್ದಾರೆ. ರೋಗ ಪತ್ತೆಯಲ್ಲಿ ತಂತ್ರಜ್ಞಾನ ಅಳವಡಿಕೆ, ರೋಗಿ ನಿರ್ವಹಣೆ ಪದ್ಧತಿಯಲ್ಲಿ ದೇಸೀ ಡಿಜಿಟೈಸೇಶನ್, ಪಠ್ಯದಲ್ಲಿ ಚಿಕಿತ್ಸಾ ಫಲಿತಾಂಶ ಆಧಾರಿತ ಶಿಕ್ಷಣ ಜಾರಿ ಮೊದಲಾದ ಸಾಧನೆಗಳನ್ನು ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.