ಟೂ ಮಾಸ್ಟರ್ಸ್,ಟ್ರೂ ಮಾಸ್ಟರ್ಸ್:ಇಕೊಸೊಫಿಕಲ್ ಎಸ್ಥಟಿಕ್ಸ್ ಮತ್ತು ಪೀಸ್ ಸ್ಟಡೀಸ್ ಆರಂಭ:ಮಾಹೆ
ನವೀನ ಸ್ನಾತಕೋತ್ತರ ಪದವಿ - ಎಂ.ಎ ಇನ್ ಆರ್ಟ್ ಅಂಡ್ ಪೀಸ್ ಸ್ಟಡೀಸ್ ಅನ್ನು ಈ ಶೈಕ್ಷಣಿಕ ವರ್ಷದಿಂದ ಪ್ರಾರಂಭ
Team Udayavani, Jun 27, 2020, 11:20 AM IST
ಮಣಿಪಾಲ್: ಅನೇಕ ಹೊಸ ಕಲಿಕಾ ವಿಷಯಗಳ ಜೊತೆಗೆ ಹೊಸಕಾಲದ ಎರಡು ಸಮಕಾಲೀನ ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್, MAHE ಪ್ರಾರಂಭಿಸುತ್ತಿದೆ. ಕಳೆದ ವರ್ಷ ಪ್ರಾರಂಭವಾದ ಇಕೊಸೊಫಿಕಲ್ ಎಸ್ಥಟಿಕ್ಸ್ ಎಂ.ಎ ಜೊತೆಗೆ, ಮತ್ತೊಂದು ನವೀನ ಸ್ನಾತಕೋತ್ತರ ಪದವಿ – ಎಂ.ಎ ಇನ್ ಆರ್ಟ್ ಅಂಡ್ ಪೀಸ್ ಸ್ಟಡೀಸ್ ಅನ್ನು ಈ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲಾಗುತ್ತಿದೆ.
ಎರಡೂ ಪದವಿಗಳಲ್ಲಿಯೂ ಕಲೆ ಮತ್ತು ತತ್ವಶಾಸ್ತ್ರವು ಸಾಮಾನ್ಯ ಎಳೆಯಾಗಿದ್ದರೂ ಇಕೊಸೊಫಿಕಲ್ ಎಸ್ಥಟಿಕ್ಸ್ ಪ್ರಾಥಮಿಕವಾಗಿ ಸಮಕಾಲೀನ ಪರಿಸರದ ಬಿಕ್ಕಟ್ಟುಗಳು ಮತ್ತು ಕಲಾ ಪ್ರಕಾರಗಳ ತಾತ್ವಿಕ ರಸಗ್ರಹಣದ ಕುರಿತ ಅಧ್ಯಯನವಾಗಿದೆ. ವ್ಯವಹರಿಸುತ್ತದೆ, ಆರ್ಟ್ ಅಂಡ್ ಪೀಸ್ ಸ್ಟಡೀಸ್ ಸಾಮಾಜಿಕ ಮತ್ತು ಅಂತರರಾಷ್ಟ್ರೀಯ ಬಿಕ್ಕಟ್ಟುಗಳ ಕುರಿತು ಹಾಗೂ ಕಲೆಯನ್ನು ಶಾಂತಿಯ ಮಾಧ್ಯಮವಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗೆಗಿನ ಕಲಿಕೆಯಾಗಿದೆ.
ಈ ಎರಡೂ ಪದವಿ ಕಾರ್ಯಕ್ರಮಗಳು ವಿಭಿನ್ನ ಸಮಕಾಲೀನ ಬಿಕ್ಕಟ್ಟುಗಳ ‘ಮೂಲ’ ಮತ್ತು ಅವುಗಳ ಒಳ, ಹೊರ ಮತ್ತು ಮುಂದಣ ದಾರಿಗಳನ್ನು ಅನ್ವೇಷಿಸುತ್ತವೆ. ಈ ಆಧಾರದ ಮೇಲೆ, ಎರಡೂ ಸ್ನಾತಕ್ಕೋತ್ತರ ಪದವಿಗಳು ವಿದ್ಯಾರ್ಥಿಗಳನ್ನು ಬರವಣಿಗೆ – ಪತ್ರಿಕೋದ್ಯಮ, ಮಾಧ್ಯಮ ಮತ್ತು ಸಂವಹನದ ಬದುಕಿಗೆ ಸಿದ್ಧಗೊಳಿಸುತ್ತದೆ.
ಇಕೊಸೊಫಿಕಲ್ ಎಸ್ಥಟಿಕ್ಸ್ ಹೊಸ ಪಠ್ಯಕ್ರಮದಲ್ಲಿ ಅನುವಾದ ಅಧ್ಯಯನ ಮತ್ತು ಯಕ್ಷಗಾನ ಅಧ್ಯಯನಗಳಂತಹ ಹೊಸ ವಿಷಯಗಳನ್ನು ಪರಿಚಯಿಸಲಾಗಿದೆಯಾದರೆ ಕೆಲವು ಸಾಮಾನ್ಯ ವಿಷಯಗಳ ಜೊತೆಗೆ, ಪೀಸ್ ಸ್ಟಡೀಸ್ ಸೊಸೈಟಿ ಮತ್ತು ಪಾಲಿಟಿ, ಅಭಿವೃದ್ಧಿ ಅಧ್ಯಯನ, ಜೆಂಡರ್ ಸ್ಟಡೀಸ್ ಮತ್ತು ಗಾಂಧಿ ಅಧ್ಯಯನಗಳಂತಹ ವಿಷಯಗಳನ್ನು ಒಳಗೊಂಡಿದೆ.
ಇಕೊಸೊಫಿಕಲ್ ಎಸ್ಥಟಿಕ್ಸ್ ಮಾನವಿಕ ಶಾಸ್ತ್ರದ ಮೇಲೆ ಹೆಚ್ಚು ಕೇಂದ್ರಿತವಾಗಿದೆ ಮತ್ತು ಪೀಸ್ ಸ್ಟಡೀಸ್ ಸಾಮಾಜಿಕ ಶಾಸ್ತ್ರದ ಮೇಲೆ ಹೆಚ್ಚು ಗಮನ ಹರಿಸುತ್ತವೆ. ಯಾವುದೇ ವಿಷಯದಲ್ಲಿ ಪದವಿ ಹೊಂದಿದವರೂ ಈ ಸ್ನಾತಕ್ಕೋತ್ತರ ಪದವಿಗೆ ಅರ್ಹರು.
ಪತ್ರಿಕೋದ್ಯಮ, ಮಾಧ್ಯಮ ಮತ್ತು ಸಂವಹನ, ಸಾಮಾಜಿಕ-ಸಾಂಸ್ಕೃತಿಕ, ರಾಜಕೀಯ ಮತ್ತು ಪರಿಸರ ವಲಯ, ಶೈಕ್ಷಣಿಕ ಮತ್ತು ಸಂಶೋಧನೆ, ನೀತಿ ಸಂಶೋಧನಾ ಸಂಸ್ಥೆಗಳು, ಅಂತರರಾಷ್ಟ್ರೀಯ ಸಂಬಂಧ ಸಂಸ್ಥೆಗಳು, ಪ್ರಕಾಶನ ಸೇರಿದಂತೆ ಹಲವು ವೃತ್ತಿಪರ ಸಾಧ್ಯತೆಗಳನ್ನು ಈ ಕ್ಷೇತ್ರ ಹೊಂದಿದೆ.
‘ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್’ (ಜಿ.ಸಿ.ಪಿ.ಎ.ಎಸ್) ಸಮಕಾಲೀನ ಬಿಕ್ಕಟ್ಟನ್ನು ನಿಭಾಯಿಸಬಲ್ಲ ಪರ್ಯಾಯ ಜ್ಞಾನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಅಂತರಶಿಕ್ಷಣ ಬೋಧನೆ ಮತ್ತು ಸಂಶೋಧನೆಯಲ್ಲಿ ತೊಡಗಿಕೊಂಡಿದೆ. ಕೇಂದ್ರವು ಸೌಂದರ್ಯಶಾಸ್ತ್ರ, ತತ್ತ್ವಶಾಸ್ತ್ರ, ಪರಿಸರ, ಪತ್ರಿಕೋದ್ಯಮ, ಜೆಂಡರ್ ಸ್ಟಡೀಸ್, ಗಾಂಧಿ ಮತ್ತು ಶಾಂತಿ ಅಧ್ಯಯನ, ಅಭಿವೃದ್ಧಿ ಅಧ್ಯಯನವನ್ನು ನಡೆಸುತ್ತಿದೆ.
ಇದು ಭಾರತ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯವು ಶ್ರೇಷ್ಠ ಸಂಸ್ಥೆ ಎಂದು ಗುರುತಿಸಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (MAHE) ನ ವಿಭಾಗವಾಗಿದೆ.ಹೆಚ್ಚಿನ ವಿವರಗಳು ವೆಬ್‌ಸೈಟ್‌ನಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.: https://manipal.edu/gandhian-centre.html
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.