ಉಡುಪಿ ಜಿಲ್ಲೆಗೊಂದೇ ಮಹಿಳಾ ಸಾಂತ್ವನ ಕೇಂದ್ರ
ಕಾರ್ಕಳದಲ್ಲಿ ಮಾತ್ರ, ಉಡುಪಿ, ಕುಂದಾಪುರ ಇಲ್ಲ
Team Udayavani, Jan 9, 2023, 7:35 AM IST
ಕುಂದಾಪುರ: ವರದಕ್ಷಿಣೆ ಕಿರುಕುಳ, ಲೈಂಗಿಕ ಹಲ್ಲೆ, ಕೌಟುಂಬಿಕ ಸಮಸ್ಯೆ ಹಾಗೂ ಪುರುಷನಿಂದ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರಿಗೆ ನೆರವಾಗಲು 2001-02ರಲ್ಲಿ ರಾಜ್ಯ ಸರಕಾರ ಆರಂಭಿಸಿದ ಸಾಂತ್ವನ ಮಹಿಳಾ ಸಹಾಯವಾಣಿ ಈಗ “ಅಸಹಾಯವಾಣಿ’ಯಾಗಿದೆ. ಅಧಿಕಾರಿಗಳ ಅಸಡ್ಡೆ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸಾಂತ್ವನ ಕೇಂದ್ರಗಳು ಬಾಗಿಲು ಹಾಕುತ್ತಿವೆ. ಈ ಕೇಂದ್ರಗಳಲ್ಲಿ ಒಬ್ಬ ಕೌನ್ಸೆಲರ್ ಮತ್ತು ಮೂವರು ಸಾಮಾಜಿಕ ಕಾರ್ಯಕರ್ತೆಯರಿದ್ದು, ನೊಂದ ಮಹಿಳೆಯರಿಗೆ ಸಾಂತ್ವನ ಹೇಳುವ ಕೆಲಸ ಮಾಡುತ್ತಿದ್ದರು. ಆದರೆ ಇಲಾಖೆಯ ಹಣಕಾಸು ಕೊರತೆಯಿಂದಾಗಿ ಈ ಕೇಂದ್ರಗಳು ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ.
ಈ ಕೇಂದ್ರಗಳನ್ನು ನಡೆಸುವುದು ಮಹಿಳಾ ಮಂಡಲಗಳೇ ಆದರೂ ಅಲ್ಲಿ ಕೆಲಸ ಮಾಡುವ ಕೌನ್ಸೆಲರ್‌ಗಳಿಗೆ ವೇತನ ನೀಡುವುದು ಸರಕಾರ. ಬಿಎಸ್‌ಡಬ್ಲ್ಯು ಆದರೆ 10 ಸಾವಿರ, ಎಂಎಸ್‌ಡಬ್ಲೂé ಆದರೆ 15 ಸಾವಿರ ರೂ.ಗಳಂತೆ ಒಟ್ಟು 45 ಸಾವಿರ ರೂ. ವೇತನ ನೀಡಲಾಗುತ್ತದೆ. ಅನೇಕ ಬಾರಿ ತಿಂಗಳಾನುಗಟ್ಟಲೆ ಇವರಿಗೆ ವೇತನ ಪಾವತಿಯಾಗದ ಸ್ಥಿತಿ ಇತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾದ್ದ ವೇಳೆ ಆನೆಗುಡ್ಡೆಗೆ ಬಂದಿದ್ದಾಗ ರಾಧಾದಾಸ್ ನೀಡಿದ ಮನವಿಯಂತೆ 9 ತಿಂಗಳ ವೇತನ, ಅದಕ್ಕೂ ಮುನ್ನ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ 4 ತಿಂಗಳ ವೇತನ ಏಕಗಂಟಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಅನಂತರ ನಿಯಮಿತವಾಗಿ ವೇತನ ಪಾವತಿಯಾಗಿಲ್ಲ.
ಒನ್ ಸ್ಟಾಪ್
ಕೇಂದ್ರ ಸರಕಾರದ ಸಖೀ ಒನ್ ಸ್ಟಾಪ್ ಸೆಂಟರ್ ಯೋಜನೆ ಲೈಂಗಿಕ ಮತ್ತು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ವೈದ್ಯಕೀಯ ಚಿಕಿತ್ಸೆ, ಕಾನೂನು ನೆರವು, ಸಲಹೆ ನೀಡುವ ಉದ್ದೇಶ ಹೊಂದಿದ್ದರೂ ಕರ್ನಾಟಕದಲ್ಲಿ ಅದು ಪೂರ್ಣ ಪ್ರಮಾಣದಲ್ಲಿ ಕಾರ್ಯ ಮಾಡುತ್ತಿಲ್ಲ. ಜಿಲ್ಲೆಗೆ ಕೇವಲ ಒಂದು ಕೇಂದ್ರ ಇರುವ ಕಾರಣ ಎಲ್ಲರಿಗೂ ಸುಲಭವಾಗಿ ನೆರವು ಸಿಗಲು ಸಾಧ್ಯವಾಗುತ್ತಿಲ್ಲ.
ಸ್ಥಗಿತ
ರಾಜ್ಯದಲ್ಲಿ ಈಗ ಒಟ್ಟು 119 ಕೇಂದ್ರಗಳಿದ್ದು, 2021ರಲ್ಲಿ 71 ತಾಲೂಕುಗಳ ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಲಾ ಗಿತ್ತು. ಬಳಿಕ 59 ಸಾಂತ್ವನ ಕೇಂದ್ರಗಳನ್ನು ಮುಂದು ವರಿಸಲಾಯಿತು. ಕುಂದಾಪುರದ ಸಾಂತ್ವನ ಕೇಂದ್ರವು ಮೂಕಾಂಬಿಕಾ ಮಹಿಳಾ ಮಂಡಲಗಳ ಒಕ್ಕೂಟ, ಉಡುಪಿ ಕೇಂದ್ರವು ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಮೂಲಕ ಕಾರ್ಯಾಚರಿಸುತ್ತಿತ್ತು. 2021 ಆಗಸ್ಟ್‌ನಿಂದ ಕುಂದಾಪುರ ಕೇಂದ್ರ ಸ್ಥಗಿತವಾಗಿದ್ದು ಈಗ ಉಡುಪಿ ಕೇಂದ್ರವೂ ಇಲ್ಲ. ಕಾರ್ಕಳದಲ್ಲಿ ತಾ| ಮಹಿಳಾ ಮಂಡಲಗಳ ಒಕ್ಕೂಟ ನಡೆಸುತ್ತಿರುವ ಕೇಂದ್ರ ಇದೆ. ದ.ಕ.ದಲ್ಲಿ ಬಂಟ್ವಾಳ, ಪುತ್ತೂರು ಜನಶಿಕ್ಷಣ ಟ್ರಸ್ಟ್, ಬೆಳ್ತಂಗಡಿ ಮಹಿಳಾ ಮಂಡಲಗಳ ಒಕ್ಕೂಟ, ಸುಳ್ಯ ದಲ್ಲಿ ಮಹಿಳಾ ಸಮಾಜ ನಡೆಸುತ್ತಿವೆ.
ಯಾಕೆ ಬೇಕು?
ಕುಂದಾಪುರದಲ್ಲಿ 8 ವರ್ಷಗಳಲ್ಲಿ 10 ಸಾವಿರದಷ್ಟು ಪ್ರಕರಣಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಅಂತರ್ಜಾತಿ, ಪ್ರೇಮ ವಿವಾಹ ಎಂದು 150ಕ್ಕೂ ಹೆಚ್ಚು ಮದುವೆ ಮಾಡಿಸಲಾಗಿದೆ. 100ಕ್ಕೂ ಹೆಚ್ಚು ಶವಸಂಸ್ಕಾರ ನಡೆಸಲಾಗಿದೆ. ಪ್ರೀತಿಸಿ ಕೈ ಕೊಟ್ಟವರ ರಾಜೀ ಸಂಧಾನಗಳು ನಡೆದಿವೆ. ದೌರ್ಜನ್ಯ, ಅತ್ಯಾಚಾರ ಪ್ರಕರಣಗಳಲ್ಲಿ ನ್ಯಾಯ ದೊರಕಿಸಿಕೊಡಲಾಗಿದೆ ಎನ್ನುತ್ತಾರೆ ಈವರೆಗೆ ಕೇಂದ್ರ ನಡೆಸುತ್ತಿದ್ದ ಮೂಕಾಂಬಿಕಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ರಾಧಾದಾಸ್ ಹಾಗೂ ಕಾರ್ಯದರ್ಶಿ ಜಯಂತಿ ಐತಾಳ.
ಪ್ರತೀ ಕೇಂದ್ರದಲ್ಲಿ ತಿಂಗಳಲ್ಲಿ 15-20 ಹೊಸ ಪ್ರಕರಣಗಳನ್ನು ಇತ್ಯರ್ಥಗೊಳಿಸುವುದಲ್ಲದೆ 250ರಿಂದ 300 ಕರೆಗಳ ಮೂಲಕ ನೊಂದ ಮಹಿಳೆಯರನ್ನು ಸಂತೈಸಿ ಅನ್ಯೋನ್ಯವಾಗಿ ಜೀವಿಸುವಂತೆ ಮಾಡಲಾಗುತ್ತದೆ. ಆತ್ಮಹತ್ಯೆಗೆ ಮುಂದಾದ ಹೆಣ್ಣು ಮಕ್ಕಳಲ್ಲಿ ಧೈರ್ಯ ತುಂಬಿ ದಾನಿಗಳಿಂದ ಧನಸಹಾಯದ ಮೂಲಕ ಉನ್ನತ ವಿದ್ಯಾಭ್ಯಾಸ ಕಲ್ಪಿಸಿದ, ಪತಿ ಇನ್ನೊಂದು ಮದುವೆಯಾಗಲು ಹೊರಟಾಗ ಮಕ್ಕಳೊಂದಿಗೆ ಆಶ್ರಯ ಬೇಡಿ ಬಂದಾಕೆಗೆ ನ್ಯಾಯ, ಅಸಹಾಯಕರಾಗಿ ಅಲೆಯುತ್ತಿದ್ದ ಮಹಿಳೆಯರ ರಕ್ಷಣೆ, ಚಿಕಿತ್ಸೆ ಮೊದಲಾದ ಹಲವಾರು ಘಟನೆಗಳಿವೆ. “ಸಾಂತ್ವನ’ ಪಡೆದ ಅದೆಷ್ಟೋ ಮಹಿಳೆಯರು ಕೇಂದ್ರವನ್ನು ತಮ್ಮ ಬದುಕು ರೂಪಿಸಿದ ತವರು ಮನೆ ಎಂದೇ ಭಾವಿಸುತ್ತಿದ್ದಾರೆ.
ಕುಂದಾಪುರಕ್ಕೆ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನವರು ಸಾಂತ್ವನ ಕೇಂದ್ರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಕೇಂದ್ರ ಕಚೇರಿಗೆ ಕಳುಹಿಸಿಕೊಡಲಾಗಿದೆ. ಶೀಘ್ರ ಮಂಜೂರಾಗಬಹುದು.
– ಶ್ವೇತಾ ಸಂತೋಷ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನಾಧಿಕಾರಿ, ಕುಂದಾಪುರ
– ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.