“ಲಾಭದ ಜತೆ ಗ್ರಾಹಕರ ಹಿತರಕ್ಷಣೆ ಕಾಯ್ದುಕೊಳ್ಳಿ’
Team Udayavani, Mar 20, 2018, 8:45 AM IST
ಕಟಪಾಡಿ: ಗ್ರಾಹಕರು ದೋಷಪೂರಿತ ವಸ್ತು ಕೊಂಡು ಕೊಂಡಾಗ ನ್ಯಾಯ ಪಡೆಯಲು ಬಳಕೆ ದಾರರಿಗೆ ಕಾನೂನು ರಕ್ಷಣೆ ನೀಡುತ್ತದೆ ಎಂದು ಉಡುಪಿ ಬಳಕೆದಾರರ ವೇದಿಕೆ ಸದಸ್ಯ ಯು. ಗಿರಿಧರ ಕಾಮತ್ ಹೇಳಿದರು.
ಅವರು ವಿಶ್ವ ಗ್ರಾಹಕರ ದಿನಾಚರಣೆ ಅಂಗವಾಗಿ ಉದ್ಯಾವರ ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ಗ್ರಾಹಕರ ಕ್ಲಬ್ ಆಶ್ರಯದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದರು.
ಮಾರಾಟಗಾರರು ತಮ್ಮ ಲಾಭದ ಜೊತೆಗೆ ಗ್ರಾಹಕರ ಹಿತರಕ್ಷಣೆಯನ್ನೂ ಕಾಯ್ದುಕೊಳ್ಳಬೇಕು. ಒಂದು ವೇಳೆ ಬಳಕೆ
ದಾರರಿಗೆ ಸಮಸ್ಯೆ ಉಂಟಾದಾಗ ಪರಿಹರಿಸಿಕೊಳ್ಳಲು ಬಳಕೆದಾರರ ವೇದಿಕೆಯ ನೆರವು ಪಡೆದುಕೊಳ್ಳ ಬಹುದು. ಗ್ರಾಹಕರಿಗೆ ಆರು ತಿಂಗಳೊಳಗೆ ಕ್ಷಿಪ್ರ ಪರಿಹಾರ ದೊರೆಯುತ್ತದೆ ಎಂದರು. ಮುಖ್ಯ ಅತಿಥಿÂ ಪ್ರತಾಪ್ ಕುಮಾರ್ ಉದ್ಯಾವರ ಆಧುನಿಕ ಜಾಹೀರಾತು ಯುಗದಲ್ಲಿ ಸುಳ್ಳು ಜಾಹೀರಾತಿಗೆ ಮರುಳಾಗದೆ ಗ್ರಾಹಕರು ಜಾಗೃತರಾಗಿರಬೇಕು ಎಂದರು.ರೋಟರಿ ಕ್ಲಬ್ ವಲಯ ಸೇನಾನಿ ಕೆ.ಟಿ.ನಾಯಕ್, ಗ್ರಾಹಕರ ಕ್ಲಬ್ ಮಾರ್ಗದರ್ಶಕ ಶಿಕ್ಷಕಿ ಪಂಚಾಕ್ಷರಿ ಎ.ವಿ. ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಮೂಕಾಂಬೆ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಸುಬ್ರಹ್ಮಣ್ಯ ಸ್ವಾಗತಿಸಿದರು. ವೀರೇಶ್ ವಂದಿಸಿದರು. ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
America: ಎಚ್-1ಬಿ ವೀಸಾ ವ್ಯವಸ್ಥೆ ಸುಧಾರಣೆ ಬೇಕು: ಒಂದೇ ದಿನದಲ್ಲಿ ಮಸ್ಕ್ ಉಲ್ಟಾ!
Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿದ ಕೆಇಎ
ಫ್ರಾನ್ಸ್ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್ ಫಿಲಿಯೋಜಾ ನಿಧನ
ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್
Mangaluru; ಪ್ರತ್ಯೇಕ ಚೆಕ್ಬೌನ್ಸ್ ಪ್ರಕರಣ: ಇಬ್ಬರು ಖುಲಾಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.