ಹಣ ಗಳಿಸುವುದೇ ಸಾಧನೆ ಅಲ್ಲ: ಸಿಎಂ ಜೋಶಿ
ಲೆಕ್ಕಪರಿಶೋಧಕರ ಉಡುಪಿ ಶಾಖೆ: ಕಾರ್ಯಾಗಾರ
Team Udayavani, Nov 24, 2019, 5:02 AM IST
ಉಡುಪಿ: ಅರ್ಥವ್ಯವಸ್ಥೆ ನಾವು ನಮ್ಮ ದೇಶದಲ್ಲಿ ಅಳವಡಿಸಿಕೊಂಡಿರುವ ಪದ್ಧತಿ. ಕೌಟಿಲ್ಯನ ಕಾಲದಲ್ಲೂ ಈ ವ್ಯವಸ್ಥೆಯ ಬಗ್ಗೆ ಉತ್ತಮ ಅಭಿಪ್ರಾಯವಿತ್ತು. ಆದರೆ ನಮ್ಮ ಆಸೆ-ಆಕಾಂಕ್ಷೆ ಮೀರಿ ಆದಾಯ ಗಳಿಸಿ ತೆರಿಗೆ ವಂಚಿಸಿದರೆ ಮಾತ್ರ ಇಡಿ, ಐಟಿ ಸಹಿತ ವಿವಿಧ ಇಲಾಖೆಗಳಿಂದ ತೊಂದರೆ ಅನುಭವಿಸಬೇಕಾದೀತು ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಸಿಎಂ ಜೋಶಿ ಅಭಿಪ್ರಾಯಪಟ್ಟರು.
ಲೆಕ್ಕಪರಿಶೋಧಕರ ಉಡುಪಿ ಶಾಖೆಯಲ್ಲಿ ಶನಿವಾರ ನಡೆದ “ಸರ್ವೆ, ಸರ್ಚ್ ಆ್ಯಂಡ್ ಸೀಝರ್ -ಪೋಸ್ಟ್ ಸರ್ವೇ ಎಸೆಸ್‌ಮೆಂಟ್’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಧನೆ ಮಾಡುವ ಭರದಲ್ಲಿ ನಾವು ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ಆ ಆಸೆ ಅಧಿಕವಾದಾಗ ಮಾತ್ರ ಸಮತೋಲನ ಕಾಯ್ದುಕೊಳ್ಳಲು ಅಸಮರ್ಥರಾಗುತ್ತೇವೆ. ಈ ಮೂಲಕ ಹಣ ಗಳಿಸು
ವುದೇ ಸಾಧನೆ ಅಂದುಕೊಂಡವರು ಪರಿತಪಿಸ ಬೇಕಾಗುತ್ತದೆ ಎಂದರು.
ಆಧುನಿಕ ಜಗತ್ತಿಗೆ ಹೊಂದಿಕೊಳ್ಳಿ
ಆಧುನಿಕ ಜಗತ್ತು ಇಂದು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ನಾವು ಕೂಡ ಅದಕ್ಕೆ ಹೊಂದಿಕೊಂಡು ಮುಂದುವರಿಯಬೇಕು. ತಂತ್ರಜ್ಞಾನಗಳ ಪರಿಣಾಮ ಕಾರಿ ಬಳಕೆಯ ಮೂಲಕ ಪೈಪೋಟಿಯ ಜೀವನಕ್ಕೆ ಒಗ್ಗಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸಿಎಂ ಜೋಶಿ ಅವರನ್ನು ಸಮ್ಮಾನಿಸಲಾಯಿತು. ಹಿರಿಯ ವಕೀಲರಾದ ಎ. ಶಂಕರ್, ವಿ. ನರೇಂದ್ರ ಶರ್ಮ ಅವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಸಂಸ್ಥೆಯ ಕಾರ್ಯದರ್ಶಿ ಕವಿತಾ ಎಂ. ಪೈ ಉಪಸ್ಥಿತರಿದ್ದರು. ಸಂಸ್ಥೆಯ ಚೇರ್ಮನ್ ನರಸಿಂಹ ನಾಯಕ್ ಸ್ವಾಗತಿಸಿ, ಆ್ಯಂಡ್ರಿಯಾ ಲಿವೀಸ್ ಕಾರ್ಯಕ್ರಮ ನಿರೂಪಿಸಿದರು.
ಗಳಿಕೆಯೇ ಗುರಿಯಾಗದಿರಲಿ
ಜೀವನದಲ್ಲಿ ಗುರಿ ತಲುಪುವ ಸಾಧನೆ ಇರಬೇಕು. ಆದರೆ ಹಣ ಗಳಿಕೆಯೇ ನಮ್ಮ ಸಾಧನೆಯಾಗಬಾರದು. ಇದು ಅಪರಿಮಿತವಾದರೆ ಇಲಾಖೆಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಯಾರಿಗೂ ತೊಂದರೆ ಆಗದ ರೀತಿಯಲ್ಲಿ ತೆರಿಗೆ ಸಂಗ್ರಹವೂ ನಡೆಯಬೇಕು ಎಂದು ಸಿಎಂ ಜೋಶಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.