ಮಲ್ಪೆ : ಅಲ್ಲಲ್ಲಿ ತ್ಯಾಜ್ಯ ರಾಶಿ; ಸಾಂಕ್ರಾಮಿಕ ರೋಗ ಭೀತಿ…!
Team Udayavani, Jun 14, 2018, 6:00 AM IST
ಮಲ್ಪೆ: ಇಲ್ಲಿಯ ನಗರಸಭೆ ಗ್ರಾ.ಪಂ. ವ್ಯಾಪ್ತಿಯ ಸುತ್ತಮುತ್ತ ತ್ಯಾಜ್ಯದ್ದೇ ಸಮಸ್ಯೆ. ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ, ಚರಂಡಿ, ಖಾಲಿ ಇರುವ ಜಾಗ, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯರಾಶಿ ತುಂಬಿಕೊಂಡು ಮಳೆ ನೀರಿಗೆ ಕೊಳೆತು ಸಾಂಕ್ರಾಮಿಕ ರೋಗ ಹರಡುವ ಭೀತಿ ಹೆಚ್ಚಾಗಿದೆ.
ತ್ಯಾಜ್ಯ ವಿಲೇವಾರಿಗೆ ನಿಗದಿತ ಸ್ಥಳವಿಲ್ಲದೆ ಅದನ್ನು ಎಲ್ಲೆಂದರಲ್ಲಿ ಎಸೆಯ ಲಾಗುತ್ತಿದ್ದು, ಮಳೆಗಾಲದಲ್ಲಿ ಮೂಗು ಮುಚ್ಚಿಕೊಂಡೇ ನಡೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಗರಸಭಾ ವಾಪ್ತಿಯಲ್ಲಿ ಕಸ ವಿಲೇವಾರಿ ಮಾಡುವ ವಾಹನ ಬಂದು ಖಾಲಿ ಮಾಡಿದರೂ ದಿನ ಬೆಳಗಾದರೆ ಅಷ್ಟೇ ಕಸದ ರಾಶಿ ಮತ್ತೆ ಸೇರಿಕೊಳ್ಳುತ್ತದೆ.
ಎಲ್ಲೆಲ್ಲಿ ತ್ಯಾಜ್ಯರಾಶಿ?
ಪ್ರಮುಖವಾಗಿ ಮಲ್ಪೆ ನಗರದ ಮಧ್ಯೆ ಹಳೆ ಪೋಸ್ಟ್ ಆಫೀಸ್‌ನ ಬಳಿ, ಕಲ್ಮಾಡಿ ಚರ್ಚ್ ಎದುರು ರಸ್ತೆ ಎಡಬದಿ,
ಪಂದುಬೆಟ್ಟು ಮಸೀದಿ ಬಳಿ, ಕೊಡವೂರಿನಿಂದ ಸಿಟಿಜನ್ ಸರ್ಕಲ್ ಮಾರ್ಗ ಮಧ್ಯೆ, ಲಕ್ಷ್ಮೀನಗರ, ಕೆಳಾರ್ಕಳಬೆಟ್ಟು ಪೊಟ್ಟುಕೆರೆ ರಸ್ತೆ, ಅಂಬಲಪಾಡಿ ಕಪ್ಪೆಟ್ಟು ,ಮಜ್ಜಿಗೆ ಪಾದೆಬಳಿ ತ್ಯಾಜ್ಯಗಳ ರಾಶಿ ನಿತ್ಯ ಕಂಡು ಬರುತ್ತಿದೆ.
ಫಿಶ್‌ಮಿಲ್ ಪಕ್ಕದ ರಸ್ತೆಯಲ್ಲಿ ಇಲ್ಲಿನ ಫಿಶ್‌ಮಿಲ್ ರಸ್ತೆ ಬದಿಯಲ್ಲಿ ಪರಿಸರದ ಸುತ್ತಮುತ್ತಲಿರುವ ಕಸಕಡ್ಡಿ, ಪ್ಲಾಸ್ಟಿಕ್, ಅಂಗಡಿ ಹೊಟೇಲ್‌ಗಳ ತ್ಯಾಜ್ಯ ಗಳನ್ನು ಇಲ್ಲಿಗೆ ತಂದು ಸುರಿಯಲಾಗುತ್ತಿದೆ. ವಿಲೇವಾರಿಗೆ ಒಂದೆರಡು ದಿನ ತಡವಾದರೆ ತ್ಯಾಜ್ಯದ ಗುಡ್ಡೆಯಾಗಿ ಪರಿವರ್ತನೆಗೊಂಡು ಇಡೀ ಪರಿಸರ ದುರ್ನಾತ ಬೀರುತ್ತಿದೆ. ದಿನನಿತ್ಯ ನಾಯಿ, ಕಾಗೆಗಳು ತ್ಯಾಜ್ಯವನ್ನು ಎಳೆದಾಡುತ್ತಿರುತ್ತವೆ. ಮಳೆ ಬಂದಾಗ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ.
ಎಚ್ಚರಿಕೆ ಬೋರ್ಡ್‌ನಡಿ ಹೆಚ್ಚು ತ್ಯಾಜ್ಯ
“ಇಲ್ಲಿ ತ್ಯಾಜ್ಯ ಎಸೆಯಬಾರದು’ಎಂಬ ನಾಮಫಲಕ ಅಳವಡಿಸಿದ ಕೆಳಗೆಯೇ ತ್ಯಾಜ್ಯ ಬೀಳುವುದು ಹೆಚ್ಚು. ನಗರಸಭೆ ಮನೆ ಮನೆಯ ಕಸವನ್ನು ಸಂಗ್ರಹಿಸುವ ಕಾರ್ಯವನ್ನು ಸ್ವಸಹಾಯ ಗುಂಪು ಗಳಿಗೆ ವಹಿಸಿಕೊಟ್ಟಿದೆ ಯಾದರೂ ಜನರು ರಸ್ತೆ ಬದಿಯಲ್ಲಿ ಕಸ ಎಸೆದು ಹೋಗುವುದು ಮಾಮೂಲಿ. ಎಲ್ಲಿ ಒಂದೆರಡು ಕಸ ಬೀಳುತ್ತೂ ಮಾರನೆದಿನವೇ ಅಲ್ಲಿ ಕಸದ ಗುಡ್ಡೆ ನಿರ್ಮಾಣವಾಗುತ್ತದೆ.
ನಾವೇ ಸಹಕರಿಸದಿದ್ದರೆ..
ಇದರ ವಿಲೇವಾರಿ ಸ್ಥಳೀಯಾಡಳಿತ ಹೊಣೆಯೇನೋ ನಿಜ. ಆದರೆ ಸಾರ್ವಜನಿಕರು ಕೈ ಜೋಡಿಸದೆ ಇದ್ದರೆ ಸಮಸ್ಯೆ ಬಗೆಹರಿಯದು. ಆಡಳಿತ ನಮ್ಮ ಮನೆಗೆ ಬಂದು ಕಸ ತೆಗೆದುಕೊಂಡು ಹೋಗುತೇ¤ವೆ ಎಂದರೂ ನಾವು ಅವರ
ಕೈಗೆ ಕಸ ಕೊಡಲು ಹಿಂದೆ ಮುಂದೆ ನೋಡುತ್ತೇವೆ. ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವತ್ಛವಾಗಿಡುತ್ತಿದ್ದ ಪ್ರಕೃತಿಯನ್ನು ಆರಾಧಿಸು ತ್ತಿದ್ದ ನಮ್ಮ ಪೂರ್ವಜರ ಆಚಾರ ವಿಚಾರ, ಸಂಪ್ರದಾಯವನ್ನು ಎಲ್ಲರೂ ಮರೆತಂತಿದೆ. ಈ ಬಗ್ಗೆ ನಾಗರಿಕರಲ್ಲಿ ಜಾಗೃತಿ ಇನ್ನೂ ಮೂಡಿಲ್ಲ. ಕಸ ಎಸೆದರೆ ಕಟ್ಟುನಿಟ್ಟಿನ ದಂಡ ವಿಧಿಸುವ ಕಾರ್ಯವಾಗಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.
ಜನರಿಗೆ ನಾಗರಿಕ ಪ್ರಜ್ಞೆ ಮೂಡಲಿ
ಪ್ರಜ್ಞಾವಂತ ನಾಗರಿಕರೇ ಅರೆಪ್ರಜ್ಞರಾಗಿ ತ್ಯಾಜ್ಯಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತಂದು ಸುರಿಯುವುದು ಸಮಸ್ಯೆ ತಂದೊಡ್ಡಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುತ್ತದೆ. ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು.
– ಲಕ್ಷ್ಮಣ ಮೈಂದನ್
ಬೈಲಕರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.