ಮಲ್ಪೆ ಬೀಚ್ : ಮಹಿಳೆಯ ರಕ್ಷಣೆ
Team Udayavani, Jun 27, 2022, 12:16 AM IST
ಮಲ್ಪೆ : ವಾರಾಂತ್ಯ ರಜೆ ಮತ್ತು ಶುಭ್ರ ವಾತಾವರಣದ ಕಾರಣ ರವಿವಾರ ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಶನಿವಾರ ಮಳೆ ಇದ್ದರೂ ಪ್ರವಾಸಿಗರ ವಾಹನಗಳ ಸಾಲು ಮಲ್ಪೆಗೆ ಬಂದಿವೆ.
ಶುಕ್ರವಾರದಿಂದ ಗಾಳಿ ಒಂದೇ ಸಮನೆ ಬೀಸುತ್ತಿದ್ದು, ಸಮುದ್ರ ಪ್ರಕ್ಷುಬ್ಧಗೊಂಡಿತ್ತು. ಯಾರೂ ಕೂಡ ನೀರಿಗೆ ಇಳಿಯದಂತೆ ಜೀವ ರಕ್ಷಕ ತಂಡ ನಿಗಾ ವಹಿಸಿತ್ತು. ಬೀಚ್‌ಗೆ ಇಳಿಯುವಲ್ಲಿ ನೆಟ್ ಆಳವಡಿಸಿ ಪ್ರವಾಸಿಗರು ನೀರಿಗಿಳಿದು ಅಪಾಯಕ್ಕೀಡಾಗದಂತೆ ಎಚ್ಚರ ವಹಿಸಲಾಗುತ್ತಿದೆ. ಆದರೆ ರವಿವಾರ ಸಂಜೆ ಪುಣೆ ಮೂಲದ ಮಹಿಳೆ ನೀರಿಗಿಳಿದು ಅಪಾಯವನ್ನು ಆಹ್ವಾನಿಸಿದ್ದು ಜೀವರಕ್ಷಕರು ಆಕೆಯನ್ನು ರಕ್ಷಿಸಿದರು.
ಪುಣೆಯ ಮಹಿಳೆ ಸಂಜೆ 5ರ ವೇಳೆಗೆ ಮಗನೊಂದಿಗೆ ಕಡಲ ತೀರಕ್ಕೆ ಬಂದಿದ್ದು ಆತನನ್ನು ಬದಿಯಲ್ಲಿ ನಿಲ್ಲಿಸಿ ತಾನು ನೀರಿಗಿಳಿದು ಮುಂದೆ ಮುಂದೆ ಹೋಗುತ್ತಿದ್ದಳು. ತತ್‌ಕ್ಷಣ ಗಮನಿಸಿದ ಜೀವರಕ್ಷಕರು ಧಾವಿಸಿ ಆಕೆಯನ್ನು ದಡ ಸೇರಿಸಿದರು. ಆಕೆ ಮತ್ತೆ ಅದೇ ಪ್ರಯತ್ನಕ್ಕೆ ಮುಂದಾದಾಗ ಆಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಹಿಳೆಯು ಸ್ವಲ್ಪ ಮಟ್ಟಿನ ಮಾನಸಿಕ ಅಸ್ವಸ್ಥೆಯಂತೆ ವರ್ತಿಸುತ್ತಿದ್ದು, ಹಿಂದಿ ಭಾಷೆ ಮಾತನಾಡುತ್ತಾಳೆ. ತನ್ನ ಹೆಸರನ್ನು ಹೇಳುತ್ತಿಲ್ಲ, ಊರು ಪುಣೆ ಎಂದಷ್ಟೇ ಹೇಳುತ್ತಾಳೆ. ಆಕೆ ಆತ್ಮಹತ್ಯೆಗೆ ಯತ್ನಿಸಿದಂತಿದೆ ಎಂದು ಬೀಚ್ ನಿರ್ವಾಹಕ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.