ಮಲ್ಪೆ ಬೀಚ್: ಇಬ್ಬರ ರಕ್ಷಣೆ ; ಮುಂದುವರಿದ ಜನಸಂದಣಿ
Team Udayavani, Jun 6, 2022, 12:20 AM IST
ಮಲ್ಪೆ : ವಾರಾಂತ್ಯ ಹಾಗೂ ಬಿಸಿಲಿನ ವಾತಾರಣದ ಹಿನ್ನೆಲೆಯಲ್ಲಿ ಶನಿವಾರ ಮತ್ತು ರವಿವಾರ ಮಲ್ಪೆ ಬೀಚ್‌ನಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡು ಬಂದಿದ್ದಾರೆ. ಸ್ಥಳೀಯರು ಮಾತ್ರವಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಿಂದ ದೇವಸ್ಥಾನದ ಪ್ರವಾಸದ ಜತೆಗೆ ಮಲ್ಪೆ ಬೀಚ್‌ಗೂ ಜನರು ಕುಟುಂಬ ಸಮೇತರಾಗಿ ಬಂದು ಸಮುದ್ರದಲ್ಲಿ ಆಟವಾಡಿ ಸಂಭ್ರಮಪಟ್ಟರು.
ಇದೇ ವೇಳೆ ಬೀಚ್‌ನಲ್ಲಿ ಆಡುತ್ತಿದ್ದ ವೇಳೆ ಸಮುದ್ರದ ಅಲೆಗೆ ಕೊಚ್ಚಿ ಹೋಗುತ್ತಿದ್ದ ಇಬ್ಬರನ್ನು ರಕ್ಷಿಸಲಾಗಿದೆ.
ಮುಂದಿನ ದಿನಗಳಲ್ಲಿ ಮಳೆ ಬಂದರೆ ಬೀಚ್ ಕಡೆಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಕೆಲವರು ಬಂದರೆ ಇನ್ನು ಕೆಲವರು ಸೈಂಟ್ ಮೆರೀಸ್‌ಗೆಂದು ಬಂದವರು ಅಲ್ಲಿ ಬೋಟು ಯಾನ ಇಲ್ಲವೆಂದು ಗೊತ್ತಾಗಿ ಬೀಚ್ ಕಡೆಗೆ ಬರುತ್ತಿದ್ದಾರೆ ಎನ್ನಲಾಗಿದೆ. ರವಿವಾರ ಮಧ್ಯಾಹ್ನದ ಬಳಿಕ ಪ್ರವಾಸಿಗರ ವಾಹನಗಳು ಮಲ್ಪೆ ಕಡೆಗೆ ಅಗಮಿಸಿದ್ದು, ವಾಹನಗಳ ಸರತಿ ಸಾಲುಗಳು ಕಂಡು ಬಂದವು. ಆದಿಉಡುಪಿ ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಇಬ್ಬರು ಯುವಕರ ರಕ್ಷಣೆ
ಮಲ್ಪೆ ಬೀಚ್‌ನಲ್ಲಿ ಆಟವಾಡುತ್ತಿದ್ದ ವೇಳೆ ಸಮುದ್ರದ ಅಲೆಗೆ ಕೊಚ್ಚಿ ಹೋಗುತ್ತಿದ್ದ ಉತ್ತರ ಕರ್ನಾಟಕದವರೆನ್ನಲಾದ ಇಬ್ಬರನ್ನು ರಕ್ಷಿಸಿದ ಘಟನೆ ನಡೆದಿದೆ. ರವಿವಾರ ಮಧ್ಯಾಹ್ನ ಉತ್ತರ ಕರ್ನಾಟಕದವರೆನ್ನಲಾದ ನಾಲ್ವರು ಬೀಚ್‌ಗೆ ಬಂದಿದ್ದು ನೀರಿಗಿಳಿದು ಚೆಂಡಾಟ ಆಡುತ್ತಿದ್ದರು. ಜೀವರಕ್ಷಕರು ಎಚ್ಚರಿಕೆಯನ್ನು ನೀಡಿದ್ದರೂ ಆದನ್ನು ಕೇಳಿಸದೇ ಆಟದಲ್ಲಿ ನಿರತರಾಗಿದ್ದರು. ಆಡುತ್ತ ಮುಂದೆ ಹೋದ ಇಬ್ಬರೂ ನೀರಿನ ಸೆಳೆತಕ್ಕೆ ಸಿಕ್ಕರು. ತತ್‌ಕ್ಷಣ ಜೀವರಕ್ಷಕರು ನೀರಿಗಿಳಿದು ಈ ಇಬ್ಬರನ್ನು ರಕ್ಷಿಸಿದ್ದಾರೆ.
ಸುಳಿಯಾಕಾರದಲ್ಲಿ ಅಲೆ
ಮಲ್ಪೆ ಬೀಚ್‌ನಲ್ಲಿ ಈ ಬಗ್ಗೆ ಹಲವು ಸಲ ಲೈಫ್‌ಗಾರ್ಡ್ ಎಚ್ಚರಿಕೆ ನೀಡಿದರೂ ಪ್ರವಾಸಿಗರೂ ನಿರ್ಲಕ್ಷ್ಯ ಮಾಡುತ್ತಿದ್ದರೆ. ಕಡಲಿಗಿಳಿಯದಂತೆ ಬುದ್ದಿವಾದ ಹೇಳಲು ಬಂದರೆ ಜೀವರಕ್ಷರಿಗೆ ಜೋರು ಮಾಡುತ್ತಾರೆ. ಚಂಡಮಾರುತದ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಕೆಲವು ಕಡೆ ಹೊಂಡಗಳು ಬಿದ್ದಿವೆ. ಆ ಭಾಗದಲ್ಲಿ ಸುಳಿಯಾಕಾರದಲ್ಲಿ ಅಲೆಗಳು ಏಳುತ್ತವೆ. ಅದು ಅಪಾಯಕಾರಿ ಸ್ಥಳವೆಂದು ಪ್ರವಾಸಿಗರಿಗೆ ಗೊತ್ತಾಗುವುದಿಲ್ಲ ಎನ್ನುತ್ತಾರೆ ಬೀಚ್ ನಿರ್ವಾಹಕ ಸುದೇಶ್ ಶೆಟ್ಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.